ಪಿಎಫ್ ಐ ವತಿಯಿಂದ “ಮಾದಕ ದ್ರವ್ಯ ಮುಕ್ತ ಸಮಾಜ ನಮ್ಮ ಗುರಿ ಅಭಿಯಾನ

Spread the love

ಪಿಎಫ್ ಐ ವತಿಯಿಂದ “ಮಾದಕ ದ್ರವ್ಯ ಮುಕ್ತ ಸಮಾಜ ನಮ್ಮ ಗುರಿ ಅಭಿಯಾನ

ಮಂಗಳೂರು: ದ.ಕ ಜಿಲ್ಲೆಯಾದ್ಯಂತ ಗಾಂಜಾ, ಅಫೀಮು ಸಹಿತ ಅಮಲು ಪದಾರ್ಥ ವ್ಯಾಪಕವಾಗುತ್ತಿದ್ದು, ಇದಕ್ಕೆ ಹಲವಾರು ಯುವಕರು ಬಲಿಯಾಗಿದ್ದಾರೆ. ಅಲ್ಲದೆ ಅನೇಕ ಕುಟುಂಬಗಳು ಬೀದಿಪಾಲಾಗಿದೆ. ಮಾದಕ ವ್ಯಸನದಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗಿರವುದು ದುರಂತ ಎನ್ನಬಹುದು.

ವ್ಯಾಪಕವಾಗಿ ಹರಡುತ್ತಿರುವ ಈ ಮಾದಕ ದ್ರವ್ಯದ ಹಾವಳಿಯನ್ನು ತಡೆಯಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಂಗರೆ ವಲಯ ಸಮಿತಿಯಿಂದ ನವೆಂಬರ್ 5 ರಿಂದ 30 ರವರೆಗೆ  “ಮಾದಕ ದ್ರವ್ಯ ಮುಕ್ತ ಸಮಾಜ ನಮ್ಮ ಗುರಿ” “ಆರೋಗ್ಯವಂತ ಬೆಂಗರೆ ನಮ್ಮ ಸಂಕಲ್ಪ” ಎಂಬ ಧ್ಯೇಯ ವಾಕ್ಯದೊಂದಿಗೆ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಅದರ ಭಾಗವಾಗಿ ಕಾರ್ನರ್ ಮೀಟ್, ಕರಪತ್ರ ವಿತರಣೆ, ಪೋಸ್ಟರ್, ಬೀದಿನಾಟಕ, ಸ್ನೇಹ ಸಮ್ಮಿಲನ, ಜಾಗೃತಿ ಜಾಥಾ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


Spread the love