ಪಾಕಿಸ್ತಾನದ ಹ್ಯಾಕರ್ಸ್ನಿಂದ ಪೇಜಾವರ ಮಠದ ವೆಬ್‍ಸೈಟ್ ಹ್ಯಾಕ್
ಬೆಂಗಳೂರು: ಭಾರತದ ಸರ್ಜಿಕಲ್ ಸ್ಟ್ರೈಕ್ ಪ್ರತಿಯಾಗಿ ಪಾಕಿಸ್ತಾನದ ಹ್ಯಾಕರ್ಸ್ ಈಗ ದೇಶದ ಧಾರ್ಮಿಕ ಕೇಂದ್ರಗಳ ವೆಬ್‍ಸೈಟ್ ಮೇಲೆ ಕಣ್ಣು ಹಾಕಿದ್ದು ಉಡುಪಿ ಪೇಜಾವರ ಮಠದ ವೆಬ್‍ಸೈಟನ್ನು ಹ್ಯಾಕ್ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಪೇಜಾವರ ಮಠದ ಅಧಿಕೃತ ವೆಬ್‍ಸೈಟ್ www.pejavaraparyaya2016.org ಹ್ಯಾಕ್ ಆಗಿರುವುದು ಮಠದ ಆಡಳಿತ ಮಂಡಳಿಯ ಗಮನಕ್ಕೆ ಬಂದಿತ್ತು. ವೆಬ್‍ಸೈಟ್ ಓಪನ್ ಮಾಡುವಾಗ ‘Hacked by pak cyber professionals’ ಎಂಬ ಸಂದೇಶ ಕಾಣುತಿತ್ತು.
ಮುಂಜಾಗೃತಾ ಕ್ರಮವಾಗಿ ಕೃಷ್ಣಮಠದ ಆಡಳಿತ ಮಂಡಳಿಯವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಉಡುಪಿ ನಗರ ಠಾಣಾ ಪೊಲೀಸರು ಅರ್ಜಿಯನ್ನು ಸೈಬರ್ ಕ್ರೈಂ ವಿಭಾಗಕ್ಕೆ ರವಾನೆ ಮಾಡಿದ್ದಾರೆ. ಸೈಬರ್ ಕ್ರೈ ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ.
ಆದರೆ ಇಂದು ವೆಬ್ ಸೈಟ್ ಎಂದಿನಂತೆ ಕಾರ್ಯಾಚರಿಸುತ್ತಿದೆ. ಕೃಷ್ಣಮಠ- ಪೇಜಾವರ ಮಠಕ್ಕೆ ಸಂಬಂಧಪಟ್ಟಂತೆ ಎಲ್ಲಾ ಕಾರ್ಯಕ್ರಮದ ವಿವರ, ಫೋಟೋ, ವೀಡಿಯೋಗಳು ಲಭ್ಯವಾಗುತ್ತಿದೆ.