ಪಶ್ಚಿಮ ಬಂಗಾಳದಲ್ಲಿ 2 ವಿದ್ಯಾರ್ಥಿಗಳನ್ನು ಹತ್ಯೆ ಮಾಡಿರುವ ಕುರಿತು ಎಬಿವಿಪಿ ವತಿಯಿಂದ ಹೋರಾಟ
ಮಂಗಳೂರು: ಪಶ್ಚಿಮ ಬಂಗಾಳ ಸರಕಾರದ ಮುಸ್ಲಿಂ ಪುಷ್ಠೀಕರಣದ ನೀತಿಯಿಂದಾಗಿ ಪೆÇಲೀಸ್ ಗೋಲಿಬಾರ್‍ಗೆ ವಿದ್ಯಾರ್ಥಿಗಳಿಬ್ಬರು ಬಲಿಯಾದ ಘಟನೆಯನ್ನು ಖಂಡಿಸಿ ಎಬಿವಿಪಿ ಮಂಗಳೂರು ಮಹಾನಗರ ದಿನಾಂಕ 27.09.2018 ರಂದು ಸಂಜೆ 7.00 ಗಂಟೆಗೆ ಬೆಸೆಂಟ್ ಸರ್ಕಲ್‍ನಲ್ಲಿ ದೀಪವನ್ನಿಟ್ಟು ಪ್ರತಿಭಟನೆ ಮಾಡಲಾಯಿತು.
ಈ ಪ್ರತಿಭಟನೆಯಲ್ಲಿ ನಗರ ಸಹಕಾರ್ಯದರ್ಶಿ ಮಣಿಕಂಠ ಗೌಡರವರು ಮಾತನಾಡಿ ಮಮತಾ ಬ್ಯಾನರ್ಜಿಯವರ ಸರಕಾರ ಅಮಾಯಕ ಇಬ್ಬರು ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಂಡಿದೆ. ಇದೇ ರೀತಿ ಮುಂದುವರೆದರೆ ಅಖಿಲ ಭಾರತಿ ವಿದ್ಯಾರ್ಥಿ ವತಿಯಿಂದ ಉಗ್ರವಾದ ಹೋರಾಡ ನಡೆಸಲಾಗುವುದು ಎಂದು ಪಶ್ಚಿಮ ಬಂಗಾಳ ಸರಕಾರಕ್ಕೆ ಎಚ್ಚರ ನೀಡಿದರು.
ಅದೇ ರೀತಿ ವಿಕಾಸ್ ನಗರ ಕಾರ್ಯದರ್ಶಿಯವರು ಮಾತನಾಡಿ ಬಂಗಾಳಿ ಭಾಷೆಯಲ್ಲಿ ಪಾಠವನ್ನು ಮಾಡಲು ಆರೋಗ್ಯಕರವಾದಂತಹ ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ಇಬ್ಬರು ಅಮಾಯಕ ವಿದ್ಯಾರ್ಥಿಗಳು ಪೆÇಲೀಸ್ ಗುಂಡಿಗೆ ತುತ್ತಾಗಿದ್ದಾರೆ, ಪರೋಕ್ಷವಾಗಿ ಮತ್ತು ನೇರವಾಗಿ ಮಮತಾ ಬ್ಯಾನರ್ಜಿಯವರಿಗೆ ಧಿಕ್ಕಾರವನ್ನು ಕೂಗಿಸಿ ಸೂಕ್ತ ತನಿಖೆ ಆಗದಿದ್ದಲ್ಲಿ ಇಡೀ ದೇಶಾದ್ಯಂತ ಅಖಿಲ ಭಾರತಿ ವಿದ್ಯಾರ್ಥಿ ಪರಿಷತ್ ನೇತೃತ್ವದ ಮೂಲಕ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಹೋರಾಟದಲ್ಲಿ ಬೆಸಂಟ್ ಕಾಲೇಜಿನ ಅಧ್ಯಕ್ಷರು ಕೌಶಿಕ್, ಕಿರಣ್ ಬೇವಿನ ಹಳ್ಳಿ, ಶೀತಲ್ ಕುಮಾರ್ ಜೈನ್, ಸಂದೇಶ್, ಸಂಕೇತ್, ರಾಹುಲ್, ಪ್ರತೀಕ್, ರಕ್ಷಿತ್, ಮನೀಷ್, ಸುಮಿತ್ರ ಹಾಗೂ ಬೆಸಂಟ್ ಕಾಲೇಜಿನ 50 ರಿಂದ 60 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.