Home Mangalorean News Kannada News ಪರಶುರಾಮ ಥೀಮ್ ಪಾರ್ಕ್ ಹಗರಣ ಸರ್ಕಾರ ಸಿಬಿಐ ತನಿಖೆಗೆ ಒಳಪಡಿಸಲಿ: ವಿಕಾಸ್ ಹೆಗ್ಡೆ ಆಗ್ರಹ

ಪರಶುರಾಮ ಥೀಮ್ ಪಾರ್ಕ್ ಹಗರಣ ಸರ್ಕಾರ ಸಿಬಿಐ ತನಿಖೆಗೆ ಒಳಪಡಿಸಲಿ: ವಿಕಾಸ್ ಹೆಗ್ಡೆ ಆಗ್ರಹ

Spread the love

ಪರಶುರಾಮ ಥೀಮ್ ಪಾರ್ಕ್ ಹಗರಣ ಸರ್ಕಾರ ಸಿಬಿಐ ತನಿಖೆಗೆ ಒಳಪಡಿಸಲಿ: ವಿಕಾಸ್ ಹೆಗ್ಡೆ ಆಗ್ರಹ

ಕುಂದಾಪುರ: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನ ಪರಶುರಾಮನ ಮೂರ್ತಿ ನಿರ್ಮಾಣದ ಹಗರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ಸಿ ಬಿ ಐ ತನಿಖೆಗೆ ಒಳಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪರಶುರಾಮ ಮೂರ್ತಿಯನ್ನು ಕಂಚಿನ ಮೂರ್ತಿ ಎಂದು ಸುಳ್ಳು ಕತೆ ಕಟ್ಟಿ ಪೈಬರ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಇದೀಗ ಹಗರಣ ಬೆಳಕಿಗೆ ಬರುತ್ತಿದ್ದಂತೆ ಪೈಬರ್ ಮೂರ್ತಿಯನ್ನು ಬದಲಾಯಿಸಿ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಹೊರಟ ಹಾಗೂ ಇದರಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮಾಡಿದ ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಸಂಬಂದಿತ ಅಧಿಕಾರಿಗಳು, ಅಭಿಯಂತರರು ಹಾಗೂ ಈ ಹಗರಣದ ಪ್ರದಾನ ರೂವಾರಿ ಕಾರ್ಕಳ ಶಾಸಕರನ್ನು ಸಿ ಬಿ ಐ ತನಿಖೆಗೆ ಒಳಪಡಿಸಬೇಕು.

ಕರಾವಳಿ ಎನ್ನುವುದು ಪರಶುರಾಮನ ಸೃಷ್ಟಿ ಜಗತ್ತಿನ ಹೆಚ್ಚಿನ ಕರಾವಳಿ ಪ್ರದೇಶದಲ್ಲಿ ಒಂದಲ್ಲಾ ಒಂದು ಪ್ರಾಕೃತಿಕ ವಿಕೋಪ ಮುಂತಾದವು ಸಂಭವಿಸಿದರೆ ನಾವು ಸುರಕ್ಷಿತವಾಗಿರಲು ಕಾರಣ ಪರಶುರಾಮನ ಆಶೀರ್ವಾದ ಎನ್ನುವುದು ನಮ್ಮ ನಂಬಿಕೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಏರಿದ ಕಾರ್ಕಳ ಶಾಸಕರು ನಮ್ಮೆಲ್ಲರ ಆರಾಧ್ಯ ದೇವರಾದ ಪರಶುರಾಮನ ಹೆಸರಿನಲ್ಲಿ ಮಾಡಿರುವ ಭ್ರಷ್ಟಾಚಾರ ಅವರ ಹಿಂದೂ ವಿರೋಧಿ ನಿಲುವಾಗಿದೆ ಹಾಗೂ ಸಮಸ್ತ ಹಿಂದೂ ಧರ್ಮಿಯರಿಗೆ ಮಾಡಿದ ದ್ರೋಹವಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರಕರಣವನ್ನು ಸಿ ಬಿ ಐ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love

Exit mobile version