ಪಿಲಿಕುಳದಲ್ಲಿ ‘ವಿಶೇಷ ಆಕಾಶ ವೀಕ್ಷಣೆ’ ಕಾರ್ಯಕ್ರಮ

Spread the love

ಪಿಲಿಕುಳದಲ್ಲಿ ‘ವಿಶೇಷ ಆಕಾಶ ವೀಕ್ಷಣೆ’ ಕಾರ್ಯಕ್ರಮ

ಮಂಗಳೂರು: ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ವಿನಂತಿಯ ಮೇರೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಜನವರಿ 23 ರಂದು ಸಂಜೆ 6:30 ರಿಂದ ಆಸಕ್ತರಿಗೆ ಗ್ರಹಗಳ ಮೇಳವನ್ನು ವೀಕ್ಷಿಸಲು ‘ವಿಶೇಷ ಆಕಾಶ ವೀಕ್ಷಣೆ’ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಎರಡನೇ ಬಾರಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಆರಂಭದಲ್ಲಿ ವೀಕ್ಷಕರ ಆಸಕ್ತಿಗೆ ಅನುಗುಣವಾಗಿ ದೂರದರ್ಶಕಗಳ ಮೂಲಕ ನೋಡಬಹುದಾದ ಆಕಾಶ ಕಾಯಗಳ ವಿವರಣೆ, ಈಗಿನ ವಿಶೇಷ ಸಂದರ್ಭದಲ್ಲಿ ಅವುಗಳ ವೀಕ್ಷಣೆಗೆ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ದೂರದರ್ಶಕಗಳ  ಮೂಲಕ ಸೌರವ್ಯೂಹದ ಅತೀ ದೊಡ್ಡ ಗ್ರಹ ಗುರು, ಅದರ ಉಪಗ್ರಹಗಳಾದ ಅಯೋ, ಯುರೋಪಾ, ಕ್ಯಾಲಿಸ್ಟೋ ಮತ್ತು ಗ್ಯಾನಿಮೀಡ್ಗಳನ್ನು ವೀಕ್ಷಿಸಲು ಅನುವುಮಾಡಿಕೊಡಲಾಯಿತು. ಉಂಗುರ ಸಹಿತ ಶನಿ ಗ್ರಹ, ಬೆಳ್ಳಿ ಚುಕ್ಕಿ ಶುಕ್ರ ಗ್ರಹ ಮತ್ತು ಕೆಂಪು ಮಂಗಳ ಗ್ರಹಗಳನ್ನು ವೀಕ್ಷಕರು ಆಸಕ್ತಿಯಿಂದ ನೋಡುತ್ತಾ ವಿವರಣೆಗಳನ್ನು ಕೇಳುತ್ತಾ ವೀಕ್ಷಣೆಯ ಅನುಭವವನ್ನು ಹಂಚಿಕೊಂಡರು. ಈ ಕಾರ್ಯಕ್ರಮವನ್ನು ತಮ್ಮ ವಿನಂತಿಯ ಮೇರೆಗೆ ಹಮ್ಮಿಕೊಂಡಿದ್ದಕ್ಕಾಗಿ ಕೇಂದ್ರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ವೀಕ್ಷಕರಲ್ಲಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಯುರೇನಸ್, ನೆಪ್ಚೂನ್ ವೀಕ್ಷಣೆ ಮತ್ತು ಗ್ರಹಗಳು ಸರಳರೇಖೆಗೆ ಬರುವ ವಿದ್ಯಮಾನ ಇತ್ಯಾದಿಗಳನ್ನು ಕೇಳಿದಾಗ ಯುರೇನಸ್ ಮತ್ತು ನೆಪ್ಚೂನ್ ಬಹಳ ದೂರದಲ್ಲಿರುವುದರಿಂದ ಅವುಗಳ ವೀಕ್ಷಣೆ  ಪ್ರಬಲ ದೂರದರ್ಶಕಗಳಿಂದ ಮಾತ್ರ ಸಾಧ್ಯ. ಈಗಿನ ವಿದ್ಯಮಾನ ಗ್ರಹಗಳ ಮೇಳೈಸುವಿಕೆ ಮಾತ್ರ, ಸರಳರೇಖೆಯಲ್ಲಿ ಇಲ್ಲ ಎಂದು ತಿಳಿಸಲಾಯಿತು.

ಕೇಂದ್ರದ ಕ್ಯುರೇಟರ್ ಜಗನ್ನಾಥ, ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್, ಶೈಕ್ಷಣಿಕ ಸಹಾಯಕಿ ರಶ್ಮಿ, ಮೆಂಟರ್ಗಳಾದ ಹೃತೀಕ್, ಆದರ್ಶ್, ಅಂಬಿಕಾ, ಸಹನಾ, ತಾಂತ್ರಿಕ ಸಿಬ್ಬಂದಿಗಳಾದ ಯತೀಶ್, ತುಕಾರಾಮ್, ವಿರುಪಾಕ್ಷಯ್ಯ, ಮಂಜುನಾಥ್, ಕಿಶೋರ್ ಕುಮಾರ್, ಗಾಯತ್ರಿ, ಶರತ್, ವಂದನಾ, ವಿಕ್ಟರ್ ವೀಕ್ಷಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಬೇಕಾದ ಸಹಕಾರವನ್ನು ನೀಡಿದರು.


Spread the love
Subscribe
Notify of

0 Comments
Inline Feedbacks
View all comments