ಪಡುಬಿದ್ರಿ: 9/11 ಗೊಂದಲ ಬಿಜೆಪಿಯ ಕೊಡುಗೆ – ಈ ಬಗ್ಗೆ ಬಿಜೆಪಿಯ ಯಾವುದೇ ಸವಾಲು ಸ್ವೀಕರಿಸಲು ಸಿದ್ಧ : ಐವನ್ ಡಿಸೋಜಾ

Spread the love

ಪಡುಬಿದ್ರಿ: 9/11 ಗೊಂದಲ ಬಿಜೆಪಿಯ ದೊಡ್ಡ ಕೊಡುಗೆ ಈ ಗೊಂದಲ ಸರಿಪಡಿಸಲು ಕಾಂಗ್ರೆಸ್‍ಗೆ 2 ವರ್ಷ ಬೇಕಾಯಿತು. ಆದಾಗ್ಯೂ ಬಿಜೆಪಿಗರು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ಬಿಜೆಪಿಯ ಯಾವುದೇ ಸವಾಲು ಸ್ವೀಕರಿಸಲು ಸಿದ್ಧ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು.

ಶುಕ್ರವಾರ ಸಂಜೆ ಪಡುಬಿದ್ರಿ ನವರಂಗ್ ವೆಜ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಡವರ ಬಗ್ಗೆ, ಬಡವರ ಬಗೆಗಿನ ಕಾಂಗ್ರೆಸ್ ಕಾಳಜಿ ಬಗ್ಗೆ ಬಿಜೆಪಿಗರು ಗೇಲಿ ಮಾಡುತ್ತಿದ್ದಾರೆ. ಅವರಿಗೆ ಬಡ ಜನರೇ ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ಡಿವಿಎಸ್ ಅಶೋಕ್ ಹೆಸರನ್ನು ಪ್ರಸ್ತಾವಿಸಿ ಐವನ್ ಹೇಳಿದರು.

ಗ್ರಾ.ಪಂ.ವಿದ್ಯುತ್ ಬಿಲ್ ಪಾವತಿ ಬಗ್ಗೆ ಸಂಸದೆ ಶೋಬಾ ಕರಂದ್ಲಾಜೆ ಸುಳ್ಳು ಹೇಲಿಕೆ ನೀಡುತ್ತಿದ್ದಾರೆ. ಈ ಬಗ್ಗೆ ದಾಖಲೆ ಸಹಿತ ಸಾಬೀತು ಪಡಿಸಲು ಸಿದ್ಧನಿದ್ದೇನೆ ಎಂದ ಐವನ್, ಮನೆ ಲೈಸೆನ್ಸ್ ಬಗ್ಗೆ ಪ್ರತಿ ಗ್ರಾ.ಪಂ. ಸ್ವಯಂ ನಿಯಂತ್ರಣಕ್ಕೆ ಕಾಂಗ್ರೆಸ್ ಬದ್ಧವಿದ್ದು. ಬಿಜೆಪಿಗರ ಸುಳ್ಳು ಮಾಹಿತಿ ನಂಬಬೇಡಿ ಎಂದರು.

ವಿಧಾನಪರಿಷತ್‍ನಲ್ಲಿ ಗ್ರಾ.ಪಂ. ವಿಧೇಯಕರನ್ನು ಬೆಂಬಲಿಸಿದ್ದಲ್ಲದೆ, ಹೊಗಳಿ ಹೇಳಿಕೆ ನೀಡಿದ್ದ ಕೋಟ ಶ್ರೀನಿವಾಸ್ ಪೂಜಾರಿಯವರು ಇದೀಗ ಚುನಾವಣೆ ಸಮಯದಲ್ಲಿ ಗ್ರಾ.ಪಂ. ದುರ್ಬಲಗೊಳ್ಳುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಐವನ್ ಆರೋಪಿಸಿದರು.

ರೇಶನ್ ಕಾರ್ಡ್ ಕೊಡಲಿಕ್ಕೆ ಆಗದ ಶೋಭಾ ಕರಂದ್ಲಾಜೆಗೆ ಅದರ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. 2 ವರ್ಷದಲ್ಲಿ ಕಾಂಗ್ರೆಸ್ ಸರಕಾರಿ 1.8 ಕೋಟಿ ಜನರಿಗೆ ಬಿಪಿಎಲ್ ಕಾರ್ಡ್ ನೀಡಿದೆ. ಹಸಿವು ಮುಕ್ತ ರಾಜ್ಯ ಪಕ್ಷದ ಕನಸು ಎಂದವರು ಹೇಳಿದರು.

ಈ ಬಾರಿಯ ಗ್ರಾ.ಪಂ. ಚುನಾವಣೆಯನ್ನು ಪಕ್ಷವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ವಿಧಾನ ಸಭೆ ಚುನಾವಣೆಗೆ ಮುನ್ನ ನಡೆವ ಈ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷವು ಅತ್ಯಧಿಕ ಸ್ಥಾನ ಗಳಿಸಲಿದೆ. ಬಿಜೆಪಿ ಆಡಳಿತ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷವು ಗ್ರಾ.ಪಂ. ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಿತ್ತು ಎಂದವರು ಹೇಳಿದರು.

ಬಡವರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯು ಅಪಪ್ರಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು ಬಿಜೆಪಿ ಆಡಳಿತಾವಧಿಯಲ್ಲಿ ಗ್ರಾ.ಪಂ. ಬಲಪಡಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಬಹಿರಂಗಪಡಿಸಿ ಎಂದು ಸವಾಲೆಸೆದಿದ್ದಾರೆ.

ಭಾಗ್ಯಜ್ಯೋತಿ ಬಿಲ್ ಕಟ್ಟಲಿಲ್ಲ ಎಂದು ಬಡವರ ಮನೆ ವಿದ್ಯುತ್ ಸಂಪರ್ಕ ಕಡಿದ ಬಿಜೆಪಿಗೆ ಅವರ ಬಗ್ಗೆ ಮಾತಾಡುವ ನೈತಿಕ ಹಕ್ಕಿಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ಬಡವರು ಬಯಸಿದ್ದನ್ನು ನೀಡಿದೆ. ಗ್ರಾಮಾಭಿವೃದ್ಧಿ ಆಗಿದ್ದರೆ ಅದು ಕಾಂಗ್ರೆಸ್‍ನಿಂದ ಮಾತ್ರ ಎಂದವರು ಹೇಳಿದರು.


Spread the love