ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಎಂ.ಆರ್.ಪಿ.ಎಲ್ ನಿಂದ ರೂ 3.4 ಕೋಟಿ ಅನುದಾನ
ಮಂಗಳೂರು : ಮಂಗಳೂರಿನ ಪ್ರತಿಷ್ಟಿತ ಸಂಸ್ಥೆಯಾದ ಎಂಆರ್ಪಿಎಲ್, ಪಿಲಿಕುಳ ಮೃಗಾಲಯಕ್ಕೆ ರೂ. 3.4 ಕೋಟಿಯ ಅನುದಾನವನ್ನು ನೀಡಿದೆ. ಅನುದಾನ ಪ್ರಾಣಿಗಳ ಆಹಾರ, ಆರೋಗ್ಯಸೇವೆ ಮತ್ತು ಪ್ರಾಣಿಗಳ ಉಸ್ತುವಾರಿಗೆ ವಿನಿಯೋಗಿಸಲಾಗುತ್ತದೆ.
ಎಂಆರ್ಪಿಎಲ್ ಕಳೆದೆರಡು ವರ್ಷಗಳಿಂದ ಜೈವಿಕ ಉದ್ಯಾನವನದ ಹಸುರಿಕರಣದಲ್ಲಿ ಕೈಜೋಡಿಸಿದೆ. ಪಿಲಿಕುಳ ಜೈವಿಕ ಉದ್ಯಾನವನದ ರಚನೆಯ ಉದ್ದೇಶ, ಪಶ್ಚಿಮ ಘಟ್ಟದ ವಿನಾಶದ ಅಂಚಿನಲ್ಲಿರುವ ಜೀವಿಗಳು ಮತ್ತು ವೃಕ್ಷಗಳ ರಕ್ಷಣೆ ಮತ್ತು ಅಭಿವೃದ್ದಿಯಾಗಿರುತ್ತದೆ.
ಈಗಾಗಲೇ ದೇಶದ ಬೃಹತ್ ಮೃಗಾಲಯವೆಂದು ಗುರುತಿಸಲ್ಪಟ್ಟ ಪಿಲಿಕುಳವು 120 ಜಾತಿಯ 1200 ಪ್ರಾಣಿಪಕ್ಷಿಗಳನ್ನು ಹೊಂದಿರುತ್ತದೆ. ಇದರ ನಿರ್ವಾಹಣೆಯು ಸಾರ್ವಜನಿಕರ ದೇಣಿಗೆ ಮತ್ತು ಪ್ರವೇಶ ಶುಲ್ಕದಿಂದ ನಡೆಯುತ್ತಿರುವುದು ವಿಶೇಷ ಎಂದು ಪಿಲಿಕುಳ ಜೈವಿಕ ಉದ್ಯಾನವನ ಮಂಗಳೂರು ಇದರ ನಿರ್ದೇಶಕ ಹೆಚ್.ಜೆ.ಭಂಡಾರಿ ಇವರ ಪ್ರಕಟಣೆ ತಿಳಿಸಿದೆ.