ಪಾಂಡೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ, ಪ್ರತಿಜ್ಞಾ ಕಾರ್ಯಕ್ರಮ
ಬ್ರಹ್ಮಾವರ: ಕೆಪಿಸಿಸಿ ನೂತನ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ಪ್ರತಿಜ್ಞಾ ವನ್ನು ಪಾಂಡೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಮಾಜೀ ತಾಲೂಕು ಪಂಚಾಯತ್ ಸದಸ್ಯ ರಾಜಾರಾಮ್ ಅವರ ಮನೆಯ ವಠಾರದಲ್ಲಿ ನಡೆಸಲಾಯಿತು .
ಮಾಜೀ ಶಾಸಕ ಬಸವರಾಜ್ ಅವರು ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರೊಂದಿಗೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು .
ಜ಼ೂಮ್ ಆಪ್ ಮೂಲಕ ನೇರ ಪ್ರಸಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಮೊದಲಿಗೆ ಪ್ರಮಾಣವಚನ ತೆಗೆದುಕೊಳ್ಳಲಾಯಿತು . ಆನಂತರ ಡಿ ಕೆ ಶಿವಕುಮಾರ್ ಅವರು ಭೋದಿಸಿದ ಪಕ್ಷದ ಪ್ರತಿಜ್ಞಾವಿಧಿಯನ್ನು ಪಡೆಯಲಾಯಿತು .
ಪಾಂಡೇಶ್ವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾಜೀ ಶಾಸಕ ಪಿ ಬಸವರಾಜ್ , ಮಾಜೀ ತಾಲೂಕು ಪಂಚಾಯತ್ ಸದಸ್ಯ ಪಿ ರಾಜಾರಾಮ್ , ಹಿರಿಯ ಕಾಂಗ್ರೆಸ್ಸಿಗ ಶೀನ ಪೂಜಾರಿ , ಸಾಸ್ತಾನ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಶ್ರೀಧರ್ ಪಿ ಎಸ್ , ವಿಠ್ಠಲ ಪೂಜಾರಿ , ರಮೇಶ್ ಆಚಾರ್ಯ , ಸಹಕಾರಿ ಬ್ಯಾಂಕ್ ನ ಸದಸ್ಯರಾದ ರಾಜಶೇಖರ್ , ಪಂಚಾಯತ್ ಸದಸ್ಯರಾದ ಲೀಲಾವತಿ , ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ,ಶಂಕರ ಮರಕಾಲ , ಶ್ರೀಧರ್ ಆಚಾರ್ಯ , ದೇವರಾಜ್ ಆಚಾರ್ಯ , ಪ್ರವೀಣ್ ಪೂಜಾರಿ , ರವಿ ಕುಮಾರ್ , ಪ್ರಕಾಶ್ ಪೂಜಾರಿ , ರಾಜು ಕುಂದರ್ , ವೆಂಕಟೇಶ್ , ಮಂಜುನಾಥ್ ಪೂಜಾರಿ , ಐತ ಪೂಜಾರಿ ಅಭಿಜಿತ್ ಪೂಜಾರಿ , ಶ್ರೀನಿವಾಸ್ ಶೆಟ್ಟಿಗಾರ್ , ರೋಶನಿ ಒಲಿವರ್ , ಐವನ್ ಡಿ ಅಲ್ಮೆಡಾ , ಮತ್ತು ಪಂಚಾಯತ್ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರು ಹಿತೈಷಿಗಳು ಅಭಿಮಾನಿಗಳು ಉಪಸ್ಥಿತರಿದ್ದರು .
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೈ ಬಿ ರಾಘವೇಂದ್ರ ಮತ್ತುಅವಿನಾಶ್ ವೈ ಅವರು ಡಿಜಿಟಲ್ ಯೂತ್ ಗಳಾಗಿ ಕಾರ್ಯಕ್ರಮವನ್ನು ನಿರೂಪಿಸಿದ್ದರು