ಪತ್ರಕರ್ತನ ಸಮಯಪ್ರಜ್ಞೆಯಿಂದ ನಗರದಲ್ಲಿ ತಪ್ಪಿದ ಎಟಿಎಮ್ ದರೋಡೆ
ಮಂಗಳೂರು: ವಾಲೆನ್ಸಿಯಾದಲ್ಲಿ ನಡೆಯಬೇಕಾಗಿದ್ದ ಸಂಭಾವ್ಯ ಎಟಿಎಮ್ ದರೋಡೆ ಕೃತ್ಯ ಪತ್ರಕರ್ತರ ಸಮಯಪ್ರಜ್ಞೆಯ ಪರಿಣಾಮ ತಪ್ಪಿಸುವಲ್ಲಿ ಯಶಸ್ವಿಯಾಗಿದೆ.
ಶನಿವಾರ ಮಧ್ಯರಾತ್ರಿ ಸುಮಾರ 12.10 ರ ಸುಮಾರಿಗೆ ವ್ಯಕ್ತಿಯೋರ್ವರು ವಾಲೆನ್ಸಿಯಾ ಬಳಿಯ ಕೆನರಾಬ್ಯಾಂಕ್ ಎಟಿಎಮ್ ಬಳಿ ಬುರ್ಕಾ ಹಾಕಿಕೊಂಡು ಸಂಶಯಾಸ್ಪದ ರೀತಿಯಾಲ್ಲಿ ಕುಳಿತು ಕೊಂಡಿರುವ ಕುರಿತು ದಕ್ಷಿಣ ಠಾಣೆಯ ಪೋಲಿಸರಿಗೆ ವ್ಯಕ್ತಿಯೋರ್ವರು ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಪಾಂಡೇಶ್ವರ ಮತ್ತು ಕಂಕನಾಡಿ ನಗರ ಠಾಣೆಯ ಪೋಲಿಸರು ತೆರಳಿದ್ದು ಮಾಹಿತಿಯನ್ನು ಎಸಿಪಿ ವೆಲಂಟಾಯ್ನ್ ಡಿಸೋಜಾ ಅವರಿಗೂ ನೀಡಿದ್ದರು. ಅದರಂತೆ ಎಸಿಪಿ ವೆಲಂಟಾಯ್ನ್ ಡಿಸೋಜಾ ಅವರು ಸ್ಥಳಕ್ಕೆ ಬರುವ ವೇಳೆ ಇಬ್ಬರು ವ್ಯಕ್ತಿಗಳು ಪೋಲಿಸರನ್ನು ನೀಡಿ ಒಡಿ ಹೋಗಲು ಪ್ರಯತ್ನಿಸಿದ್ದು, ಅವರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಪತ್ರಕರ್ತ ತಾನು 12 ಗಂಟೆಗೆ ನನ್ನ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ವ್ಯಕ್ತಿಯೋರ್ವರು ಬುರ್ಕಾ ಧರಿಸಿಕೊಂಡು ಎಟಿಎಮ್ ಬಳಿ ಕುಳಿತಿದ್ದು, ಸಂಶಯ ಬಂದು ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿದ್ದು ಪೋಲಿಸರು ಸ್ಥಳಕ್ಕೆ ಬರುತ್ತಿದ್ದಂತೆ ಬುರ್ಕಾ ಹಾಕಿದ ವ್ಯಕ್ತಿ ಸ್ಥಳದಿಂದ ಓಡಿದ್ದಾರೆ ಎಂದರು.
ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿದ್ದು, ಘಟನೆಯ ತನಿಖೆ ನಡೆಯುತ್ತಿದೆ. ಪತ್ರಕರ್ತನ ಸಮಯಪ್ರಜ್ಞೆಗೆ ಪೋಲಿಸರು ಅಭಿನಂದಿಸಿದ್ದಾರೆ.