ಪತ್ರಕರ್ತೆ ಗೌರಿ ಲಂಕೇಶ್ ಸಾವನ್ನು ಸಂಭ್ರಮಿಸಿದ ಕೀಳು ಮನಸ್ಸುಗಳು!

Spread the love

ಪತ್ರಕರ್ತೆ ಗೌರಿ ಲಂಕೇಶ್ ಸಾವನ್ನು ಸಂಭ್ರಮಿಸಿದ ಕೀಳು ಮನಸ್ಸುಗಳು!

ಬೆಂಗಳೂರು: ಮಂಗಳವಾರ ರಾತ್ರಿ ಅನಾಮಿಕ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಖ್ಯಾತ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಸಾಹಿತಿ ಗೌರಿ ಲಂಕೇಶ್ ಅವರ ಸಾವಿನಲ್ಲೂ ಕೆಲವೊಂದು ಕೀಳು ಮನಸ್ಸಿನ ಹೃದಯಹೀನ ವ್ಯಕ್ತಿಗಳು ತಮ್ಮ ಸಂಭ್ರಮವನ್ನು ಹೊರಹಾಕಿದ್ದಾರೆ.

ಗೌರಿ ಲಂಕೇಶ್ ಹತ್ಯೆಯಾಗಿದ್ದಾರೆ ಎಂಬ ಸುದ್ದಿ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ  ಕೆಲವರು  ಹತ್ಯೆಯನ್ನು  ಸಂಭ್ರಮಿಸಿ  ಪೋಸ್ಟ್‌ಗಳನ್ನು ಪ್ರಕಟಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌, ಫೇಸ್‌ಬುಕ್‌ ಹಾಗೂ ವಾಟ್ಸ್‌ಅಪ್‌ ಗ್ರೂಪ್‌ಗಳಲ್ಲಿ ಅವರ ಹತ್ಯೆಯನ್ನು ಸಂಭ್ರಮಿಸಿದ ಹಲವಾರು ಪೊಸ್ಟ್‌ಗಳು  ಹರಿದಾಡುತ್ತಿವೆ.

ನನ್ನವರು ಯಾರು ಇಲ್ಲ ಎಂಬ ಫೇಸ್‌ಬುಕ್‌ ಖಾತೆದಾರರು ‘ ಘೋರಿ ಲಂಕೇಶ್‌ ಸತ್ಲಂತೆ ನಿಜಾನ, ಖುಷಿ ವಿಚಾರನ ಬೇಗ ಕನ್ಪರ್ಮ್‌ ಮಾಡ್ತೀರಾ ಯಾರಾದ್ರೂ’ ಎಂಬ ಪೋಸ್ಟ್‌  ಪ್ರಕಟಿಸಿದ್ದಾರೆ.

ಮಲ್ನಾಡ್‌ ಲಾಯನ್ಸ್‌ ಎಂಬ ವಾಟ್ಸ್‌ಅಪ್‌ ಗ್ರೂಪ್‌ನಲ್ಲಿ  ‘ಹಿಂದೂಗಳ ವಿರುದ್ಧ ಮಾತನಾಡಿದರೆ ಇದೇ ಗತಿ’ ಎಂಬ ಪೋಸ್ಟ್‌ ಹಾಕಿ ಸಂಭ್ರಮಿಸಲಾಗಿದೆ.

ಮಲ್ಲಿ ಅರ್ಜುನ್‌ ಎಂಬ ಖಾತೆದಾರನ  ಹೆಸರಿನಲ್ಲಿ ‘ಧರ್ಮಕ್ಕಾಗಿ ಜೀವಕೊಡಬೇಕು ಅಂತೇನಿಲ್ಲಾ, ಧರ್ಮದ ವಿರುದ್ಧ ಮಾತನಾಡುವವರ ಜೀವ ತೆಗೆದರೆ ಆಯ್ತು’ ಹಾಗೂ ‘ಒಂದು ಗಂಜಿ ಗಿರಾಕಿಯ ಹೆಣ ಬಿತ್ತು’  ಎಂಬ ಪೋಸ್ಟ್‌ ಹರಿದಾಡುತ್ತಿದೆ.

ಮತ್ತೊಬ್ಬರು ‘ಆಕೆ ಬರಿ ಇನ್ನು ನೆನಪು, ನಮ್ಮ ಮನೆಯಲ್ಲಿ ಓಳಿಗೆ ಓಬಟ್ಟು’ ಎಂಬ ಪೋಸ್ಟ್‌ ಅನ್ನು ಹಾಕಿದ್ದಾರೆ.


Spread the love
2 Comments
Inline Feedbacks
View all comments
Original R.Pai
7 years ago

Expecting everyone on facebook/ Twitter to be mature or politically correct is impractical. Clearly there are going to be some sick individuals who will celebrate someone’s death and misery. It’s an unfortunate reality. On other hand, I remember when Kashmiri muslims and students in some universities called for india’s death and defeat. It was rightfully supported by the media as freedom of expression. Why double standards now? I disagreed with both sentiments but support their right to express their opinion no matter how immature/hurtful they are.

Original R.Pai
7 years ago

Also, I remember comments made by many from one particular mangalorean community following the suicide of Police officer Ganapathi. They were filled with hatred and insults citing his actions as a police officer when he was posted in Mangalore. So, as you can see, these things happen all the time from all sides. We just need to be intellectually honest and consistent in our approach.