ಪವಿತ್ರ ಹಜ್ಜ್ ಯಾತ್ರೆ ; ಮದೀನ ತಲುಪಿದ ಕರ್ನಾಟಕದ ಮೊದಲ ತಂಡ

Spread the love

ಪವಿತ್ರ ಹಜ್ಜ್ ಯಾತ್ರೆ  ; ಮದೀನ ತಲುಪಿದ ಕರ್ನಾಟಕದ ಮೊದಲ ತಂಡ

ಸೌದಿ ಅರೇಬಿಯಾ: ಮಂಗಳೂರಿನಿಂದ ಆಗಮಿಸಿದ ರಾಜ್ಯದ ಮೊದಲ ವಿಮಾನವು  ಮದೀನಾ ತಲುಪಿದ್ದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಕಾರ್ಯಕರ್ತರು ಹಾಗೂ ಸೌದಿ  ಪ್ರಜೆಗಳು ಹಾಜಿಗಳನ್ನು ಆದರದಿಂದ ಬರಮಾಡಿಕೊಂಡರು.

ಮಂಗಳೂರಿನಿಂದ ಆಗಮಿಸಿದ್ದ ವಿಮಾನದಲ್ಲಿ ಒಟ್ಟು 159 ಹಾಜಿಗಳು ಆಗಮಿಸಿದ್ದು, ಕೆಸಿಎಫ್ ಹಜ್ ವಾಲೇಂಟಿಯರ್ ಕೋರ್ ಸದಸ್ಯರು  ಹಾಜಿಗಳಿಗೆ ನೀರು,  ಖರ್ಜೂರ ಹಾಗೂ ಜಪಮಾಲೆ,  ನೀಡಿ ಸ್ವಾಗತಿಸಿದರು.

ಈ ವೇಳೆ ಅಬ್ದುಲ್ ಕರೀಂ ಚನ್ನಾವರ ಮಾತನಾಡಿ ಹಜ್ಜ್ ನಿರ್ವಹಿಸಲು ಆಗಮಿಸಿದ ನಮಗೆ ಯಾವುದೇ ತೊಂದರೆಯಾಗಿಲ್ಲ ಪ್ರಯಾಣ ವೇಳೆ ಉತ್ತಮ ಸೌಕರ್ಯ ದೊರಕಿವೆ.  ವಿಮಾನ ನಿಲ್ದಾಣದಲ್ಲಿ ಎರಡರಿಂದ ನಾಲ್ಕು ಗಂಟೆಗಳ ಕಾಲ ಕಾಯಿಸಿದರೂ ಬೇಸರವಾಗಿಲ್ಲ,  ನಮಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕೆಸಿಎಫ್ ಕಾರ್ಯಕರ್ತರು ಮಾಡುತ್ತಾರೆ ಎಂಬ ಭರವಸೆಯಿತ್ತು. ಅದರಂತೆ ವಯಸ್ಕರು ಮಹಿಳೆಯರಿಗೆ ಸಹಾಯ ಮಾಡುತ್ತಿದ್ದು ಕೆಸಿಎಫ್ ಕಾರ್ಯಕರ್ತರ ಸೇವೆಗೆ ಕೃತಙತೆ ಸಲ್ಲಿಸುವುದಾಗಿ ತಿಳಿಸಿದರು. ಇದೇ ವೇಳೆ ದಾರುಲ್ ಇರ್ಶಾದ್ ಎಜುಕೇಶನ್ ಸೆಂಟರ್ ಮಾಣಿ ಇದರ ಸ್ಥಾಪಕಾಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರನ್ನು   ದಾರುಲ್ ಇರ್ಶಾದ್ ಮದೀನಾ ಘಟಕ ವತಿಯಿಂದ ಸ್ವಾಗತಿಸಲಾಯಿತು.


Spread the love