ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲೆಯ ಮೂಲಕ ಜಾಗೃತಿ
ನೆಹರೂ ಯುವ ಕೇಂದ್ರ ಮಂಗಳೂರು ಯುವ ಕಾರ್ಯ ಹಾಗೂ ಕ್ರೀಡಾ ಸಚಿವರು ಭಾರತ ಸರ್ಕಾರ ಹಾಗೂ ಮಿಹಿಕಾಸ್ ಕ್ರಿಯೇಟಿವ್ ಡ್ರಾಯಿಂಗ್ ಕ್ಲಾಸ್ ಇವರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲೆಯ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ರಘುವೀರ್ ಸೂಟರ್‍ಪೇಟೆ ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಯುವಜನತೆಯ ಪಾತ್ರ ಹಾಗೂ ಪ್ರಾಮುಖ್ಯತೆ ಹಾಗೂ ಜನರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತು ಇಲಾಖೆಯಿಂದ ನಡೆಯುವ ಅಭಿಯಾನಗಳ ಮಾಹಿತಿಯನ್ನು ಪ್ರಾಸ್ತಾವಿಕವಾಗಿ ನೀಡಿದರು.
ಕಾರ್ಯಕ್ರಮದ ಆಯೋಜಕರಾದ ಮೆಹಿಕಾ ನಿಕೋಲ್ ಆರೊನ್ ರವರು ಪರಿಸರ ಸಂರಕ್ಷಣೆಯಲ್ಲಿ ಯುವ ಪೀಳಿಗೆಯ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು. ಶ್ರೀಯುತ ದಿನೇಶ ಹೊಳ್ಳ ಪರಿಸರವಾದಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಗೆ ಯುವ ಜನತೆ ಮುಂದಾಗಬೇಕೆಂದು ಕರೆ ನೀಡಿದರು. ಹಾಗೂ ಡಾ| ಎಸ್.ಎಂ. ಶಿವಪ್ರಕಾಶ್ ಮೀನುಗಾರಿಕ ವಿಶ್ವವಿದ್ಯಾನಿಲಯ ಮಂಗಳೂರು ಇವರು ವಾಯು ಮಾಲಿನ್ಯದಿಂದ ಪ್ರಸ್ತುತವಾಗಿ ಮನುಷ್ಯರ ಆರೋಗ್ಯದ ಮೇಲೆ ಆಗುವುದರ ಪರಿಣಾಮ ಹಾಗೂ ಪರಿಸರ ರಕ್ಷಣೆ ಎಲ್ಲರ ಹೊಣೆ ಎಂಬ ಮಾತುಗಳ ಮೂಲಕ ಮಾಹಿತಿ ನೀಡಿದರು. ಹಾಗೂ ಖ್ಯಾತ ಪರಿಸರವಾದಿ ಜೀತ್ ಮಿಲನ್ ರಾಚ್ ರವರು ಪರಿಸರವನ್ನು ಸಂರಕ್ಷಿಸುವಲ್ಲಿ ಹೆಚ್ಚಿನ ಗಿಡಗಳನ್ನು ನೆಡುವ ಅಭಿಯಾನವನ್ನು ಪ್ರಾರಂಭ ಮಾಡಬೆಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಗಣೇಶ್ ಸೋಮಯಾಜಿ ಹಿರಿಯ ಚಿತ್ರ ಕಲಾಗಾರರು, ಕೋಟಿ ಪ್ರಸಾದ್ ಆಳ್ವ ಮುಖ್ಯಸ್ಥರು ಪ್ರಸಾದ್ ಆರ್ಟ್ ಗ್ಯಾಲರಿ ಮಂಗಳೂರು, ಮಹೇಶ್ ವನ್ಯ ಜೀವಿ ಸಂರಕ್ಷಕರು ಮಂಗಳೂರು, ಪೆÇ್ರ.ಡಾ ಹಿಮಾ ಉರ್ಮಿಳ ಶೆಟ್ಟಿ ಟ್ರಸ್ಟಿ ಡಾ|ಎಂ.ವಿ. ಶೆಟ್ಟಿ ಎಜ್ಯುಕೇಶನಲ್ ಇನ್ಸ್‍ಸ್ಟಿಟ್ಯೂಶನ್ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಯು.ಎನ್.ವಿ. ಸ್ವಯಂ ಸೇವಕರಾದ ತಿಲಕ್ ಕುಮಾರ್, ನಿತಿನ್ ವಾಸ್, ರೀನಾ, ಅಂಕಿತಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೋನಿಯಾ ನಿಕೋಲ್ ಆರೊನ್ ನಿರೂಪಿಸಿದರು.