Home Mangalorean News Kannada News ಪಕ್ಷಿಕೆರೆ ಕಾರ್ತಿಕ್ ಭಟ್ ಪ್ರಕರಣ – ತಾಯಿ ಮತ್ತು ಅಕ್ಕನಿಗೆ ಜಾಮೀನು

ಪಕ್ಷಿಕೆರೆ ಕಾರ್ತಿಕ್ ಭಟ್ ಪ್ರಕರಣ – ತಾಯಿ ಮತ್ತು ಅಕ್ಕನಿಗೆ ಜಾಮೀನು

Spread the love

ಪಕ್ಷಿಕೆರೆ ಕಾರ್ತಿಕ್ ಭಟ್ ಪ್ರಕರಣ – ತಾಯಿ ಮತ್ತು ಅಕ್ಕನಿಗೆ ಜಾಮೀನು

ಇತ್ತೀಚೆಗೆ ಮುಲ್ಕಿ ಪಕ್ಷಿಕೆರೆಯಲ್ಲಿ ನಡೆದ ಕಾರ್ತಿಕ್ ಭಟ್ ಆತ್ಮಹತ್ಯೆ ಮತ್ತು ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಕಾರ್ತಿಕ್ ಭಟ್ ತಾಯಿ ಮತ್ತು ಅಕ್ಕನಿಗೆ ದ.ಕ ಜಿಲ್ಲಾ ಸೆಶನ್ಸ್ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.

ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್(32) ತನ್ನ ಪತ್ನಿ ಪ್ರಿಯಾಂಕಾ(28) ಮತ್ತು ನಾಲ್ಕು ವರ್ಷದ ಮಗು ಹೃದಯ್ ಎಂಬವರನ್ನು ಕೊಲೆ ಮಾಡಿ ಬಳಿಕ ತಾನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ನವೆಂಬರ್ 9ರಂದು ಪ್ರಕರರಣ ಬೆಳಕಿಗೆ ಬಂದಿತ್ತು. ಡೆತ್‌ನೋಟ್‍ನಲ್ಲಿ ಘಟನೆಗೆ ತನ್ನ ತಾಯಿ ಮತ್ತು ಸಹೋದರಿಯ ಕಿರುಕುಳ ಕಾರಣವೆಂದು ಪ್ರಸ್ತಾಪಿಸಿದ್ದ. ಈ ಬಗ್ಗೆ ಮುಲ್ಕಿ ಪೊಲೀಸರು ಕಾರ್ತಿಕ್ ಭಟ್‍ನ ಪತ್ನಿ ಪ್ರಿಯಾಂಕಾಳ ತಾಯಿ ನೀಡಿದ ದೂರಿನ ಆಧಾರದಲ್ಲಿ ಕಾರ್ತಿಕ್‍ನ ತಾಯಿ ಶ್ಯಾಮಲ ಭಟ್ ಮತ್ತು ಮಗಳು ಕಣ್ಮಣಿಯನ್ನು ಬಂಧಿಸಿ ಮೂಡುಬಿದಿರೆ ಕೋರ್ಟ್‍ಗೆ ಹಾಜರುಪಡಿಸಿದ್ದು ಕೋರ್ಟ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಅವರಿಗೆ ದ.ಕ ಜಿಲ್ಲಾ ಸೆಶನ್ಸ್ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.


Spread the love

Exit mobile version