ಮಂಗಳೂರು: ಶಾಸಕ ಜೆ. ಆರ್. ಲೋಬೊರವರ ಶಿಫಾರಸಿನ ಮೇರೆಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೊನಿಗಳಿಗೆ ರಸ್ತೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಮಗಾರಿಗೆ ರೂ. 2.00 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ಇದರಂತೆ ಪರಿಶಿಷ್ಟ ಜಾತಿಯ ಕಾಲೊನಿಗಳ ಅಭಿವೃದ್ಧಿಗೆ ರೂ. 160.00 ಲಕ್ಷ ಹಾಗೂ ಪರಿಶಿಷ್ಟ ಪಂಗಡ ಕಾಲೊನಿಗಳ ಅಭಿವೃದ್ಧಿಗೆ ರೂ. 40.00 ಲಕ್ಷದ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ, ಎಂದು ಶಾಸಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.
ಈ ಅನುದಾನದಿಂದ ಕಲ್ಪನೆ, ಸೂಟರ್ ಪೇಟೆ 1ನೇ ಮತ್ತು 2ನೇ ಬಲ ಅಡ್ಡ ರಸ್ತೆ ಹಾಗೂ 1ನೇ ಎಡ ರಸ್ತೆ, ಜೆಪ್ಪು ಎಸ್.ಸಿ ಕಾಲೊನಿ ರಸ್ತೆ, ಉರ್ವಸ್ಟೋರ್ ಮಾರ್ಕಟ್ ನಿಂದ ಕೋಟೆಕಣಿ ಪರಿಶಿಷ್ಟ ಜಾತಿ ಕಾಲೊನಿಗೆ ಸಂಪರ್ಕ ರಸ್ತೆ, ಆಡುಮರೋಳಿ ಕೋರ್ದಬ್ಬು ದೈವಸ್ಥಾನದವರೆಗೆ ಕಾಂಕ್ರೀಟಿಕರಣ, ಬಾಬುಗುಡ್ಡೆ 1ನೇ ಅಡ್ಡ ರಸ್ತೆಯ 2ನೇ ಎಡ ರಸ್ತೆಯಲ್ಲಿ ಬೃಹತ್ ಕಾಂಕ್ರೀಟ್ ತೋಡು ರಚಿಸಿ ಸ್ಲ್ಯಾಬ್ ಅಳವಡಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಪದವು ಶಕ್ತಿನಗರದ ಸಮಗಾರ ಕಾಲೊನಿಯಿಂದ ಮಹಮ್ಮಾಯಿ ದೇವಸ್ಥಾನದವರೆಗೆ, ಉರ್ವ ಕ್ಯಾಶ್ಯೂ ಫಾಕ್ಟರಿ ಬಳಿ ಅಡ್ಡ ರಸ್ತೆ, ಕಣ್ಣಗುಡ್ಡೆ ಪರಿಶಿಷ್ಟ ಪಂಗಡ ಪ್ರದೇಶದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಉಪಯೊಗಿಸಲಾಗುವುದು ಎಂದು ಪ್ರಕಟನೆಯಲ್ಲಿ ತೀಳಿಸಿದರು.