Home Mangalorean News Kannada News ಪಾಂಡೇಶ್ವರ-ಶಾರದೋತ್ಸವ ಗ್ರಾಮೀಣ ಭಾಗದ ದಸರ ಹಬ್ಬವಾಗಿ ಮೂಡಿ ಬಂದಿದೆ –ವಂ. ಸುನೀಲ್ ಡಿಸಿಲ್ವಾ

ಪಾಂಡೇಶ್ವರ-ಶಾರದೋತ್ಸವ ಗ್ರಾಮೀಣ ಭಾಗದ ದಸರ ಹಬ್ಬವಾಗಿ ಮೂಡಿ ಬಂದಿದೆ –ವಂ. ಸುನೀಲ್ ಡಿಸಿಲ್ವಾ

Spread the love

ಪಾಂಡೇಶ್ವರ-ಶಾರದೋತ್ಸವ ಗ್ರಾಮೀಣ ಭಾಗದ ದಸರ ಹಬ್ಬವಾಗಿ ಮೂಡಿ ಬಂದಿದೆ –ವಂ. ಸುನೀಲ್ ಡಿಸಿಲ್ವಾ

ಕೋಟ: ಶಾರದೋತ್ಸವ ಕಾರ್ಯಕ್ರಮಗಳು ಗ್ರಾಮೀಣ ಪರಿಸರದ ದಸರ ಹಬ್ಬವಾಗಿ ಮೂಡಿ ಬಂದಿದೆ ಎಂದು ಸಾಸ್ತಾನದ ಸಂತ ಅಂತೋನಿ ಚರ್ಚನ ಫಾದರ್ ಸುನೀಲ್ ಡಿಸಿಲ್ವಾ ಹೇಳಿದರು.

ಸೋಮವಾರ ಸಾಸ್ತಾನದ ಪಾಂಡೇಶ್ವರ ಶಾಲಾ ವಠಾರದಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ ಪಾಂಡೇಶ್ವರ ಇದ ವತಿಯಿಂದ 30ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಶಾರದೋತ್ಸವ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಿಂದ ಜನಸಾಮಾನ್ಯರಲ್ಲಿ ಭಕ್ತಿಯ ಕೇಂದ್ರವಾಗಿ ರೂಪುಗೊಂಡಿದೆ.ಪ್ರತಿಯೊಬ್ಬರು ಶಾರದೋತ್ಸವನ್ನು ಅರ್ಥೈಸಿಕೊಂಡು ಆಚರಿಸಿ ತಮ್ಮ ಜೀವನದ ಯಶಸ್ಸಿನ ಭಾಗವಾಗಿಸಿಕೊಳ್ಳಿ ಎಂದು ಕರೆಇತ್ತರಲ್ಲದೆ ಅದೊಂದು ಪಾವಿತ್ರತ್ಯೆಯ ನವರಾತ್ರಿಯಾಗಿಸಿಕೊಂಡು ಜೀವನದ ಕಷ್ಟಗಳನ್ನು ದೂರಗೈದು ಶಾಂತಿ ನೆಮ್ಮದಿಯ ಜಾತ್ರೆಯಾಗಿಸಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಸಮಾಜಸೇವಕ ಈಶ್ವರ್ ಮಲ್ಪೆ ಇವರನ್ನು ಸಮಾಜರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸ್ಥಳೀಯ ಸಾಧಕರಾದ ಹಿರಿಯ ಕೃಷಿಕ ಕುಷ್ಟು ಪೂಜಾರಿ,ಸ್ವಚ್ಛಾಗೃಹಿ ಸೀಮಾ ವಿಜಯ್ ಪೂಜಾರಿ,ಮಾದರಿ ಉದ್ಯಮಿ ಜೋಸೆಫ್ ಡಿಸಿಲ್ವಾ ಇವರುಗಳನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ,ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಉಪಸ್ಥಿತರಿದ್ದರು. ಸಮಿತಿಯ ಜೊತೆಕಾರ್ಯದರ್ಶಿ ಉಷಾಗಣೇಶ್ ಸ್ವಾಗತಿಸಿದರು.ಕಾರ್ಯದರ್ಶಿ ದಿನಕರ್ ವರದಿ ವಾಚಿಸಿದರು.ಕಾರ್ಯಕ್ರಮವನ್ನು ಸಮಿತಿಯ ರಾಘವೇಂದ್ರ ರಾಜ್ ನಿರೂಪಿಸಿದರು. ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ವಂದಿಸಿದರು. ಕೋಶಾಧಿಕಾರಿ ವಿಶ್ವನಾಥ ಆಚಾರ್ ಸಹಕರಿಸಿದರು.

ಸೋಮವಾರ ಸಾಸ್ತಾನದ ಪಾಂಡೇಶ್ವರ ಶಾಲಾ ವಠಾರದಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ ಪಾಂಡೇಶ್ವರ ಇದ ವತಿಯಿಂದ 30 ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದಲ್ಲಿಸಮಾಜಸೇವಕ ಈಶ್ವರ್ ಮಲ್ಪೆ ಇವರನ್ನು ಸಮಾಜರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.


Spread the love

Exit mobile version