ಪಾಪ್ಯುಲರ್ ಫ್ರಂಟ್ ಮಂಗಳೂರು ಜಿಲ್ಲಾಧ್ಯಕ್ಷರಾಗಿ ಮೊಹಮ್ಮದ್ ನವಾಝ್ ಆಯ್ಕೆ
ಮಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ನಾಯಕರ ಅಯ್ಕೆ ಪ್ರಕ್ರಿಯೆ ಕಾರ್ಯಕ್ರಮ ಮಂಗಳೂರಿನ ಝೀನತ್ ಬಕ್ಷ್ ಯತೀಂ ಖಾನ ಸಭಾಂಗಣದಲ್ಲಿ ದಿನಾಂಕ 24-01-2017 ರಂದು ನಡೆಯಿತು.
ಈ ಸಭೆಯಲ್ಲಿ ನೂತನ ಅವಧಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಂಗಳೂರು ಜಿಲ್ಲಾಧ್ಯಕ್ಷರಾಗಿ ಆಗಿ ಮೊಹಮ್ಮದ್ ನವಾಝ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕಾದರ್ ಆಯ್ಕೆಯಾದರು.
ಜಿಲ್ಲೆಯ 2016ನೇ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಲಾಯಿತು. ಸಭೆಯಲ್ಲಿ ರಾಜ್ಯ ಸಮೀತಿ ಸದಸ್ಯರಾದ ಶಾಫಿ ಬೆಳ್ಳಾರೆ, ನಿರ್ಗಮನ ಅದ್ಯಕ್ಷರಾದ ಮೊಹಮ್ಮದ್ ಹನೀಫ್, ಹಾಗೂ ಕಾರ್ಯದರ್ಶಿ ಶರೀಫ್ ಉಪಸ್ಥಿತಿಯಿದ್ದರು, ರಾಜ್ಯ ಸಮೀತಿ ಸದಸ್ಯರಾದ ಶಾಫಿ ಬೆಳ್ಳಾರೆ ಸಮಾರೋಪ ಭಾಷಣದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.