ಪಂಪ್ವೆಲ್ ಪ್ಲೈ ಓವರ್ ಕಳಪೆ ಕಾಮಗಾರಿ ತನಿಖೆ ನಡೆಸಿ – ಐವನ್ ಡಿಸೋಜಾ
ಮಂಗಳೂರು: ಪಂಪ್ವೆಲ್ ಫ್ಲೈ ಓವರ್ ಕಳಪೆ ಕಾಮಗಾರಿಯ ವಿರುದ್ದ ತನಿಖೆ ನಡೆಸುವುದರೊಂದಿಗೆ ಗುತ್ತಿಗೆದಾರರಿಗೆ ಹಣ ಪಾವತಿಸದಂತೆ ಲೋಕೋಪಯೋಗಿ ಇಲಾಖೆಗೆ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ದೂರು ನೀಡಿದ್ದಾರೆ.
ಅವರು ಸೋಮವಾರ ಪಂಪ್ವೆಲ್ ಫ್ಲೈ ಓವರ್ ಬಿರುಕುಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿ ಪಂಪವೆಲ್ ಪ್ಲೈಓವರ್ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಾಗಿದೆ ಎಂದು ಅನೇಕ ಬಾರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳಲಿಲ್ಲ. ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಕಳಪೆ ಮಟ್ಟದ ಮತ್ತು ತಾಂತ್ರಿಕವಾಗಿಯೂ ನಡೆಯುವ ಕಾಮಗಾರಿಯಿಂದ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ.
ಸಂಸದ ಸದಸ್ಯರು, ಬಿಜೆಪಿ ಶಾಸಕರುಗಳು ಈ ಕಾಮಗಾರಿ ಬಗ್ಗೆ ಬಹಳ ಸಂಭ್ರಮ ಆಚರಿಸಿದರು. 10 ವಷ೯ಗಳ ಕಾಲ ತೆಗೆದು ಕೊಂಡ ಈ ಕಾಮಗಾರಿಗೆ ತಗಲಿದ ವೆಚ್ಚ ಪಾವತಿ ಮಾಡಿದ ಹಣ ಮತ್ತು ಈ ಕಳಪೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕೂಡಲೇ ತನಿಖೆ ಆದೇಶಿಸಬೇಕೆಂದು ಲೋಕೋಪಯೋಗಿ ಇಲಾಖೆ ಮತ್ತು ಕೇಂದ್ರ ಹೆದ್ದಾರಿ ಇಲಾಖೆಗೆ ಆಗ್ರಹಿಸಿದರು
ಈ ಕಾಮಗಾರಿಯಲ್ಲಿ ಸರಕಾರಿ ಹಣ ಪೋಲು ಮಾಡಲಾಗಿದೆ. ಕಾಮಗಾರಿ ನಡೆಯುವಾಗ ಕೇಂದ್ರ ಮತ್ತು ರಾಜ್ಯದ ಲೋಕೋಪಯೋಗಿ ಇಲಾಖೆಗಳು ಸರಿಯಾಗಿ ಕತ೯ವ್ಯ ನಿವ೯ಹಣೆ ಮಾಡಿಲ್ಲ. 10 ವಷ೯ಗಳಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದು, ಈ ಕಾಮಗಾರಿಯಿಂದ ಸರಕಾರಕ್ಕೆ ಮತ್ತು ಇಲಾಖೆಗೆ ತುಂಬಾ ನಷ್ಟ ಉಂಟಾಗಿದೆ. ಈ ಜವಾಬ್ದಾರಿಯನ್ನು ನಮ್ಮ ಲೋಕಸಭಾ ಸದಸ್ಯರು ವಹಿಸಿಕೊಳ್ಳಬೇಕು ಮತ್ತು ಈ ಬಗ್ಗೆ ತನಿಖೆ ನಡೆಸಿ, ಕೂಡಲೇ ವರದಿ ಮಾಡಬೇಕು ಇಲ್ಲದಿದ್ದರೆ ಈ ಕಳಪೆ ಕಾಮಗಾರಿಗೆ ಲೋಕಸಭಾ ಸದಸ್ಯರೇ ಕಾರಣ ಕತ೯ರಾಗುತ್ತಾರೆ ಹೇಳಿದ್ದಾರೆ.
ಈ ಕಾಮಗಾರಿ ಬಗ್ಗೆ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಬೇಕು. ಕಳಪೆ ಕಾಮಗಾರಿ ನಡೆದ ಸ್ಥಳವು ತೀರಾ ಅಪಯಕಾರಿ ಅಂಚಿನಲ್ಲಿದ್ದು, ಈ ಬಗ್ಗೆ ಸುರಕ್ಷತಾ ದೃಷ್ಟಿಯಿಂದ ವಾಹನ ಸಂಚಾರಕ್ಕೆ ಅಪಾಯ ಇರುವುದರಿಂದ ಇಲಾಖೆ ಕೂಡಲೇ ತಾಂತ್ರಿಕ ವರದಿಯನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಯವರಿಗೆ ಐವನ್ ಡಿ ಸೋಜಾ ರವರು ವಿನಂತಿಸಿದ್ದಾರೆ. .
ಈ ವೀಕ್ಷಣೆ ಸಂದಭ೯ದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರ ಜೊತೆ ಅಶಿತ್ ಪಿರೇರಾ, ಜೇಮ್ಸ್ ಪ್ರವೀಣ್, ಭಾಸ್ಕರ್ ರಾವ್, ಗುರುರಾಜ್, ರಘುರಾಜ್, ಶ್ರೀಧರ ಶೆಟ್ಟಿ ಕಡೇಕರ್ , ಹಬಿಬುಲ್ಲ, ಬಾಜಿಲ್ , ಮುಂತಾದವರು ಉಪಸ್ಥಿತರಿದ್ದರು.