ಪಾಲಿಕೆ, ರಾಜ್ಯ ಸರಕಾರ ಐದು ವರ್ಷ ಮಾಡಿದ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಸಮಸ್ಯೆ- ಶಾಸಕ ಕಾಮತ್

Spread the love

ಪಾಲಿಕೆ, ರಾಜ್ಯ ಸರಕಾರ ಐದು ವರ್ಷ ಮಾಡಿದ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಸಮಸ್ಯೆ- ಶಾಸಕ ಕಾಮತ್

ಮಂಗಳೂರು: ಐದು ವರ್ಷ ಮಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರವೇ ಅಧಿಕಾರದಲ್ಲಿದ್ದರೂ ಮಂಗಳೂರಿನ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗಿಲ್ಲದಿರುವುದು ಆ ಪಕ್ಷದ ನಿರ್ಲಕ್ಷ್ಯವೇ ಕಾರಣ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ತುಂಬೆಯಿಂದ ಮಂಗಳೂರು ನಗರಕ್ಕೆ ಬರುವ ಕುಡಿಯುವ ಪಡೀಲ್ ಮತ್ತು ಬೆಂದೂರ್ ವೆಲ್ ನ ನೀರು ಸಂಗ್ರಹಣಾಗಾರದಲ್ಲಿ ಶೇಖರಣೆಗೊಂಡು ನಂತರ ಅಲ್ಲಿಂದ ಪಂಪ್ ಆಗಿ ವಿವಿದೆಡೆ ಪೂರೈಕೆಯಾಗುತ್ತದೆ.ಆದರೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಅಲ್ಲಿಂದ ನೀರು ಪಂಪ್ ಆಗುವುದಿಲ್ಲ. ಇದರಿಂದ ವಾರ್ಡುಗಳಿಗೆ ನೀರು ಪೂರೈಕೆ ಆಗದೆ ಜನ ಸಮಸ್ಯೆ ಅನುಭವಿಸುತ್ತಾರೆ.ಇದನ್ನು ನೋಡಬೇಕಾಗಿದ್ದದ್ದು ಇತ್ತೀಚಿನ ತನಕ ಪಾಲಿಕೆಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಆಡಳಿತ.ಕಾಂಗ್ರೆಸ್ ನ ಜಿಲ್ಲಾ ಉಸ್ತುವಾರಿ ಸಚಿವರುಗಳು ರಾಜ್ಯ ಸರಕಾರದೊಂದಿಗೆ ಸಂವಹನ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ಹಾಗೆ ಮಾಡದ ಪರಿಣಾಮ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಮಿದ್ಯುತ್ ಸಮಸ್ಯೆಯ ನೆಪವೊಡ್ಡಿ ಮನಪಾಲಿಕೆಯು ಸಮರ್ಪಕವಾಗಿ ನೀರು ಪೂರೈಸಲು ಮನಸ್ಸು ಮಾಡುತ್ತಿಲ್ಲ.ಸದ್ಯ ಮೈತ್ರಿ ಸರಕಾರದ ಎರಡೂ ಪಕ್ಷಗಳು ಸರಕಾರ ಉಳಿಸಲು ಒದ್ದಾಡುತ್ತಿರುವುದರಿಂದ ಅವರಿಗೆ ನಾಗರಿಕರ ತೊಂದರೆ ಕಾಣಿಸುವುದಿಲ್ಲ ಎಂದು ಶಾಸಕ ಕಾಮತ್ ಹೇಳಿದ್ದಾರೆ.ಕೇಂದ್ರ ಸರಕಾರ ನೀಡುವ ಅನುದಾನ ಬಳಸಿ ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು.ಆದರೆ ಅದನ್ನೂ ಕೂಡ ಪ್ರಯತ್ನಿಸದೆ ನಿರ್ಲಕ್ಷ್ಯ ವಹಿಸಿರುವುದು ಯಾಕೆ ಎಂದು ಶಾಸಕ ಕಾಮತ್ ಪ್ರಶ್ನಿಸಿದ್ದಾರೆ.
ಮಳೆಗಾಲದಲ್ಲಿಯೇ ಜನರಿಗೆ ನೀರಿನ ಕೊರತೆ ಉಂಟಾದರೆ ಇನ್ನು ಬೇಸಿಗೆಯ ಪರಿಸ್ಥಿತಿ ಹೇಗಿರಬಹುದು ಎನ್ನುವ ಆತಂಕ ಜನರಲ್ಲಿದೆ.ಜನರ ತೆರಿಗೆಯ ಹಣವನ್ನು ಪೋಲು ಮಾಡಿದ ರಾಜ್ಯ ಸರಕಾರ ಮತ್ತು ಮಹಾನಗರ ಪಾಲಿಕೆಯಿಂದ ಜನ ಬೇರೆನೂ ನಿರೀಕ್ಷಿಸಲು ಸಾಧ್ಯ ಎಂದು ಕಾಮತ್ ಪ್ರಶ್ನಿಸಿದ್ದಾರೆ.ತಾವು ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಅವರು ತಿಳಿಸಿದ್ದಾರೆ.


Spread the love