ಪಿಎಫ್ ಐ ಕಾರ್ಯಕರ್ತರ ಮೇಲೆ ನಡೆದ ಪೋಲಿಸ್ ದೌರ್ಜನ್ಯ ಖಂಡನೀಯ: ಕಾಮಿಲ್ ಸಖಾಫಿ ತೋಕೆ

Spread the love

ಪಿಎಫ್ ಐ ಕಾರ್ಯಕರ್ತರ ಮೇಲೆ ನಡೆದ ಪೋಲಿಸ್ ದೌರ್ಜನ್ಯ ಖಂಡನೀಯ: ಕಾಮಿಲ್ ಸಖಾಫಿ ತೋಕೆ

ಮಂಗಳೂರು: ಕುರೈಶಿಯ ಮೇಲೆ ಪೋಲೀಸರು ನಡೆಸಿದ ದೌರ್ಜನ್ಯದ ವಿರುದ್ಧ ಪಿಎಫ್ ಐ ನಡೆಸಿದ ಪ್ರತಿಭಟನೆಯ ವೇಳೆ ಪೋಲೀಸರು ತೋರಿಸಿದ ಅಮಾನವೀಯ ದೌರ್ಜನ್ಯ ನಿಜಕ್ಕೂ ಖಂಡನಾರ್ಹ ಎಂದು ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಪ್ರತಿಕ್ರಿಯಸಿದ್ದಾರೆ.

ಪಿಎಫ್ ಐ  ಸಂಘಟನೆಯವರು ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಎಂಬುದು ಈ ರೀತಿಯ ರಾಕ್ಷಸೀಯ ವರ್ತನೆಗೆ ಯಾವತ್ತೂ ಸಮರ್ಥನೆಯಾಗಲಾರದು.ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ್ದಕ್ಕೆ ಅದರ ನಾಯಕರ ಮೇಲೆ ಮೊಖದ್ದಮೆ ದಾಖಲಿಸಬಹುದಿತ್ತೇ ವಿನಹ ಇಂತಹ ಅತಿರೇಕದ ವರ್ತನೆ ತೋರಿಸುವುದಕ್ಕೆ ಯಾವುದೇ ಅರ್ಥವಿಲ್ಲ.

ಒಂದೆಡೆ ಕೋಣವನ್ನು ಹೊಡೆಯಲಾಗುತ್ತದೆ ಎಂಬ ಕಾರಣಕ್ಕೆ ಸರಕಾರ ಮತ್ತು ಪೋಲೀಸರು ಕಂಬಳವನ್ನೇ ನಿಷೇಧಿಸುತ್ತಾರೆ. ಆದರೆ ಅದೇ ಪೋಲೀಸರು ಒಂದು ಇಂಚು ದಪ್ಪದ ಬೆತ್ತದಲ್ಲಿ ತಮ್ಮ ಎಲ್ಲಾ ಶಕ್ತಿಯನ್ನು ಬಳಸಿ ಮನುಷ್ಯರನ್ನು ಹೊಡೆಯುತ್ತಾರೆ. ಇದೇನಿದು ವಿಪರ್ಯಾಸ? ಏನು ಮನುಷ್ಯ ಕೋಣಕ್ಕಿಂತಲೂ ಕೀಳಾ? ಪೋಲಿಸರು ಸಂಪೂರ್ಣ ಮನುಷ್ಯತ್ವ ಮರೆತು ವರ್ತಿಸಿದ್ದು ಅವರನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಒಂದು ಕಡೆಯಿಂದ ಮನಬಂದಂತೆ ಥಳಿಸಿ ಪೆಟ್ಟು ತಿಂದವರ ಮೇಲೆಯೇ ಕೇಸು ದಾಖಲಿಸಿರುವುದು ವಿಪರ್ಯಾಯಸ.

ಇತ್ತೀಚೆಗೆ ಕರಾವಳಿಯ ಪೋಲೀಸರು ಸಂಘಪರಿವಾರದ ಕಾರ್ಯಕರ್ತರಂತೆ ವರ್ತಿಸುತ್ತಾ ಅಮಾಯಕ ಮುಸ್ಲಿಮ್ ಯುವಕರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಹೆಚ್ಚುತ್ತಲೇ ಇದೆ. ಸರಕಾರ ತನ್ನ ಗಾಢ ನಿದ್ದೆಯಿಂದ ಎಚ್ಚೆತ್ತು ಇಂತಹಾ ಸಂಘೀ ಪೋಲೀಸರ ಮೇಲೆ ಕ್ರಮ ಜರಗಿಸಬೇಕಾಗಿದೆ . ಕರಾವಳಿಯ ಪೋಲೀಸ್ ಠಾಣೆಗಳು ಸಂಘಿಗಳ ಕಛೇರಿಯಂತಾಗುವುದನ್ನು ಸರಕಾರ ತಡೆಗಟ್ಟಬೇಕಾಗಿದೆ.ಮಂಗಳೂರಿನಲ್ಲಿ ದೌರ್ಜನ್ಯ ಎಸಗಿದ ಪೋಲೀಸರ ಮೇಲೆ ಸೂಕ್ತ ಕ್ರಮ ಜರಗಿಸಿ ಮುಸ್ಲಿಮರಲ್ಲಿರುವ ಭಯದ ವಾತಾವರಣವನ್ನು ತೊಲಗಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.


Spread the love