ಪಾಲಿಕೆಯಲ್ಲಿ ಮಲೇರಿಯಾ, ಡೆಂಗ್ಯೂ ನಿಯಂತ್ರಣಕ್ಕೆ ಪೂರ್ಣಕಾಲಿಕ ವೈದ್ಯರು- ಶಾಸಕ ಕಾಮತ್

Spread the love

ಪಾಲಿಕೆಯಲ್ಲಿ ಮಲೇರಿಯಾ, ಡೆಂಗ್ಯೂ ನಿಯಂತ್ರಣಕ್ಕೆ ಪೂರ್ಣಕಾಲಿಕ ವೈದ್ಯರು- ಶಾಸಕ ಕಾಮತ್

ಮಂಗಳೂರು: ಮಲೇರಿಯಾ, ಡೆಂಗ್ಯೂ ನಿಯಂತ್ರಣಕ್ಕೆ ಪಾಲಿಕೆಯಲ್ಲಿ ಪೂರ್ಣಕಾಲಿಕ ವೈದ್ಯರನ್ನು ನೇಮಿಸುವ ಬಗ್ಗೆ ಚಿಂತಿಸಿರುವುದಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಅವರೊಂದಿಗೆ ಚಿಂತಿಸಿ ಪಾಲಿಕೆಯ ಮಲೇರಿಯಾ ಸೆಲ್ ಗೆ ಪೂರ್ಣಕಾಲಿಕ ವೈದ್ಯರನ್ನು ನೇಮಿಸಲಾಗುವುದು. ಒಂದು ವೇಳೆ ಸರಕಾರದ ಕಡೆಯಿಂದ ಸಹಕಾರ ಅಗತ್ಯಬಿದ್ದಲ್ಲಿ ಸರಕಾರದ ಗಮನವನ್ನು ಕೂಡ ಸೆಳೆಯಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಕಾಮತ್ ಹೇಳಿದ್ದಾರೆ.

ಮಂಗಳೂರು ನಗರದಲ್ಲಿ ಯಾವುದೇ ರೋಗ ಅಥವಾ ಕಾಯಿಲೆಯಂತಹ ದುರ್ಘಟನೆಗಳು ನಡೆದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಅದಕ್ಕೆ ಮೊದಲೇ ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯಕತೆ ಇದೆ. ವೈದ್ಯರನ್ನು ನೇಮಿಸಿದ ನಂತರ ಅವರು ಮಳೆಗಾಲದ ಪೂರ್ವ ಮತ್ತು ಇನ್ನಿತರ ಸಮಯದಲ್ಲಿಯೂ ಜನರು ವೈದ್ಯರನ್ನು ಸಂಪರ್ಕಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಮಳೆಗಾಲದ ಪೂರ್ವ ಸೂಕ್ತ ಕ್ರಮ ಕೈಗೊಳ್ಳುವುದರಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳನ್ನು ತಡೆಯಲು ಸಾಧ್ಯವಿದೆ. ಆದ್ದರಿಂದ ಪಾಲಿಕೆಯಲ್ಲಿಯೇ ಪೂರ್ಣಕಾಲಿಕ ವೈದ್ಯರು ಇದ್ದರೆ ಜನರಿಗೂ ಅನುಕೂಲವಾಗುತ್ತದೆ. ಜನಸಾಮಾನ್ಯರ ಉಪಯೋಗಕ್ಕಾಗಿ ಈ ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಕಾಮತ್ ತಿಳಿಸಿದ್ದಾರೆ.


Spread the love