ಪವನ್ ಬಡೆ ಅಬ್ಬರದ ಶತಕ: ಥಾಣೆ ತಂಡಕ್ಕೆ ಜಯ

Spread the love

ಪವನ್ ಬಡೆ ಅಬ್ಬರದ ಶತಕ: ಥಾಣೆ ತಂಡಕ್ಕೆ ಜಯ

ಉಡುಪಿ: ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಆಸರೆಯಲ್ಲಿ ಮಾಹೆ- ಪರಿಗಣಿತ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಅಂಗವಾಗಿ ಮಾಹೆಯ ಪೂರ್ಣ ಸಹಕಾರದೊಂದಿಗೆ ರಾಷ್ಟ್ರೀಯ ವೈದ್ಯರುಗಳ ಲೆದರ್ ಬಾಲ್‍ಕ್ರಿಕೆಟ್ ಪಂದ್ಯಾಟ ಸಿಲ್ವರ್ ಕ್ರಿಕೆಟ್ ಲೀಗ್ -2018 (ಎಸ್.ಸಿ.ಎಲ್)ರ ಥಾನೆ ಸುಪರ್ಬ್ಸ್ ಮತ್ತು ಕಿಮ್ಸ್ ಹೈದರಾಬಾದ್ ತಂಡಗಳ ನಡುವಣ ಪಂದ್ಯದಲ್ಲಿ ಥಾನೆ ತಂಡವು ಪವನ್ ಬಡೆ ಅವರ ಅಬ್ಬರದ ಅಜೇಯ 106 ರನ್‍ಗಳ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ತಂಡದ ವಿರುದ್ಧ 81 ರನ್‍ಗಳ ಅಂತರದ ಜಯ ದಾಖಲಿಸಿತು.

ಮೊದಲು ಬ್ಯಾಟ್ ಮಾಡಿದ ಥಾನೆ ತಂಡವು ಪವನ್ ಬಡೆ ಅವರು 51 ಚೆಂಡುಗಳಲ್ಲಿ ಭಾರಿಸಿದ 9 ಸಿಕ್ಸರ್ ಮತ್ತು 8 ಸಿಕ್ಸರ್‍ಗಳನ್ನೊಳಗೊಂಡ ಅಜೇಯ 106 ರನ್‍ಗಳ ಶತಕದ ನೆರವಿನಿಂದ 20 ಓವರುಗಳಲ್ಲಿ 5 ವಿಕೇಟುಗಳನ್ನು ಕಳೆದುಕೊಂಡು 211ರ ಮೊತ್ತವನ್ನು ದಾಖಲಿಸಿತು. ಸೋಹನ್ ಥಾಕೂರ್ 53 ರನ್ ಗಳಿಸಿದರು. ಹೈದರಾಬಾದ್ ತಂಡದ ಪರವಾಗಿ ಪ್ರಶಾಂತ್‍ರವರು 28 ರನ್‍ಗಳಿಗೆ ಎರಡು ವಿಕೇಟುಗಳನ್ನು ಪಡೆದರು. ಹೈದರಾಬಾದ್ ತಂಡದ ಜಯನನ್ ಅವರೊಬ್ಬರು ಮಾತ್ರ 44 ರನ್‍ಗಳಿಸಿ ಪ್ರತಿರೋಧ ತೋರಿದರು. ತಂqವು 20 ಓವರುಗಳ ಮುಕ್ತಾಯದಲ್ಲಿ 130 ರನ್‍ಗಳನ್ನು ಮಾತ್ರ ಗಅಳಿಸಲು ಶಕ್ತವಾಗಿ 81 ರನ್‍ಗಳ ಅಂತರದ ಸೋಲನ್ನು ಕಂಡಿತು. ಥಾನೆಯ ಗಣೇಶ್ ಪವಾರ್ 23 ರನ್‍ಗಳಿಗೆ 4, ಸೋಹನ್17 ಕ್ಕೆ 3 , ಪ್ರಣವ್ 26ಕ್ಕೆ 2 ವಿಕೇಟ್ ಪಡೆದು ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸಂಕ್ಷಿಪ್ತ ಸ್ಕೋರ್:
ಥಾನೆ ಸುಪಬ್ರ್ಸ್: 211-5 (20 ಓವರುಗಳು) ಪವನ್ ಬಡೆಅಜೇಯ 106, ಸೋಹನ್‍ಥಾಕೂರ್ 53, ಪ್ರಶಾಂತ್‍ರವರು 28 ರನ್‍ಗಳಿಗೆ 2 ವಿಕೇಟು
ಕಿಮ್ಸ್ ಹೈದರಾಬಾದ್: 130-9 (18.1 ಓವರುಗಳು) ಜಯನನ್ 44,ಗಣೇಶ್ ಪವಾರ್ 23 ರನ್‍ಗಳಿಗೆ 4, ಸೋಹನ್ 17 ಕ್ಕೆ 3 , ಪ್ರಣವ್ 26ಕ್ಕೆ 2 ವಿಕೇಟ್
ಫಲಿತಾಂಶ: ಥಾನೆ ಸುಪರ್ಬ್‍ಗೆ 81 ರನ್‍ಗಳ ಜಯ
ಕ್ಯಾಲಿಕಟ್ ವಿರುದ್ಧ ಪುಣೆತಂಡಕ್ಕೆ 8 ವಿಕೇಟುಗಳ ಜಯ
ಕ್ಯಾಲಿಕಟ್ ಹರಿಕೇನ್‍ತಂಡವುತಾನಾಡಿದಎರಡನೆಯ ಪಂದ್ಯದಲ್ಲಿ ಪದ್ಮಾಲಯ ಪುಣೆತಂಡದ ವಿರುದ್ಧ 12 ಓವರುಗಳಲ್ಲಿ ಕೇವಲ 28 ರ ಕನಿಷ್ಟ ಮೊತ್ತಕ್ಕೆಆಲೌಟ್‍ಆಯಿತು. ಉತ್ತರವಾಗಿ ಪುಣೆತಂಡವು 6 ಓವರುಗಳಲ್ಲಿ 2 ವಿಕೇಟುಗಳನ್ನು ಕಳೆದುಕೊಂಡು ವಿಜಯವನ್ನು ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್:
ಕ್ಯಾಲಿಕಟ್ ಹರಿಕೇನ್: 28-10 (12 ಓವರುಗಳು) ಕುನಾಲ್ ಶಿಂದೆ 8 ರನ್ನಿಗೆ 5 ವಿಕೇಟುಗಳು
ಪದ್ಮಾಲಯ ಸ್ಟಾರ್ ಪುಣೆ: 29ಕ್ಕೆ 2
ಪದ್ಮಾಲಯ ಸ್ಟಾರ್‍ಗೆ 8 ವಿಕೇಟುಗಳ ಜಯ.
ಬೆಂಗಳೂರಿಗ ಮಂಗಳೂರು ವಿರುದ್ಧ 13 ರನ್‍ಗಳ ಜಯ
ಬೆಂಗಳೂರು ಸ್ಪೆಷಲಿಸ್ಟ್‍ತಂಡವು ನೀಡಿದ 184 ರನ್‍ಗಳ ವಿಜಯದಗುರಿಯನ್ನು ಬೆನ್ನಟ್ಟಿದ ಮಂಗಳೂರು ರಾಯಲ್ಸ್‍ತಂಡವು ದಿಟ್ಟತನದಿಂದಆಟವಾಡಿ ವಿಜಯದ ಸಮೀಪಕ್ಕೆ ಬಂದರೂ 13 ರನ್‍ಗಳ ಅಂತರದಿಂದ ಸೋಲನ್ನುಕಂಡಿತು. ಬೆಂಗಳೂರು ತಂಡವು ಅನಿಲ್ ಅವರಆಕರ್ಷಕ 75, ಅಜೇಂದ್ರರವರ 51 ರನ್‍ಗಳ ನೆರವಿನಿಂದ 20 ಓವರುಗಳಲ್ಲಿ 6 ವಿಕೇಟುಗಳ ನಷ್ಟದಲ್ಲಿ 183 ರನ್ ಗಳಿಸಿತು. ಮಂಗಳೂರು ತಂಡವು 20 ಓವರುಗಳ ಮುಕ್ತಾಯದಲ್ಲಿ 9 ವಿಕೇಟುಗಳನ್ನು ಕಳೆದುಕೊಂಡು 170 ರನ್‍ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಮಂಗಳೂರು ತಂಡದ ಪ್ರದೀಪ್ 45, ದೀಪಕ್ 33 ರನ್‍ಗಳನ್ನು ಗಳಿಸಿದರು.
ಸಂಕ್ಷಿಪ್ತ ಸ್ಕೋರ್:
ಬೆಂಗಳೂರು ಸ್ಪೆಷಲಿಸ್ಟ್¼:183-6 (20 ಓವರುಗಳು) ಅನಿಲ್ 75, ಅಜೇಂದ್ರÀ 51, ಪ್ರದೀಪ್ 21-3
ಮಂಗಳೂರು ರಾಯಲ್: 170-9 (20 ಓವರುಗಳು) ಪ್ರದೀಪ್ 45, ದೀಪಕ್ 33, ವಿವೇಕ್ 27-3, ಅಜೇಂದ್ರ 32-2
ಫಲಿತಾಂಶ: ಬೆಂಗಳೂರಿಗೆ 13 ರನ್‍ಗಳ ಜಯ


Spread the love