Home Mangalorean News Kannada News ಪಥದರ್ಶಿನಿ ನಮ್ಮ ಪಾಲಿಗೆ ಕೈ ಹಿಡಿದು ಮುನ್ನಡೆಸುವ ಸಹೋದರಿಯಂತೆ-   ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಪಥದರ್ಶಿನಿ ನಮ್ಮ ಪಾಲಿಗೆ ಕೈ ಹಿಡಿದು ಮುನ್ನಡೆಸುವ ಸಹೋದರಿಯಂತೆ-   ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

Spread the love

ಪಥದರ್ಶಿನಿ ನಮ್ಮ ಪಾಲಿಗೆ ಕೈ ಹಿಡಿದು ಮುನ್ನಡೆಸುವ ಸಹೋದರಿಯಂತೆ-   ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಮಂಗಳೂರು : ಇಂದು ಹಲವಾರು ಸಾಮಾಜಿಕ ಜಾಲತಾಣಗಳು ಬೆಳೆದು ಬರುತ್ತಾ ಇವೆ. ಎಲ್ಲಾ ಕಡೆ ಇರುತ್ತಾ, ಎಲ್ಲವನ್ನೂ ತಿಳಿಸುತ್ತಾ ದೇವರೋ, ದೆವ್ವವೋ ಆಗುತ್ತಾ ಇವೆ. ಆದರೆ ಪಥದರ್ಶಿನಿ ನಮ್ಮೊಡನೆ ಇರುತ್ತಾ ನಮ್ಮ ಭವಿಷ್ಯಕ್ಕೆ ದಾರಿ ತೋರಿಸುವ ಸಹೋದರಿಯಂತಾಗಲಿ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾರವರು ಶುಭ ಹಾರೈಸಿದರು.

ಅವರು ಪಥದರ್ಶಿನಿ ಸೇವಾ ಟ್ರಸ್ಟಿನ ಜಾಲತಾಣ (www.pathadarshini.org) ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಆಧುನಿಕ ವಿಶ್ವದಲ್ಲಿ ಜಾಲತಾಣಗಳು, ಸಮಾಜ ಮಾಧ್ಯಮಗಳು, ನಿಸ್ತಂತು ಸಂಪರ್ಕ ವ್ಯವಸ್ಥೆಗಳು ಅನಿವಾರ್ಯವಾಗಿವೆ, ಇವುಗಳ ಮುಕೇನ ಆದಷ್ಟು ಹೆಚ್ಚು ಜನರನ್ನು ಆದಷ್ಟು ಕಡಿಮೆ ಸಮಯದಲ್ಲಿ ತಲುಪಲು ಸಾಧ್ಯವಾಗಿದೆ. ಇವುಗಳ ಮೂಲಕ ವೃತ್ತಿ ಮಾರ್ಗದರ್ಶನ ಹಾಗೂ ಬದುಕಿನ ಇತರ ಅಗತ್ಯಗಳನ್ನು ಪೂರೈಸಲು ಪಥದರ್ಶಿನಿ ಸೇವಾ ಟ್ರಸ್ಟ್ನವರು ಪ್ರಯತ್ನಿಸಿರುವುದು ಪ್ರಶಂಸನೀಯ ಎಂದು ಅವರು ಹೇಳಿದರು.

ಟ್ರಸ್ಟಿನ ಇಂಗ್ಲೀಷ್ – ಕನ್ನಡ – ಕೊಂಕಣಿ ಹಾಗೂ ಕೊಂಕಣಿ – ಕನ್ನಡ – ಇಂಗ್ಲೀಷ್ ಒನ್ಲೈನ್ ಅರ್ಥಕೋಶಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯ್ತು. ಬೆಥನಿ ಧರ್ಮಸಭೆಯ ಉಪ ಮಹಾಮಾತೆಯಾದ ಅತಿ ವಂದನೀಯ ಭಗಿನಿ ಲೆಲ್ಲಿಸ್ ಅವರು ಲೋಕದ ಪ್ರಪ್ರಥಮವಾದ ಈ ಅಂತರ್ಜಾಲ ಆಧಾರಿತ ಅರ್ಥಕೋಶಗಳನ್ನು ಬಿಡುಗಡೆ ಮಾಡಿ ಈ ಅಭೂತಪೂರ್ವ ಕೊಡುಗೆಗಾಗಿ ಟ್ರಸ್ಟಿನ ಪದಾಧಿಕಾರಿಗಳಿಗೆ ಶುಭಕೋರಿದರು. ಸಮಾಜದ ನಿರಂತರ ಒಳಿತನ್ನೇ ಆಶಿಸಿ ಈ ಮಿತ್ರರು ನಡೆಸುತ್ತಿರುವ ಕೆಲಸಗಳೆಲ್ಲಾ ಯಶಸ್ವಿಯಾಗಲಿ ಹಾಗೂ ಈ ಕೆಲಸಗಳಿಂದ ಯುವಜನರಿಗೆ ಒಳಿತಾಗಿ ಆರೋಗ್ಯಕರ ಸಮಾಜದ ನಿರ್ಮಾಣವಾಗಲಿ ಎಂದು ಅವರು ತಿಳಿಸಿದರು.

ಹಲವು ವಿಭಾಗಗಳನ್ನು ಹೊಂದಿರುವ ಈ ವೆಬ್ಸೈಟ್ ತಯಾರಿಸಿದ ಕೋಡ್ಸ್ಲೈಸ್ ಸಂಸ್ಥೆಯ ಜ್ಯಾಕ್ಸನ್ ಎರಿಕ್ ಡಿ’ಕೋಸ್ತಾರವರು ವೆಬ್ ಸೈಟಿನ ವಿವಿಧ ಆಯಾಮಗಳನ್ನು ಕುರಿತು ವಿವರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಕಿರು ಯೋಗ ಪ್ರಾತ್ಯಕ್ಷಿಕೆ ನಡೆಸಲಾಯ್ತು. ಸ್ವಾಗತ ಭಾಷಣ ಮಾಡಿದ ಪ್ರೊ. ಸ್ಟೀವನ್ ಕ್ವಾಡ್ರಸ್ ಅವರು ಕೊವಿಡ್ – 19 ರ ಕಾಲದಲ್ಲಿ ವೀರರಾಗಿ ದುಡಿಯುತ್ತಿರುವ ಎಲ್ಲಾ ಕೋವಿಡ್ ವೀರರನ್ನು ನೆನಪಿಸಿ ಅವರಿಗೆ ಗೌರವ ಸ್ಮರಣೆ ಮಾಡಲಾಯ್ತು.

ರೋಮನ್ ಲೋಬೊರವರು ಕಾರ್ಯಕ್ರಮ ಸಂಯೋಜಿಸಿದರು.  ಸುನಿಲ್ ಮಿನೇಜಸ್ ಅವರು ವಂದನಾರ್ಪಣೆ ಮಾಡಿದರು. ಪ್ರೊ. ವಿನ್ಸೆಂಟ್ ಡಿಸೋಜಾ ಹಾಗೂ   ಅನಿಲ್ ಜೊನ್ಸನ್ ಕುವೆಲ್ಲೊರವರು ಟ್ರಸ್ಟಿನ ಕೆಲಸ ಕಾರ್ಯಗಳಲ್ಲಿ ಶ್ರಮಿಸಿದವರ ಗೌರವಾರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು.


Spread the love

Exit mobile version