‘ಪಿಲಿತ ಪಂಜ’ ತುಳು ನಾಟಕ ಕೃತಿ ಲೋಕಾರ್ಪಣೆ

Spread the love

‘ಪಿಲಿತ ಪಂಜ’ ತುಳು ನಾಟಕ ಕೃತಿ ಲೋಕಾರ್ಪಣೆ

ಸೋಮೇಶ್ವರ: ನ್ಯಾಯವಾದಿ, ಯುವ ನಾಟಕಕಾರ ಶಶಿರಾಜ್ ರಾವ್ ಕಾವೂರ್ ರವರ ಹೊಸ ತುಳು ನಾಟಕ ‘ಪಿಲಿತ ಪಂಜ’ವನ್ನು ಹಿರಿಯ ಸಾಹಿತಿ, ಜಾನಪದ ವಿಧ್ವಾಂಸ ಶ್ರೀ ಅಮೃತ ಸೋಮೇಶ್ವರ ರವರು ವಿಭಿನ್ನ ರೀತಿಯಲ್ಲಿ ಬಿಡುಗಡೆಗೊಳಿಸಿದರು.

shashi

ಸಾಹಿತಿ ಅಮೃತ ಸೋಮೇಶ್ವರರ ನಿವಾಸ, ಕೋಟೆಕಾರಿನ ‘ಒಲುಮೆ’ ಯ ಅತ್ಮೀಯ ವಾತಾವರಣದಲ್ಲಿ ಸರಳವಾಗಿ ನಡೆದ ಸಮಾರಂಭದಲ್ಲಿ ಅವರು ಕೃತಿಯನ್ನು ಲೋಕಾರ್ಪಣೆ ಮಾಡಿದರು.

‘ತುಳುವಿನಲ್ಲಿ ಆಧುನಿಕ ಶೈಲಿಯ ಚಾರಿತ್ರಿಕ ನಾಟಕಗಳು ವಿರಳವಾಗಿದ್ದು, ಈ ನಿಟ್ಟಿನಲ್ಲಿ ಪಿಲಿತ ಪಂಜ ಒಳ್ಳೆಯ ಕೊಡುಗೆಯಾಗಿದೆ. ಶಿವಾಜಿಯ ವ್ಯಾಘ್ರ ನಖದ ಕತೆ ಜನಜನಿತವಾದದ್ದು. ಅದನ್ನು ನಾಟಕ ರೂಪದಲ್ಲಿ ನೀಡಿದ್ದು ಶಶಿರಾಜ್ ಕಾವೂರರ ಸೃಜನಶೀಲತೆಗೆ ಸಾಕ್ಷಿ. ಅವರಿಂದ ಇನ್ನಷ್ಟು ಒಳ್ಳೆಯ ಕೃತಿಗಳು ಮೂಡಿಬರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ, ಹಿರಿಯ ರಂಗಕರ್ಮಿ ಯು.ಮೋಹನಚಂದ್ರ (ಮೋಚ), ರಂಗ ದಶಾವತಾರಿ ಜೀವನರಾಂ ಸುಳ್ಯ, ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ಸದಾಶಿವ ರಾವ್, ರಂಗಸಂಗಾತಿಯ ಮೈಮ್ ರಾಮ್ ದಾಸ್ ಮೊದಲಾದವರು ಉಪಸ್ಥಿತರಿದ್ದರು


Spread the love