ಪಿಲಿಕುಳ ನಿಸರ್ಗ ಧಾಮದ ಒಳಗೆ ಬೀದಿ ನಾಯಿಗಳ ದಾಳಿ : 10 ಕಾಡುಕುರಿಗಳು ಸಾವು
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಇಲ್ಲಿನ ಪ್ರಸಿದ್ಧ ಪಿಲಿಕುಳ ನಿಸರ್ಗಧಾಮದಲ್ಲಿರುವ ಜಿಂಕೆಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಸುಮಾರು 10 ಕಾಡುಕುರಿಗಳು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.
ಪಿಲಿಕುಳ ನಿಸರ್ಗಧಾಮದ ಬಳಿಯಿರುವ ಡಂಪಿಂಗ್ ಯಾರ್ಡ್ ನಿಂದ ಜಿಗಿದು ಬೀದಿ ನಾಯಿಗಳು ನಿಸರ್ಗಧಾಮದ ಒಳಗೆ ಬಂದಿದ್ದು, ಕಾಡುಕುರಿಗಳ ಮೇಲೆ ದಾಳಿ ಮಾಡಿದೆ. ಕಾಡುಕುರಿಗಳ ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾದ ಕಾರಣ 10 ಜಿಂಕೆಗಳು ಸಾವನ್ನಪ್ಪಿದೆ. 5 ಜಿಂಕೆಗಳಿಗೆ ಗಾಯವಾಗಿದೆ ಎಂದು ತಿಳಿಯಲಾಗಿದೆ.
ಜೂನ್ 25 ರ ರಾತ್ರಿ, ಮಳೆಯಿಂದಾಗಿ ಮರವೊಂದು ಪಿಲಿಕುಳ ಆವರಣ ಗೋಡೆಯ ಮೇಲೆ ಬಿದ್ದ ಪರಿಣಾಮ ಗೋಡೆ ಜರಿದಿದ್ದು, ಜೂನ್ 26 ರಂದು ಬೀದಿ ನಾಯಿಗಳ ತಂಡ ಪಿಲಿಕುಳ ಆವರಣ ಗೋಡೆಯನ್ನು ಹಾರಿ ಬಂದು ಕಾಡು ಕುರಿಗಳ ಮೇಲೆ ದಾಳಿ ಮಾಡಿದ್ದು, ಇದರಲ್ಲಿ 10 ಕಾಡು ಕುರಿಗಳು ಸಾವನಪ್ಪಿವೆ.
5 ವರ್ಷಗಳ ಹಿಂದೆ 4 ಕಾಡು ಕುರಿಗಳನ್ನು ರಕ್ಷಿಸಿದ್ದು ಅವುಗಳ ಸಂತಾನೋತ್ಪತ್ತಿಯಿಂದಾಗ 40 ಕಾಡು ಕುರಿಗಳು ಜೈವಿಕ ವನದಲ್ಲಿದ್ದು, ಅವುಗಳಲ್ಲಿ 10 ಕಾಡು ಕುರಿಗಳನ್ನು ಉಳಿಸಿಕೊಂಡು ಉಳಿದವುಗಳನ್ನು ಕಾಡಿಗೆ ಬಿಡಲು ಯೋಚಿಸಲಾಗಿತ್ತು ಆದರೆ ದುರದೃಷ್ಟವಶಾತ್ 10 ಕಾಡು ಕುರಿಗಳು ಬೀದಿ ನಾಯಿಗಳಿಗೆ ಬಲಿಯಾಗಿದ್ದು ಉಳಿದ 5ಕ್ಕೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಒಮ್ಮೆ ಅವುಗಳು ಗುಣಮುಖವಾದ ಕೂಡಲೇ 10 ಕಾಡುಕುರಿಗಳನ್ನು ಉಳಿಸಿಕೊಂಡು ಉಳಿದವುಗಳನ್ನು ಕಾಡಿಗೆ ಬಿಡಲಾಗುತ್ತದೆ ಎಂದು ಜೈವಿಕ ವನದ ಅಧಿಕಾರಿಗಳು ತಿಳಿಸಿದ್ದಾರೆ