ಪತ್ರಕರ್ತರಿಗೆ ಶೀಘ್ರ ಹೆಲ್ತ್ ಕಾರ್ಡ್ – ವಾರ್ತಾ ಇಲಾಖೆಯ ಆಯುಕ್ತ ಡಾ.ಹರ್ಷ
ಬೆಂಗಳೂರು: ಪತ್ರಕರ್ತರಿಗೆ ಉಚಿತ ಆರೋಗ್ಯ ಕಾರ್ಡ್ ವಿತರಿಸಲು ವಿಳಂಬವಾಗಿದ್ದ ಸಮಸ್ಯೆಯನ್ನು ಪರಿಹರಿಸಲಾಗಿದೆ. ಶೀಘ್ರವಾಗಿ ಎಲ್ಲಾ ಜಿಲ್ಲೆಗಳಲ್ಲಿ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗುವುದೆಂದು ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಹರ್ಷರವರು ಭರವಸೆ ನೀಡಿದರು.
ತಮ್ಮನ್ನು ಬೇಟಿ ಮಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಎಸ್ಸಿ ಎಸ್ಟಿ ಸಂಪಾದಕರ ಸಂಘದ ಅಧ್ಯಕ್ಷ ಚೆಲುವರಾಜು ಜೊತೆ ಮಾತನಾಡಿದ ಆಯುಕ್ತರು ಇದುವರೆವಿಗೂ ಸಾಫ್ ವೇರ್ ಸಮಸ್ಯೆಯಾಗಿದೆ ಎಂದು ಹೇಳಲಾಗಿತ್ತು ಆದರೆ ಸಮಸ್ಯೆಯೇ ಬೇರೆ ಇತ್ತು. ಕೆಲವು ಪತ್ರಕರ್ತರ ಕೆಲ ಮಾಹಿತಿ, ಆಧಾರ್ ನಂಬರ್ ತಾಳೆಯಾಗಿಲ್ಲವೆಂದು ಇಡೀ ಜಿಲ್ಲೆಯ ಪತ್ರಕರ್ತರ ಕಾರ್ಡ್ ಗಳನ್ನು NIC ಯವರು ವಾಪಸ್ ಕಳುಹಿಸಿದ್ದರು.
ಈಗ ವಾರ್ತಾ ಇಲಾಖೆಯೇ ಸರಿಪಡಿಸುವ ಮೂಲಕ ಇದ್ದ ಎಲ್ಲಾ ಅಡೆತಡೆಗಳನ್ನು ಸರಿಪಡಿಸಿದೆ. ವಾರ್ ಪುಟ್ ನಲ್ಲಿ ಕಾರ್ಡ್ ವಿತರಣೆ ಕಾರ್ಯ ನಡೆಯಲಿದೆ. ಯಾವ ಜಿಲ್ಲೆಗಳಲ್ಲಿ ಕಾರ್ಡ್ ವಿತರಣೆ ನಡೆದಿಲ್ಲ ಅತಂಹ ಜಿಲ್ಲೆಗಳಿಗೆ ನಾನೇ ಖುದ್ದು ಬೇಟಿ ನೀಡಿ ಸರಿಪಡಿಸಲು ನಿರ್ಧರಿಸಿದ್ದೇನೆ. ಅಸಡ್ಡೆ ಮಾಡದೆ ಶೀಘ್ರವಾಗಿ ಕಾರ್ಡ್ ನೀಡುವಂತೆ ಜಿಲ್ಲಾ ವಾರ್ತಾಧಿಕಾರಿಗಳಿಗೆ ಸೂಚಿಸಿದ್ದೇನೆ. ಯಾವುದೇ ಲೋಪವಾದರೆ ಅಧಿಕಾರಿಗಳನ್ನೇ ಜವಬ್ದಾರನ್ನಾಗಿ ಮಾಡಲಾಗುವುದು. ಈ ಕೆಲಸ ಸುಸೂತ್ರವಾಗಿ ನಡೆಯಲು ಯಾವುದೇ ಸಮಸ್ಯೆಯಾದರೂ ಬಗೆಹರಿಸಲು ಸಂಪತ್ ಎಂಬ ನೋಡಲ್ ಅಧಿಕಾರಿಯನ್ನು ನೇವಿಸಲಾಗಿದೆ ಎಂದರು.
ಈ ತಂಡದಲ್ಲಿ ಪತ್ರಕರ್ತರ ಸಂಘದ ಸದಸ್ಯರೊಬ್ಬರನ್ನು ಕೊಡುವಂತೆ ಶಿವಾನಂದ ತಗಡೂರು ರವರನ್ನು ಕೋರಿದರು.
ಜಾಹೀರಾತು ಹಣ ಪತ್ರಿಕೆಗಳಿಗೆ ನೀಡದ ಏಜೆನ್ಸಿಗಳ ಮೇಲೆ ಕಠಿಣ ಕ್ರಮ: ಡಾ.ಹರ್ಷ
ಜಾಹೀರಾತು ಹಣ ಇನ್ನೂ ನೀಡದ ಏಜೆನ್ಸಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ದೂರು ಬಂದ ಏಜೆನ್ಸಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಡಾ. ಪಿ.ಎಸ್.ಹರ್ಷ ಅವರು ಹೇಳಿದ್ದಾರೆ.
ಕೆಯುಡಬ್ಲ್ಯೂಜೆ ಒತ್ತಾಯದಿಂದ ಸರ್ಕಾರ 56ಕೋಟಿ ರೂ ಹಣ ಬಿಡುಗಡೆ ಮಾಡಿದ್ದು, ವಾರ್ತಾ ಇಲಾಖೆ ಏಜೆನ್ಸಿಗಳಿಗೆ ಹಣ ನೀಡಿದೆ. ಆದರೂ, ಇನ್ನೂ ಕೂಡ ಕೆಲ ಏಜೆನ್ಸಿಗಳು ಪತ್ರಿಕೆಗಳಿಗೆ ಹಣ ನೀಡಿಲ್ಲ ಜಿಲ್ಲೆಗಳಿಂದ ದೂರುಗಳು ಬರುತ್ತಿವೆ. ಏಜೆನ್ಸಿಗಳ ಮೊಂಡುತನಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದಾಗ ಈ ರೀತಿಯಲ್ಲಿ ಪ್ರತಿಕ್ರಿಯಿಸಿದರು.
ವಾರ್ತಾ ಇಲಾಖೆ ಪತ್ರಕರ್ತರಿಗಾಗಿಯೇ ಇರುವ ಇಲಾಖೆ. ಪತ್ರಕರ್ತರ ಮತ್ತು ಸರ್ಕಾರದ ಕೊಂಡಿಯಾಗಿ ಇಲಾಖೆ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಜಾಹೀರಾತು ಏಜೆನ್ಸಿಗಳು ವಾರ್ತಾಇಲಾಖೆಯಲ್ಲಿ ಆಡಳಿತ ನಡೆಸಲು ಬಿಡಬಾರದೆಂದು ಅಧ್ಯಕ್ಷರು ಆಗ್ರಹಿಸಿದರು.
ಹೀಗಾಗಲೇ ಚಾಟಿ ಬೀಸಿದ್ದೇನೆ. ಅದರ ಪರಿಣಾಮ ಸಾಕಷ್ಟು ಕೆಲಸವಾಗುತ್ತಿವೆ. ಪತ್ರಿಕೆಗಳಿಂದ ನನಗೆ ಬಂದ ದೂರುಗಳನ್ನು ಆಧರಿಸಿ ಕೆಲವು ಏಜೆನ್ಸಿಗಳಿಗೆ ಸೋಕಾಸ್ ನೋಟೀಸ್ ನೀಡಿದ್ದೇನೆ. ಸರಿಪಡಿಸದಿದ್ದರೆ.ಕಠಿಣ ಕ್ರಮ ತೆಗೆದುಕೊಳ್ಳತ್ತೇನೆ ಎಂದು ಆಯುಕ್ತರು ಹೇಳಿದರು.
ನಾನು ಇಲಾಖೆಗೆ ವರ್ಗಾವಣೆಯಾಗಿ ಬಂದ ಮೇಲೆ ಸಾಕಷ್ಟು ಬದಲಾವಣೆ ತಂದಿದ್ದೇನೆ. ಪತ್ರಕರ್ತರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಚರ್ಚಿಸಿದ್ದೇನೆ.
ಈ ಸಂದರ್ಭದಲ್ಲಿ ಪತ್ರಕರ್ತ ಚೆಲುವರಾಜು, ಸೋಮಶೇಖರ್ ಕೆರಗೋಡುರವರುದಿರು.