ಪಾಕ್ ಪರ ಘೋಷಣೆಯ ತಿರುಚಿದ ವೀಡಿಯೊ ವೈರಲ್ ಮಾಡಿದವರ ವಿರುದ್ದ ಕ್ರಮಕ್ಕೆ ಪೋಲಿಸ್ ಆಯುಕ್ತರಿಗೆ ಕಾಂಗ್ರೆಸ್ ಮನವಿ

Spread the love

ಪಾಕ್ ಪರ ಘೋಷಣೆಯ ತಿರುಚಿದ ವೀಡಿಯೊ ವೈರಲ್ ಮಾಡಿದವರ ವಿರುದ್ದ ಕ್ರಮಕ್ಕೆ ಪೋಲಿಸ್ ಆಯುಕ್ತರಿಗೆ ಕಾಂಗ್ರೆಸ್ ಮನವಿ

ಮಂಗಳೂರು: ಕಾಂಗ್ರೆಸ್ ಸಂಭ್ರಮಾಚರಣೆಯ ವೀಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ದೇಶದ್ರೋಹಿಗಳನ್ನು ಶೀಘ್ರ ಪತ್ತೆ ಹಚ್ಚುವಂತೆ ಆಗ್ರಹಿಸಿ ಮಾಜಿ ಶಾಸಕ ಜೆ. ಆರ್. ಲೋಬೊ ನೇತೃತ್ವದ ಕಾಂಗ್ರೆಸ್ ಪಕ್ಷದ ನಿಯೋಗವು ಸೋಮವಾರ ಮಂಗಳೂರು ನಗರ ಪೋಲಿಸ್ ಆಯುಕ್ತ ವಿಪುಲ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ದಕ ಜಿಲ್ಲಾ ಕಾಂಗ್ರೆಸ್ ಕಚೇರಿಯ ಎದುರು ಶನಿವಾರ ಸಂಭ್ರಮಾಚರಣೆ ನಡೆಸಲಾಗಿತ್ತು. ಈ ವೇಳೆ ಕೆಲವೊಂದ ಕಿಡಿಗೇಡಿಗಳು ಸಂಭ್ರಮಾಚಾರಣೆಯ ವೀಡಿಯೊಗಳನ್ನು ಸೆರೆ ಹಿಡಿದು ಪಾಕಿಸ್ತಾನ ಪರ ಘೋಷಣೆಗಳನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಆದರೆ ಸಂಬ್ರಮಾಚರಣೇಯ ವೇಳೆ ಅಂತಹ ಯಾವುದೇ ಘಟನೆ ನಡೆದಿಲ್ಲ ಅಲ್ಲದೆ ಈ ವೇಳೆ ಸ್ಥಳದಲ್ಲಿ ಮಾಧ್ಯಮದವರೂ ಕೂಡ ಇದ್ದರು ಅಂತಹ ಏನಾದರೂ ಘಟನೆ ನಡೆದಿದ್ದರೆ ಅದು ಅವರ ಗಮನಕ್ಕೂ ಬರುತ್ತಿತ್ತು. ನಮ್ಮ ವಿರುದ್ದ ಹತಾಶೆಯಿಂದ ದೇಶದ್ರೋಹಿಗಳೂ ಇಂತಹ ಕೃತ್ಯವನ್ನು ಎಸಗಿದ್ದು ಅಂತವರ ವಿರುದ್ದ ಈಗಾಗಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕದ್ರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಕೃತ್ಯದ ಹಿಂದಿರುವ ದುಷ್ಕರ್ಮಿಗಳನ್ನು ಕೂಡಲೇ ಪತ್ರೆ ಹಚ್ಚಿ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಕಮೀಷನರ್ ವಿಪುಲ್ ಕುಮಾರ್ ಅವರು ಯಾವುದೇ ಕೋಮು ಪ್ರಚೋದಿತ ಸಂದೇಶಗಳು ಮಾಧ್ಯಮದವರಿಗೆ ಅಥವಾ ಸಾರ್ವಜನಿಕರಿಗೆ ಬಂದಲ್ಲಿ ಕೂಡಲೇ ಅದನ್ನು ಬೇರೆಯವರಿಗೆ ಫಾರ್ವರ್ಡ್ ಮಾಡದೇ ಪೋಲಿಸರಿಗೆ ತಿಳಿಸುವಂತೆ ಸೂಚನೆಯನ್ನು ನೀಡಿಲಾಗಿದೆ. ಯಾರೇ ಕೂಡ ಅಂತಹ ಸುಳ್ಳೂ ಸುದ್ದಿಗಳನ್ನು ಪ್ರಚುರಪಡಿಸಿದರೆ ಅಂತಹವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಗಳ್ಳಲಾಗುವದು. ಮಂಗಳೂರು ನಗರವನ್ನು ಒಳ್ಳೆಯ ಕೆಲಸಕ್ಕಾಗಿ ಪ್ರತಿಯೊಬ್ಬರು ಜೊತೆಯಾಗಿ ಕೆಲಸ ಮಾಡಲು ಉಪಯೋಗಿಸಬೇಕೇ ವಿನಹ ಇಂತಹ ಅತೀರೇಕದ ವರ್ತನೆಗಳಿಗಲ್ಲ ಎಂದರು.


Spread the love