ಪರವಾನಿಗೆ ನೀಡದಿದ್ದರೂ ಮಂಗಳೂರು ಚಲೋ ನಡೆಸಿಯೇ ಸಿದ್ದ : ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ

Spread the love

ಪರವಾನಿಗೆ ನೀಡದಿದ್ದರೂ ಮಂಗಳೂರು ಚಲೋ ನಡೆಸಿಯೇ ಸಿದ್ದ : ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ

ಮಂಗಳೂರು: ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಿಲಾಗಿರುವ ಮಂಗಳೂರು ಚಲೋ ಹತ್ತಿಕ್ಕಲು ರಾಜ್ಯ ಸರಕಾರ ಯತ್ನಿಸುತ್ತಿದ್ದು, ಪೋಲಿಸ್ ಇಲಾಖೆ ಕಾರ್ಯಕ್ರಮಕ್ಕೆ ಪರವಾನಿಗೆ ನೀಡದೆ ಸತಾಯಿಸುತ್ತಿದ್ದು, ಪರವಾನಿಗೆ ನೀಡದೇ ಹೋದರೂ ಕೂಡ ಕಾರ್ಯಕ್ರಮ ನಡೆಸಿಯೇ ಸಿದ್ದ. ಈ ವೇಳೆ ಏನಾದರೂ ಅಹಿತಕರ ಘಟನೆಗಳು ನಡೆದರೆ ಮುಖ್ಯಮಂತ್ರಿ ಮತ್ತು ರಾಜ್ಯ ಸರಕಾರವೇ ಹೊಣೆ ಹೊರಬೇಕಾದಿತು ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.

ಈ ಕುರಿತು ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮಕ್ಕೆ ಕಾನೂನು ಬದ್ಧವಾಗಿ ವಾರದ ಹಿಂದೆಯೇ ಅನುಮತಿ ಕೇಳಿದ್ದು, ಪೂರಕವಾಗಿ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ. ರಾಜ್ಯ, ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳು, ನಗರ ಪೋಲಿಸ್ ಆಯುಕ್ತರಿಗೂ ಮನವಿ ಸಲ್ಲಿಸಲಾಗಿದ್ದು ಇದುವರೆಗೆ ಅನುಮತಿ ನೀಡಿಲ್ಲ. ಇದರ ಹಿಂದೆ ರಾಜ್ಯ ಸರಕಾರದ ನೇರ ಕುಮ್ಮಕ್ಕು ಇದ್ದು ಸರಕಾಕಾರಕ್ಕೆ ನಿಜವಾಗಿಯೂ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿದ್ದರೆ ಅನುಮತಿ ನೀಡಲಿ ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಗೆ ಆಗಮಿಸುವ ಕಾರ್ಯಕರ್ತರಿಗೆ ಜಿಲ್ಲೆಯ ಸಭಾಭವನಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿತ್ತು ಆದರೆ ಸರಕಾರ ಪೋಲಿಸ್ ಇಲಾಖೆಯ ಮೂಲಕ ಸಭಾಭವನ ನೀಡದಂತೆ ಮ್ಹಾಲಕರಿಗೆ ಒತ್ತಡ ಹೇರುತ್ತಿದ್ದು, ನೋಟಿಸ್ ಕೂಡ ನೀಡಲಾಗಿದೆ. ಒಂದು ವೇಳೆ ಸರಕಾರ ಕಾರ್ಯಕ್ರಮ ನಿಯಂತ್ರಣ ಮಾಡಲು ಹೊರಟರೆ ಪರವೂರಿನ ಕಾರ್ಯಕರ್ತರಿಗೆ ಜಿಲ್ಲೆಯ ಕಾರ್ಯಕರ್ತರ ಮನೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸುತ್ತೇವೆ ಇದಕ್ಕಾಗಿ ಈಗಾಗಲೇ 3-4 ಸಾವಿರ ಕಾರ್ಯಕರ್ತರು ಮುಂದೆ ಬಂದಿದ್ದು, ಸರಕಾರ ಪರವಾನಿಗೆ ನೀಡದಿದ್ದರೂ ಪ್ರತಿಭಟನೆ ಮಾಡುತ್ತೇವೆ ಎಂದರು.

ಮಂಗಳೂರು ಚಲೋಗಾಗಿ ರಾಜ್ಯದಾದ್ಯಂತ 10 ಸಾವಿರಕ್ಕೂ ಅಧಿಕ ಬೈಕ್ ಗಳು ನೋಂದಣಿಯಾಗಿದ್ದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಸಿಟಿ ರವಿ ಸಹಿತ ಬಹುತೇಕ ಎಲ್ಲಾ ನಾಯಕರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮ ಕೈಬಿಡುವಂತೆ ಸಚಿವ ಖಾದರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಳಿನ್ ಖಾದರ್ ಕಾನೂನು ಬಲ್ಲವರು ಎಂದು ತಿಳಿದುಕೊಂಡಿದ್ದೇನೆ ಕಾರ್ಯಕ್ರಮಕ್ಕೆ ರಕ್ಷಣೆ ನೀಡುವುದು ಸರಕಾರದ ಜವಾಬ್ದಾರಿ ಎಂದರು, ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ  ಪಿಎಫ್ ಐ, ಕೆಎಫ್ ಡಿ ಸಂಘಟನೆಗಳ ಕೈವಾಡ ಬಯಲಾಗಿ ಅವುಗಳನ್ನು ನಿಷೇಧೀಸಲು ಒತ್ತಾಯಿಸಿದರೆ ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ಈಗ ಪ್ರಜಾಸತ್ತಾತ್ಮಕವಾಗಿ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾದರೆ ಅದನ್ನೂ ಹತ್ತಿಕ್ಕುವ ಕೆಲಸದಲ್ಲಿ ನಿರತವಾಗಿದೆ ಎಂದರು.


Spread the love
1 Comment
Inline Feedbacks
View all comments
Lallu
7 years ago

THIS IS OUR POLITICIANS ACTING LIKE DICTATORS WHERE HE DONT HAVE ANY CONCERN ABOUT THE PUBLIC LIFE ! AND WE VOTE FOR HIM