ಪರಿಶಿಷ್ಟರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ : ಶಾಸಕ ಲೋಬೋ

Spread the love

 ಪರಿಶಿಷ್ಟರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ : ಶಾಸಕ ಲೋಬೋ

ಮಂಗಳೂರು : ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಇತ್ತೀಚಿಗೆ ತಾರೀಕು 4-02-18 ರಂದು ಉರ್ವದ ಬಿಲ್ಲವ ಸಂಘದಲ್ಲಿ ಜರಗಿತು. ಕಾರ್ಯಕ್ರಮವನ್ನು ಶಾಸಕರಾದ ಜೆ.ಆರ್.ಲೋಬೋರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿದ್ದ ಅನೇಕ ಪರಿಶಿಷ್ಟ ಕಾಲನಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದ್ದು, ವಸತಿ ರಹಿತರಿಗೆ ಆಶ್ರಯ ಯೋಜನೆಯಲ್ಲಿ ಮನೆ, ಕಾಂಕ್ರೀಟ್ ರಸ್ತೆ, ದೈವಸ್ಥಾನ, ಭಜನಾ ಮಂದಿರದ ಅಭಿವೃದ್ಧಿಗೆ ನೆರವು, ಪರಿಶಿಷ್ಟ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್, ನೂತನ ಕುದ್ಮುಲ್ ರಂಗರಾವ್ ಹಾಗೂ ಅಂಬೇಡ್ಕರ್ ಸಮುದಾಯ ಭವನ ಸೇರಿದಂತೆ ಪರಿಶಿಷ್ಟರ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ

ಅದಲ್ಲದೆ ದಲಿತೋದ್ಧಾರಕ ಕುದ್ಮುಲ್ ರಂಗರಾವ್ ರವರ ಹೆಸರನ್ನು ನಗರದ ಪುರಭವನಕ್ಕೆ ನಾಮಕರಣ ಮಾಡಲು ಮಹಾನಗರ ಪಾಲಿಕೆ ಸಭೆಯಲ್ಲಿ ನಿರ್ಧರಿಸಿದ್ದು ಇದು ಅತೀ ಶೀಘ್ರದಲ್ಲೇ ಜಾರಿಯಾಗಲಿದೆ. ನಗರದ ಬಾಬುಗುಡ್ದದಲ್ಲಿ ಅವರ ಹೆಸರಿನಲ್ಲಿ ರೂಪಾಯಿ 3.50 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣವಾಗಲಿದ್ದು ಅದರಲ್ಲಿ ಪರಿಶಿಷ್ಟ ಜಾತಿ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲು ಪ್ರಯೋಜನಕಾರಿಯಾಗಲಿದೆ ಎಂದರು .ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ಹಸ್ತಾಂತರಿಸಲಾಯಿತು.

ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ ರಾಜ್ಯ ಪರಿಶಿಷ್ಟ ಘಟಕದ ಸಂಚಾಲಕರಾದ ಟಿ.ಹೊನ್ನಯ್ಯ, ಹಿರಿಯ ಕಾಂಗ್ರೆಸಿಗ ಹಾಗೂ ಮಾಜಿ ಪವರ್ ಲಿಫ್ಟರ್ ಚಾಂಪಿಯನ್ ಸಂಜೀವ ಬಳ್ಳಾಲ್‍ಬಾಗ್, ಮಾಜಿ ಮೂಡಾ ಅಧ್ಯಕ್ಷರಾದ ಬಿ.ಜಿ.ಸುವರ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಸಾದ್ ಕಾಂಚನ್, ನಗರ ಬ್ಲಾಕ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್ ರವರಿಗೆ ಗೌರವ ವಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪರಿಶಿಷ್ಟ ಘಟಕದ ಅಧ್ಯಕ್ಷರಾದ ಶೇಕರ್ ಕುಕ್ಕೇಡಿ, ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಸಲೀಂ, ಬ್ಲಾಕ್ ಪರಿಶಿಷ್ಟ ಘಟಕದ ಅಧ್ಯಕ್ಷ ಮಿಥುನ್ ಕುಮಾರ್ ಉರ್ವ, ಮುಖ್ಯ ಸಚೇತಕರಾದ ಶಶಿಧರ್ ಹೆಗ್ಡೆ, ಉಪಮೇಯರ್ ರಜನೀಶ್ ಕಾಪಿಕಾಡ್, ರಮಾನಂದ ಪೂಜಾರಿ, ಮೋಹನ್ ಮೆಂಡನ್, ಪಾಲಿಕೆ ಸದಸ್ಯರಾದ ಕುಮಾರಿ ಅಪ್ಪಿಲತಾ, ಪ್ರಕಾಶ್ ಬಿ ಸಾಲ್ಯಾನ್, ರಾಧಾ ಕೃಷ್ಣ ,ದಿನೇಶ್, ನೀರಜ್ ಪಾಲ್, ಸಂಶುದ್ದೀನ್, ಟಿ.ಸಿ. ಗಣೇಶ್, ಅಬ್ಲುಲ್ಲಾ ಬಿನ್ನು, ಖಾಲಿದ್ ಉಜಿರೆ, ಟಿ.ಕೆ.ಸುದೀರ್, ವಿಜಯಲಕ್ಷ್ಮಿ, ಪ್ರವೀಣ್‍ಚಂದ್ರ ಆಳ್ವ, ಪದ್ಮನಾಭ್ ಅಮಿನ್, ಪ್ರೇಮ್ ನಾಥ್ ಪಿ.ಬಿ. ಮುಂತಾದವರು ಉಪಸ್ಥಿತರಿದ್ದರು. ರಘುರಾಜ್ ಕದ್ರಿ ನಿರೂಪಿಸಿದರು, ಪ್ರತಾಪ್ ಸಾಲ್ಯಾನ್ ಕದ್ರಿ ವಂದಿಸಿದರು.


Spread the love