Spread the love
ಪಾಲ್ದನೆ ಸಂತ ತೆರೇಸಾ ಚರ್ಚಿನಲ್ಲಿ “ಪವಿತ್ರಗುರುವಾರ” ಆಚರಣೆ
ಜಗತಿನಾದ್ಯಂತ ಇರುವ ಕ್ರೈಸ್ತ ಧರ್ಮಿಯರು ಪರಮಪೂಜ್ಯ ಯೇಸು ಕ್ರಿಸ್ತರು ತಮ್ಮ ಕೊನೆಯ ಭೋಜನವನ್ನು ತನ್ನ 12ಮಂದಿ ಶಿಷ್ಯರೊಂದಿಗೆ ಸ್ವೀಕರಿಸಿದ ಈ ದಿನವನ್ನು“ಪವಿತ್ರಗುರುವಾರ”ವೆಂದು ಆಚರಿಸುತ್ತಾರೆ.
ಈ ದಿನವನ್ನುಸ್ಮರಿಸಿ ಮಂಗಳೂರಿನ ಪಾಲ್ದನೆಯಲ್ಲಿರುವ ಸಂತ ತೆರೇಸಾ ಚರ್ಚಿನಲ್ಲಿ ಬಲಿಪೂಜೆಯೊಂದಿಗೆ ಪವಿತ್ರ ಗುರುವಾರವನ್ನು ಆಚರಿಸಲಾಯಿತು. ಚರ್ಚಿನ ವಾಸ್ತವ್ಯ ಧರ್ಮಗುರುಗಳಾದ ವಂದನೀಯ ಫಾ| ಪಾವುಲ್‍ಕ್ರಾಸ್ತಾ ಇವರು 12 ಜನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ಸೇವೆಯ ಮನೋಭಾವವನ್ನು ಮನದಟ್ಟು ಮಾಡಿದರು. ಮಂಗಳೂರು ಧರ್ಮಪ್ರಾಂತ್ಯವು ಈ ವರ್ಷವನ್ನು ಯುವಕ ಮತ್ತು ಯುವತಿಯರ ವರ್ಷವನ್ನಾಗಿ ಷೋಷಿಸಿದ್ದರಿಂದ ಚರ್ಚಿನ12 ಜನ ಯುವಕ ಮತ್ತು ಯುವತಿಯರನ್ನು ಶಿಷ್ಯರನ್ನಾಗಿ ಆರಿಸಲಾಗಿತ್ತು.
ಬಲಿಪೂಜೆಯ ಸಂದರ್ಭದಲ್ಲಿ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ನಿರ್ದೇಶಕರಾದ ವಂದನೀಯ ಫಾ| ರೋಹಿತ್‍ಡಿ ಕೋಸ್ಟ ಇವರು ಉಪಸ್ಥಿತರಿದ್ದರು.
Spread the love