Home Mangalorean News Kannada News ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹೇಡಿತನದ ಕೃತ್ಯ :ಎಸ್ಸೆಸ್ಸಫ್

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹೇಡಿತನದ ಕೃತ್ಯ :ಎಸ್ಸೆಸ್ಸಫ್

Spread the love
RedditLinkedinYoutubeEmailFacebook MessengerTelegramWhatsapp

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹೇಡಿತನದ ಕೃತ್ಯ :ಎಸ್ಸೆಸ್ಸಫ್

ಮಂಗಳೂರು : ಸರ್ವಧರ್ಮ ಸಹಿಷ್ಣುತೆಯನ್ನು ಹೊಂದಿರುವ ರಾಜ್ಯದಲ್ಲಿ ಸೈದ್ಧಾಂತಿಕ ಬಿನ್ನತೆಯ ಅಸಹನೆಗೆ ಮತ್ತೊಂದು ಹತ್ಯೆ ನಡೆದು ಹೋಗಿದೆ. ಖ್ಯಾತ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ , ಮಾನವೀಯತೆಯ ಪರ ರಾಜಿಯಿಲ್ಲದೆ ಹೋರಾಟ ನಡೆಸುತ್ತಿದ್ದ ಗೌರಿ ಲಂಕೇಶ್ ರವರನ್ನು ಅವರ ನಿವಾಸದಲ್ಲಿ ದುಷ್ಕರ್ಮಿಗಳು ಕೊಂದು ಹಾಕಿರುವುದು ಅತ್ಯಂತ ಹೇಯ ಹಾಗೂ ಹೇಡಿತನದ ಕೃತ್ಯವೆಂದು ಎಸ್ಸೆಸ್ಸಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಡಗು ಪತ್ರಿಕಾ ಹೇಳಿಕೆಯಲ್ಲಿ ಖಂಡನೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಿರಂತರವಾಗಿ ಸೈಧ್ಧಾಂತಿಕ ಭಿನ್ನತೆಯ ಹೆಸರಿನಲ್ಲಿ ನಾಡಿನ ಸಾಹಿತಿಗಳು , ವಿಚಾರವಾದಿಗಳ ಮೇಲೆ ನಡೆಯುವ ದಾಳಿಗಳು ,ಕೊಲೆಗಳ ವಿರುದ್ಧ ಆತಂಕ ವ್ಯಕ್ತಪಡಿಸಿದ ಅವರು ಸಂಶೋಧಕ ಎಂ.ಎಂ ಕಲ್ಬುರ್ಗಿಯವರ ಕೊಲೆ ನಡೆದು ವರ್ಷಗಳು ಎರಡು ಕಳೆದರೂ ಇದುವರೆಗೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಅದೇ ರೀತಿ ಗೌರಿ ಲಂಕೇಶ್ ರವರ ಕೊಲೆಯೂ ಹಳ್ಳ ಹಿಡಿಯಬಾರದು ಎಂದು ಹೇಳಿದ ಅವರು ಕಾಂಗ್ರೆಸ್ ಸರ್ಕಾರ ತ್ವರಿತವಾಗಿ ದುಷ್ಕರ್ಮಿಗಳನ್ನು ಬಂಧಿಸಿ , ಅದರ ಹಿಂದಿನ ಪಿತೂರಿಗಳನ್ನು ಕಂಡುಹಿಡಿಯಬೇಕೆಂದು ಆಗ್ರಹಿಸಿದರು.


Spread the love
RedditLinkedinYoutubeEmailFacebook MessengerTelegramWhatsapp

Exit mobile version