ಪತ್ರಕರ್ತ ಆರ್‍ಬಿ ಜಗದೀಶ್ ಮೇಲೆ ಪೋಲೀಸ್ ದೌರ್ಜನ್ಯ; ಆಯುಕ್ತರಿಗೆ ಪತ್ರಕರ್ತರ ಸಂಘದ ಮನವಿ

Spread the love

ಪತ್ರಕರ್ತ ಆರ್‍ಬಿ ಜಗದೀಶ್ ಮೇಲೆ ಪೋಲೀಸ್ ದೌರ್ಜನ್ಯ; ಆಯುಕ್ತರಿಗೆ ಪತ್ರಕರ್ತರ ಸಂಘದ ಮನವಿ

ಮಂಗಳೂರು: ಪತ್ರಕರ್ತ ಆರ್.ಬಿ. ಜಗದೀಶ್ ಅವರ ಮೇಲೆ ಬಳ್ಳಾರಿ ಪೋಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪೋಲೀಸ್ ಆಯುಕ್ತ ಟಿ.ಎನ್.ಸುರೇಶ್ ಅವರಿಗೆ ಮನವಿಯನ್ನು ಸಲ್ಲಿಸಿದೆ.

ಕಾರ್ಕಳದಲ್ಲಿ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿರುವ ಆರ್.ಬಿ.ಜಗದೀಶ್ ಅವರು ಜೂನ್ 30ರಂದು ಮೂಡಬಿದ್ರೆಯ ಶಿರ್ತಾಡಿಯಿಂದ ಕರ್ತವ್ಯದ ನಿಮಿತ್ತ ತನ್ನ ಕಾರಿನಲ್ಲಿ ಕಾರ್ಕಳಕ್ಕೆ ತೆರಳುತ್ತಿದ್ದಾಗ ಬಳ್ಳಾರಿಯ ಪೋಲೀಸರಿಬ್ಬರ ಸಹಿತ ಒಟ್ಟು ನಾಲ್ಕು ಮಂದಿ ಆರ್.ಬಿ.ಜಗದೀಶ್ ಅವರ ಕಾರನ್ನು ಅಡ್ಡಗಟ್ಟಿ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಠಾಣೆಗೆ ದೂರು ನೀಡಿದರೂ ಪೋಲೀಸರು ಕ್ರಮ ಕೈಗೊಳ್ಳಲಿಲ್ಲ ಈ ಘಟನೆಗೆ ಸಂಬಂಧಿಸಿದಂತೆ ಪೋಲೀಸ್ ಆಯುಕ್ತರು ಗಮನ ಹರಿಸಿ ಪತ್ರಕರ್ತರಿಗೆ ನ್ಯಾಯ ಹಾಗು ರಕ್ಷಣೆ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ಬಳಿಕ ಪೋಲೀಸ್ ಮಹಾನಿರ್ದೇಶಕರಿಗೂ ಮನವಿ ಸಲ್ಲಿಸಲಾಯಿತು. ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅವರು ಪೋಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ನಿಯೋಗದಲ್ಲಿ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಕರ್ತರಾದ ಹಿಲರಿ ಕ್ರಾಸ್ತಾ, ಹರೀಶ್ ಮೋಟುಕಾನ, ಗಣೇಶ್ ಮಾವಂಜಿ, ಆರ್.ಬಿ. ಜಗದೀಶ್, ಬಶೀರ್ ಕಲ್ಕಟ್ಟ, ಬೃಜೇಶ್, ರಾಜೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


Spread the love