Home Mangalorean News Kannada News ಪಾಲ್ದನೆ ಸಂತ ತೆರೇಸಾ ಚರ್ಚಿನಲ್ಲಿ “ಪವಿತ್ರಗುರುವಾರ” ಆಚರಣೆ

ಪಾಲ್ದನೆ ಸಂತ ತೆರೇಸಾ ಚರ್ಚಿನಲ್ಲಿ “ಪವಿತ್ರಗುರುವಾರ” ಆಚರಣೆ

Spread the love

ಪಾಲ್ದನೆ ಸಂತ ತೆರೇಸಾ ಚರ್ಚಿನಲ್ಲಿ “ಪವಿತ್ರಗುರುವಾರ” ಆಚರಣೆ

ಜಗತಿನಾದ್ಯಂತ ಇರುವ ಕ್ರೈಸ್ತ ಧರ್ಮಿಯರು ಪರಮಪೂಜ್ಯ ಯೇಸು ಕ್ರಿಸ್ತರು ತಮ್ಮ ಕೊನೆಯ ಭೋಜನವನ್ನು ತನ್ನ 12ಮಂದಿ ಶಿಷ್ಯರೊಂದಿಗೆ ಸ್ವೀಕರಿಸಿದ ಈ ದಿನವನ್ನು“ಪವಿತ್ರಗುರುವಾರ”ವೆಂದು ಆಚರಿಸುತ್ತಾರೆ.

ಈ ದಿನವನ್ನುಸ್ಮರಿಸಿ ಮಂಗಳೂರಿನ ಪಾಲ್ದನೆಯಲ್ಲಿರುವ ಸಂತ ತೆರೇಸಾ ಚರ್ಚಿನಲ್ಲಿ ಬಲಿಪೂಜೆಯೊಂದಿಗೆ ಪವಿತ್ರ ಗುರುವಾರವನ್ನು ಆಚರಿಸಲಾಯಿತು. ಚರ್ಚಿನ ವಾಸ್ತವ್ಯ ಧರ್ಮಗುರುಗಳಾದ ವಂದನೀಯ ಫಾ| ಪಾವುಲ್‍ಕ್ರಾಸ್ತಾ ಇವರು 12 ಜನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ಸೇವೆಯ ಮನೋಭಾವವನ್ನು ಮನದಟ್ಟು ಮಾಡಿದರು. ಮಂಗಳೂರು ಧರ್ಮಪ್ರಾಂತ್ಯವು ಈ ವರ್ಷವನ್ನು ಯುವಕ ಮತ್ತು ಯುವತಿಯರ ವರ್ಷವನ್ನಾಗಿ ಷೋಷಿಸಿದ್ದರಿಂದ ಚರ್ಚಿನ12 ಜನ ಯುವಕ ಮತ್ತು ಯುವತಿಯರನ್ನು ಶಿಷ್ಯರನ್ನಾಗಿ ಆರಿಸಲಾಗಿತ್ತು.

ಬಲಿಪೂಜೆಯ ಸಂದರ್ಭದಲ್ಲಿ ಸಂತ ಜೋಸೆಫ್‍ ಇಂಜಿನಿಯರಿಂಗ್‍ ಕಾಲೇಜಿನ ಸಹಾಯಕ ನಿರ್ದೇಶಕರಾದ ವಂದನೀಯ ಫಾ| ರೋಹಿತ್‍ಡಿ ಕೋಸ್ಟ ಇವರು ಉಪಸ್ಥಿತರಿದ್ದರು.


Spread the love

Exit mobile version