ಪಕ್ಷಿಕೆರೆ ; ಸರಗಳ್ಳಿಯರ ಬಂಧನ
ಮಂಗಳೂರು: ಮಂಗಳೂರಿನಿಂದ ಹಳೆಯಂಗಡಿ ಮಾರ್ಗವಾಗಿ ಕಿನ್ನಿಗೋಳಿ ಕಡೆ ತೆರಳುತ್ತಿದ್ದ ಬಸ್ಸಿನಲ್ಲಿ ನಾಲ್ಕು ಜನ ಕಳ್ಳಿಯರು ಮಹಿಳೆಯ ಸರ ಕಳವಿಗೆ ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾದ ಘಟನೆ ಪಕ್ಷಿಕೆರೆಯಲ್ಲಿ ನಡೆಯಿತು.
ಬಂಧಿತರನ್ನು ತಮಿಳುನಾಡು ನಿವಾಸಿಗಳಾದ ಸೊಡಲ @ ಸೊಡಲೈ @ ಸತ್ಯ (30), ಹರಿಣಿ @ ಇಂದ್ರಾಣಿ @ ಇಂದಿರಾಣಿ (29), ರೋಹಿಣಿ @ ಮಾರಿಮುತ್ತು (30), ದಿವ್ಯ (23) ಎಂದು ಗುರುತಿಸಲಾಗಿದೆ.
ಸಮೀಪದ ಕೆಮ್ರಾಲ್ ಗ್ರಾಮದ ರತ್ನಾ ಎಂಬ ಮಹಿಳೆ ಪಕ್ಷಿಕೆರೆ ಚರ್ಚು ಬಳಿಯ ನಿಲ್ದಾಣದಲ್ಲಿ ಬಸ್ಸಿನಿಂದ ಕೆಳಗಿಳಿಯುತ್ತಿದ್ದಂಯೆ ಯಾರೊ ಕುತ್ತಿಗೆಗೆ ಕೈ ಹಾಕಿದ ಹಾಗೆ ಬಾಸವಾಗಿ ಮಹಿಳೆ ತಕ್ಷಣ ಹಿಂದಿರುಗಿ ನೋಡುತ್ತಿದ್ದಂತೆ ಸರ ಎಳೆದು ಓಡಲು ಪ್ರಯತ್ನ ಮಾಡಿದಾಗ ಎಚ್ಚೆತ್ತ ಮಹಿಳೆ ನಾಲ್ವರಲ್ಲಿ ಒಬ್ಬರನ್ನು ಗಟ್ಟಿಯಾಗಿ ಹಿಡಿದು ಬೊಬ್ಬೆ ಹಾಕಿದಾಗ ಸ್ಥಳೀಯ ರಿಕ್ಷಾ ನಿಲ್ದಾಣದ ಚಾಲಕರ ಗಮನಕ್ಕೆ ಬಂದು, ಬಸ್ಸಿನಿಂದ ಇಳಿದು ಓಡಿ ಪರಾರಿಯಾಗಲು ಯತ್ನಿಸಿದ ಬಾಕಿ ಮೂವರನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂದಿಸಿದಂತೆ 4 ಜನ ತಮಿಳುನಾಡು ರಾಜ್ಯದವರನ್ನು ಮುಲ್ಕಿ ಪೊಲೀಸ್ ನಿರೀಕ್ಷಕರಾದ ಅನಂತಪದ್ಮನಾಭ ಹಾಗೂ ಸಿಬ್ಬಂದಿಯವರು ದಸ್ತಗಿರಿ ಮಾಡಿ ಅವರಿಂದ ಸುಲಿಗೆ ಮಾಡಿದ ರೂ.50,000/- ಮೌಲ್ಯದ 3 ಪವನ್ ತೂಕದ ಬಂಗಾರದ ಹವಳದ ಸರವನ್ನು ಸ್ವಾಧೀನಪಡಿಸಲಾಗಿದೆ. ಆರೋಪಿತರ ಮೇಲೆ, ಈಗಾಗಲೇ ಕಾವೂರು, ಮಂಗಳೂರು ಉತ್ತರ ಪೊಲೀಸ್ ಠಾಣೆ, ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಸರ ಸುಲಿಗೆ ಪ್ರಕರಣ ದಾಖಲಾಗಿದ್ದು, ಕಾವೂರು ಠಾಣಾ ವ್ಯಾಪ್ತಿಯಲ್ಲಿ 2008ನೇ ಇಸವಿಯಲ್ಲಿ ಸರ ಸುಲಿಗೆ ಪ್ರಕರಣದಲ್ಲಿ ಕಳೆದ 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿರುತ್ತಾರೆ.
ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಶ್ರೀನಿವಾಸ ಗೌಡ ಐಪಿಎಸ್ ರವರ ನೇತ್ರತ್ವದಲ್ಲಿ ಕಾರ್ಯಚರಣೆಯಲ್ಲಿ ಭಾಗವಹಿಸಿದವರು:- ಅನಂತಪದ್ಮನಾಭ ಪೊಲೀಸ್ ನಿರೀಕ್ಷಕರು, ಶೀತಲ್ ಅಲಗೂರ, ಪೊಲೀಸ್ ಉಪ ನಿರೀಕ್ಷಕರು (ಕಾ&ಸು) ಕಮಲಾ ಪೊಲೀಸ್ ಉಪ ನಿರೀಕ್ಷಕರು, ಎ.ಎಸ್.ಐ ಚಂದ್ರಶೇಖರ್, ಸಿಬ್ಬಂದಿಗಳಾದ ಮೆಲ್ವೀನ್ ಪಿಂಟೋ, ತಾರನಾಥ, ಧಮೇ೯ಂದ್ರ, ವಿವೇಕಾನಂದ, ಮಹೇಶ್, ಅಣ್ಣಪ್ಪ, ಮೊಹಮ್ಮದ್ ಹುಸೇನ್, ರಾಜೇಶ್,ದಿನೇಶ್, ಚಂದ್ರಶೇಖರ್, ಸೌಮ್ಯ, ಅಕ್ಷಯ, ಸಬೀಯಾ ಬಾನು, ಮೇಘ, ಶಾರದ, ರೇಣುಕಾ, ವಿಜಯ ಲಾಮಣಿರವರು ಪಾಲ್ಗೊಂಡಿರುತ್ತಾರೆ.