ಪಾವೂರು ಉಳಿಯ : ಹಾನಿಗೀಡಾದ ಸೇತುವೆ ದುರಸ್ತಿಗೆ ನೆರವು ನೀಡಿದ ಯೂತ್ ಕಾಂಗ್ರೆಸ್
ಮಂಗಳೂರು: ದುಷ್ಕರ್ಮಿಗಳಿಂದ ಇತ್ತೀಚೆಗೆ ಹಾನಿಗೀಡಾದ ಪಾವೂರು ಉಳಿಯದ ಸೇತುವೆ ದುರಸ್ತಿಗೆ ಗುರುವಾರ ಪಾವೂರು ಗ್ರಾಮ ಯುವ ಕಾಂಗ್ರೆಸ್ ಸಮಿತಿಯು ನೆರವು ನೀಡಿತು.
ಸಮಿತಿಯ ಕಾರ್ಯಕರ್ತರು ಮತ್ತು ಮುಖಂಡರನ್ನು ಒಳಗೊಂಡ ನಿಯೋಗವು ಘಟನೆ ನಡೆದ ಸ್ಥಳಕ್ಕೆ ಭೇಟಿ ಹಲಗೆಯನ್ನು ದೋಣಿ ಮೂಲಕ ಸಾಗಿಸಿತಲ್ಲದೆ, ದುರಸ್ತಿ ಕಾರ್ಯದಲ್ಲೂ ತೊಡಗಿಸಿಕೊಂಡಿತು. ಪಾವೂರು ಉಳಿಯಕ್ಕೆ ಸಂಪರ್ಕಿಸುವ ಸೇತುವೆ ಯನ್ನು ಇನ್ ಫಂಟ್ ಜೀಸಸ್ ಚರ್ಚ್ ನೇತೃತ್ವದಲ್ಲಿ ಈ ಮೊದಲು 18 ಲಕ್ಷ ರೂಪಾಯಿಯಲ್ಲಿ ನಿರ್ಮಿಸಲಾಗಿತ್ತು.
ಕಿಡಿಗೇಡಿಗಳ ದುಶ್ಕೃತ್ಯದಿಂದ ಸೇತುವೆಯ ಹಲಗೆ ಮತ್ತು ಇನ್ನಿತರ ಸಾಮಾಗ್ರಿಗಳನ್ನು ನಾಶ ಮಾಡಿ ನದಿಗೆ ಬಿಸಾಡಿ ಅಪಾರ ನಷ್ಟ ಸಂಭವಿಸಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಯು.ಟಿ.ಖಾದರ್ ಮತ್ತು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು,ಸದಸ್ಯರಾದ ಸಮದ್ ಅಡ್ಯಾರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಉಳಿಯ ಪರಿಸರದ ಜನತೆಗೆ ಭರವಸೆ ನೀಡಿದ್ದರು. ಶೀಘ್ರವೇ ಹಾನಿಯಾದ ಸೇತುವೆಯ ಕಾಮಗಾರಿ ಮತ್ತು ಅದರ ಪರಿಕರಗಳನ್ನು ನೀಡುತ್ತೇನೆಂದು ಹೇಳಿದ್ದರು.ಅದರಂತೆಯೇ ಇಂದು ಯು.ಟಿ.ಖಾದರ್ ಮಾರ್ಗದರ್ಶನದಲ್ಲಿ ಪಾವೂರು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಉಳಿಯ ಪ್ರದೇಶದ ಜನರೊಂದಿಗೆ ಸ್ವತಃ ಕಾಮಾಗಾರಿಯಲ್ಲಿ ಜತೆಯಾಗಿ ಸಾರ್ವಜನಿಕರ ಪ್ರಶಂಶೆಗೆ ಪಾತ್ರರಾದರು.
ಉಳಿಯ ಇನ್ ಫಂಟ್ ಜೀಸಸ್ ಚರ್ಚ್ ನ ಪ್ರಧಾನ ಧರ್ಮಗುರುಗಳು ಜೆರಾಲ್ಡ್ ಲೋಬೋ ಮಾತನಾಡಿ ನಾವು 18 ಲಕ್ಷ ರೂಪಾಯಿ ಖರ್ಚಿನಿಂದ ಸೇತುವೆಯನ್ನು ನಿರ್ಮಿಸಿದ್ದೆವು, ಅದನ್ನು ಕಿಡಿಗೇಡಿಗಳು ದ್ವಂಸ ಮಾಡಿದ್ದು ಬೇಸರ ತಂದಿದೆ, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬೇಟಿ ನೀಡಿ ನಮ್ಮ ಕಷ್ಟಕ್ಕೆ ಸ್ಪಂದಿಸಿ, ಸೇತುವೆಗೆ ಬೇಕಾದ ಹಲಗೆಯನ್ನು ನೀಡಿದ್ದಾರೆ , ಮತ್ತು ತಾಲೂಕು ಪಂಚಾಯತ್ ಹಾಗೂ ಯೂತ್ ಕಾಂಗ್ರೆಸ್ ಅವರು ನಮ್ಮೊಂದಿಗೆ ಕೈ ಜೋಡಿಸಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು, ಪಂಚಾಯತ್ ಅಧ್ಯಕ್ಷ ಪಿರೋಝ್ ಮಲಾರ್, ಸದಸ್ಯರಾದ ವಿವೇಕ್ ರೈ, ಕಾರ್ಮಿಕ ಘಟಕದ ಅಧ್ಯಕ್ಷ ಅಬುಸಾಲಿ ಗಾಡಿಗದ್ದೆ, ಯುವ ಕಾಂಗ್ರೆಸ್ ಉಪಾಧ್ಯಕ್ಷ ರಿಯಾಝ್ ಗಾಡಿಗದ್ದೆ, ಪಾವೂರು ಯುವ ಕಾಂಗ್ರೆಸ್ ಅಧ್ಯಕ್ಷ ದಾವೂದ್ ಬಾಷಾ, ಉಪಾಧ್ಯಕ್ಷ ಪ್ರದೀಪ್ ಡಿಸೋಜ, ಕಾರ್ಯದರ್ಶಿ ಇರ್ಪಾನ್ ಮಲಾರ್, ನೌಶಾದ್ ಊಲ್ ಮಾರ್ಟ್, ವಾರ್ಡ್ ಅಧ್ಯಕ್ಷರಾದ ಜೆರಾಲ್ಡ್ ಬ್ರಾಕ್ಸ್, ಯುವ ಕಾಂಗ್ರೆಸ್ ಸದಸ್ಯರಾದ ಜಾಫರ್,ಇಂಮ್ರಾನ್,ರಿಯಾಝ್, ಇಂತಿಯಾಝ್,ನೌಫಲ್, ನೌಝೀಲ್, ನಾಝಿಮ್ ಟಿ.ಎಚ್, ಅನ್ವರ್, ಇಸ್ತಾರ್, ರಿಝ್ವಾನ್, ನಿಯಾಝ್, ಹನೀಫ್ ಕುಂಜತ್ತೂರು, ನಿಸಾರ್, ಶಬೀರ್ ಮತ್ತು ಉಳಿಯ ಇನ್ ಫಂಟ್ ಜೀಸಸ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.