ಪಡುಕರೆ ಬೀಚ್ ವಿಶ್ವ ಪ್ರಸಿದ್ದ – ಪ್ರಮೋದ್ ಮಧ್ವರಾಜ್
ಉಡುಪಿ: ಮಲ್ಪೆ ಬಳಿಯ ಪಡುಕೆರೆ ಬೀಚ್ ಅತ್ಯಂತ ಸುಂದರ ವಾಗಿದೆ ಹಾಗೂ ಸುತ್ತಮುತ್ತಲಿನ ಪ್ರದೇಶ ಅತ್ಯಂತ ರಮಣಿಯವಾಗಿದ್ದು , ಈ ಬೀಚ್ ನ್ನು ವಿಶ್ವ ಪ್ರಸಿದ್ದ ಬೀಚ್ ಅಗಿ ಆಭಿವೃದ್ದಿಗೊಳಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಭಾನುವಾರ ಪಡುಕೆರೆ ಬೀಚ್ ಪ್ರದೇಶಕ್ಕೆ ಭೇಟಿ ನೀಡಿ, ಮಾತನಾಡಿದರು. ರೂ.17 ಕೋಟಿ ವೆಚ್ಚದ ಮಲ್ಪೆ ಪಡುಕರೆ ಸೇತುವೆ ಕಾಮಗಾರಿ ಮುಕ್ತಾಯಗೊಂಡಿದ್ದು, ಇದರಿಂದ ಪಡುಕೆರೆಗೆ ನೇರ ಸಂಪರ್ಕ ಸಾಧ್ಯವಾಗಿದ್ದು, ಪಡುಕೆರೆ ಬೀಚ್ ನ್ನು ಮಲ್ಪೆ ಬೀಚ್ ಅಭಿವೃದಿ ಸಮಿತಿಗೆ ಸೇರಿಸಿ, ಬೀಚ್ ಕ್ಲೀನಿಂಗ್ ಯಂತ್ರದಿಂದ ಬೀಚ್ ನ್ನು ಸ್ವಚ್ಛಗೊಳಿಸಿ, ಬೀಚ್ ನಲ್ಲಿ ವಾಹನ ಪಾರ್ಕಿಂಗ್, ಶೌಚಾಲಯಗಳ ನಿರ್ಮಾಣ, ಸ್ನಾನಗೃಹ ಗಳ ನಿರ್ಮಾಣ ಮಾಡಿ ಪ್ರವಾಸೋದ್ಯಮದ ಬೆಳವಣಿಗೆ ಸಾಕಷ್ಟು ಅವಕಾಶಗಳಿವೆ, ಅಲ್ಲದೇ ಇಲ್ಲಿನ ನಾಗರೀಕರ ಸಹಾಯದಿಂದ ಹೋಂ ಸ್ಟೇಗಳನ್ನು ಆರಂಬಿಸುವ ಉದ್ದೇಶ ಹೊಂದಿದ್ದು, ರಾಜ್ಯದ 3 ಕರಾವಳಿ ಜಿಲ್ಲೆಗಳಿಗೆ ಮಾದರಿಯಾದ ಹೋಂ ಸ್ಟೇ ವ್ಯವಸ್ಥೆಯನ್ನು ಮಾಡಲಾಗುವುದು , ಇದರಿಂದ ಸ್ಥಳೀಯರಿಗೆ ಸಹ ಆದಾಯ ವೃದ್ದಿಗೆ ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭೆ ಸದಸ್ಯರಾದ ಜನಾರ್ಧನ ಭಂಡಾರ್ ಕರ್ , ರಮೇಶ್ ಕಾಂಚನ್ ತಹಸೀಲ್ದಾರ್ ಮಹೇಶ್ ಚಂದ್ರ, ಪೌರಾಯುಕ್ತ ಮಂಜುನಾಥಯ್ಯ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ , ಮತ್ತಿತರರು ಉಪಸ್ಥಿತರಿದ್ದರು.