ದಿನಾಂಕ 25 ಜನವರಿ 2016 ರ0ದು ನಡೆಯಲಿರುವ “ಪ್ರಾಣಿ ಕ್ಷೇಮಾಭಿವೃಧ್ದಿ ಪಕ್ಷ-2016” ರ ಅಂಗವಾಗಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಹಾಗೂ ಕೊಲಾಜ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ವಿಷಯ- ಪ್ರಾಣಿ ಕ್ಷೇಮಾಭಿವೃಧ್ದಿಯಲ್ಲಿ ವಿಧ್ಯಾರ್ಧಿಗಳ ಪಾತ್ರ
ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿವೆ
1) ಪ್ರಥಮ ವಿಭಾಗ- ಪ್ರೌಢಶಾಲಾ ವಿದ್ಯಾüರ್ಥಿಗಳು
2) ದ್ವಿತೀಯ ವಿಭಾಗ-ಕಾಲೇಜು ವಿದ್ಯಾರ್üಥಿಗಳು
ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪ್ರಬ0ಧಗಳನ್ನು 1500 ಅಕ್ಷರಗಳಿಗೆ ಮೀರದ0ತೆ ಕನ್ನಡ ಅಧವಾ ಇಂಗ್ಲಿಷ ನಲ್ಲಿ ಬರೆದು ಹಾಗೂ ಕೊಲಾಜ್‍ಗಳನ್ನು ಚಿತ್ರಕಲಾ ಹಾಳೆಯಲ್ಲಿ ಮಾಡಿ 23-01-2016 ರ ಒಳಗಾಗಿ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅಥವಾ ವೈಯಕ್ತಿಕವಾಗಿ ಕಳುಹಿಸಬೇಕು. ವಿದ್ಯಾಥಿರ್ü ಹೆಸರು, ಅಂಚೆ ವಿಳಾಸ, ವಿದ್ಯಾಸಂಸ್ಥೆ ಹೆಸರು, ಸಂಪರ್ಕ ದೂರವಾಣಿ ಸ0ಖ್ಯೆ ಯನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಿ ಪ್ರಬಂಧದೊಂದಿಗೆ ಲಗತ್ತಿಸಬೇಕು.
“ಪ್ರಾಣಿ ಕ್ಷೇಮಾಭಿವೃಧ್ದಿ ಪಕ್ಷ-2016” ರ ಅಂಗವಾಗಿ ತಾರೀಕು 25-01-2016 ರ0ದು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಉಚಿತ ಪ್ರವೇಶ ನೀಡಿ ವಿಜೇತರಿಗೆ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಒಂದು ವರ್ಷ ಉಚಿತ ಪ್ರವೇಶ ಮತ್ತು ಬಹುಮಾನಗಳನ್ನು ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಪಿಲಿಕುಳ ಜೈವಿಕ ಉದ್ಯಾನವನದ ಕಚೇರಿ ಅಥವಾ ವೆಬ್ಸೈಟ್ ಸಂಪರ್ಕಿಸಬಹುದು.
ವಿಳಾಸ-ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ, ವಾಮಂಜೂರು ಅಂಚೆ, ಮಂಗಳೂರು-575028
ದೂರವಾಣಿ- 0824-2263300, 9980187057