Home Mangalorean News Kannada News ಪುಟಾಣಿ ರೈಲು ಬೋಗಿ ಒಂದೆರಡು ದಿನಗಳಲ್ಲಿ ಮಂಗಳೂರಿಗೆ : ಶಾಸಕ ಜೆ.ಆರ್.ಲೋಬೊ

ಪುಟಾಣಿ ರೈಲು ಬೋಗಿ ಒಂದೆರಡು ದಿನಗಳಲ್ಲಿ ಮಂಗಳೂರಿಗೆ : ಶಾಸಕ ಜೆ.ಆರ್.ಲೋಬೊ

Spread the love

ಪುಟಾಣಿ ರೈಲು ಬೋಗಿ ಒಂದೆರಡು ದಿನಗಳಲ್ಲಿ ಮಂಗಳೂರಿಗೆ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಕದ್ರಿ ಪಾರ್ಕ್ ಪುಟಾಣಿ ರೈಲಿನ ಬೋಗಿ ಇನ್ನೊಂದೆರಡು ದಿನಗಳಲ್ಲಿ ಮೈಸೂರಿನಿಂದ ಮಂಗಳೂರಿಗೆ ಬರಲಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ಕದ್ರಿ ಪಾರ್ಕ್ ಪುಟಾಣಿ ರೈಲಿನ ಪ್ರಗತಿ ಪರಿಶೀಲಿಸಿ ಮಾತನಾಡುತ್ತಿದ್ದರು. ಈ ಕಾಮಗಾರಿ ವಿಳಂಭವಾಯಿತು ಎನ್ನುವುದನ್ನು ಅಲ್ಲಗಳೆದ ಜೆ.ಆರ್.ಲೋಬೊ ಇಲ್ಲಿ ತಾಂತ್ರಿಕ ಸಮಸ್ಯೆಗಳಿದ್ದವು. ಅವುಗಳನ್ನು ನಿವಾರಿಸುವುದಕ್ಕೆ ವಿಳಂಭವಾಯಿತೇ ಹೊರತು ಈ ಕಾಮಗಾರಿಯಲ್ಲಿ ವಿಳಂಭವಾಗಿಲ್ಲ ಎಂದರು.

ಇದು ಆರಂಭದಲ್ಲಿ 30 ಲಕ್ಷ ರೂಪಾಯಿ ಇದ್ದುದು ಈಗ 1.30  ಕೋಟಿ ರೂಪಾಯಿಗೆ ಬಂದಿದೆ. ಈ ಕಾಮಗಾರಿಯನ್ನು ಮಾಡುತ್ತಾ ಹೋದಹಾಗೆ ಬದಲಾವಣೆ ಮಾಡಬೇಕಾಯಿತು. ಈಗ ಕೊನೆಯ ಹಂತದಲ್ಲಿದೆ ಎಂದರು.

ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಿ ಇದರ ಪ್ರಾಯೋಗಿಕ ಪರೀಕ್ಷೆ ನಡೆಸಿ ಅದನ್ನು ಲೋಕಾರ್ಪಣೆ ಮಾಡಲಾಗುವುದು ಎಂದ ಅವರು ಇದಕ್ಕೆ ರೈಲ್ವೇ ಇಲಾಖೆ ಪರೀಕ್ಷೆ ಮಾಡಿ ಒಪ್ಪಿಗೆ ಕೊಡಬೇಕು. ಅವರು ಕೊಟ್ಟ ನಂತರವೇ ಇದನ್ನು ಸಂಚಾರಕ್ಕೆ ಬಿಡಲು ಸಾಧ್ಯವೆಂದರು.

ಈ ಕಾಮಗಾರಿ ತಡವಾದುದಕ್ಕೆ ವಿವರಣೆ ನೀಡಿದ ಶಾಸಕ ಜೆ.ಆರ್.ಲೋಬೊ ಅವರು ಆರಂಭದಲ್ಲಿ ಹುಬ್ಬಳ್ಳಿಯವರು ಈ ರೈಲಿನ ಬೋಗಿಗಳನ್ನು ಸಿದ್ಧಪಡಿಸುವುದಾಗಿ ಒಪ್ಪಿದ್ದರು, ಕೊನೆ ಕ್ಷಣದಲ್ಲಿ ಅವರು ಕೈಬಿಟ್ಟರು ನಂತರ ಮೈಸೂರನ್ನು ಕೇಳಬೇಕಾಯಿತು ಎಂದರು.

ಇದರ ಕಾಮಗಾರಿ ಮುಗಿಯುತ್ತಿದೆ, ರೈಲ್ವೇ ಹಳಿ ಜೋಡಣೆ ಕೆಲಸವೂ ಪೂರ್ಣ ಗೊಂಡಿದೆ. ಇನ್ನು ರೈಲ್ವೇ ಇಲಾಖೆ ಸರಿಯಾಗಿದೆ ಎಂಬುದನ್ನು ಒಪ್ಪಿದ ಕೂಡಲೇ ಪುಟಾಣಿ ರೈಲು ಸಂಚಾರ ಆರಂಭವಾಗಿಲಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.


Spread the love

Exit mobile version