ಪಿಕಪ್ ವಾಹನ ಹಾಗೂ ಕಾರಿನ ನಡುವೆ ನಡೆದ ಅಪಘಾತ; ಪಾದಾಚಾರಿ ಮೃತ್ಯು
ಮಂಗಳೂರು: ಪಿಕಪ್ ವಾಹನ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಪಾದಾಚಾರಿಯೋರ್ವರು ಮೃತಪಟ್ಠ ಘಟನೆ ಕುಳಾಯಿ ಶಂಕರ ಭವನ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ರಾಯಚೂರು ನಿವಾಸಿ ದೀಪು ಗೌಡ ಯಾನೆ ಪೊಂಪನ ಗೌಡ ಎಂದು ಗುರುತಿಸಲಾಗಿದೆ.
ಶನಿವಾರ ಜಿ ರಾಘವೇಂದ್ರ ಎಂಬವರು ತಮ್ಮ ಗೆಳೆಯರಾದ ದೀಪು ಗೌಡ @ ಪೊಂಪನ ಗೌಡ, ಪ್ರದೀಪ್ ಮತ್ತು ನಾಗರಾಜ್ ರವರ ಜೊತೆ ಕುಳಾಯಿಯ ಶಂಕರ ಭವನ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ರಾಹೆ 66 ರಸ್ತೆಯನ್ನು ದಾಟುತ್ತ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುವ ರಸ್ತೆಯನ್ನು ದಾಟಿ ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಉಡುಪಿಯ ಕಡೆಯಿಂದ ಬಂದ ಪಿಕ್ ಅಪ್ ವಾಹನವು ತನ್ನ ಎದುರಿನಲ್ಲಿ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರು ಮುಂದಕ್ಕೆ ರಸ್ತೆಯ ಎಡ ಬದಿಗೆ ತಳ್ಳಲ್ಪಟ್ಟು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ದೀಪು ಗೌಡ @ ಪೊಂಪನ ಗೌಡ, ಪ್ರದೀಪ್ ಮತ್ತು ನಾಗರಾಜ್ ರವರಿಗೆ ಡಿಕ್ಕಿ ಪಡಿಸಿ ಪ್ರದೀಪ್ ಮತ್ತು ನಾಗರಾಜ್ ರವರು ರಸ್ತೆಗೆ ಎಸೆಯಲ್ಪಟ್ಟು ದೀಪು ಗೌಡ @ ಪೊಂಪನ ಗೌಡ ರವರನ್ನು ಮುಂದಕ್ಕೆ ತಳ್ಳಿಕೊಂಡು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಗೂಡ್ಸ್ ಲಾರಿಯ ಹಿಂಬದಿ ಎಡ ಭಾಗಕ್ಕೆ ದೀಪು ಗೌಡ @ ಪೊಂಪನ ಗೌಡರ ಸಮೇತ ಕಾರು ಡಿಕ್ಕಿಯಾಗಿದ್ದು ದೀಪು ಗೌಡ ರವರು ತಲೆಗೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದು, ಪ್ರದೀಪ್ ರವರಿಗೆ ಮುಖಕ್ಕೆ ಮತ್ತು ಹಣೆಗೆ ರಕ್ತಗಾಯವಾಗಿದ್ದು ಅಲ್ಲದೆ ನಾಗರಾಜ್ ರವರಿಗೆ ಸೊಂಟಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು ಗಾಯಾಳುಗಳನ್ನು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಪ್ರದೀಪ್ ಮತ್ತು ನಾಗರಾಜ್ ರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು ದೀಪು ಗೌಡ @ ಪೊಂಪನ ಗೌಡ ರವರು ಆಸ್ಪತ್ರೆಗೆ ಕರೆತರುವಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ
ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.