ಪುಟ್ ಪಾತ್ ಅತಿಕ್ರಮಿಸಿ ಅಂಗಡಿ ನಿರ್ಮಾಣ ; ಜೂನ್ 5 ರಿಂದ ತೆರವು ಕಾರ್ಯಾಚರಣೆ ಪ್ರಾರಂಭ – ಮೇಯರ್ ದಿವಾಕರ್

Spread the love

ಪುಟ್ ಪಾತ್ ಅತಿಕ್ರಮಿಸಿ ಅಂಗಡಿ ನಿರ್ಮಾಣ ; ಜೂನ್ 5 ರಿಂದ ತೆರವು ಕಾರ್ಯಾಚರಣೆ ಪ್ರಾರಂಭ – ಮೇಯರ್ ದಿವಾಕರ್

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿರುವ ಫುಟ್ಪಾತ್ಗಳನ್ನು ಅತಿಕ್ರಮಿಸಿ ಹಲವಾರು ಅಂಗಡಿಗಳು ಹಾಗೂ ಹೂವು, ಹಣ್ಣು, ತರಕಾರಿ ಮತ್ತು ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಿರುವುದರಿಂದ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಈ ಕುರಿತು ಪಾಲಿಕೆಗೆ ಹಲವಾರು ದೂರುಗಳು ಬರುತ್ತಿರುವುದರಿಂದ ಟೈಗರ್ ಕಾರ್ಯಾಚರಣೆ ಆರಂಭವಾಗಲಿದೆ. ಫುಟ್ಪಾತ್ನಲ್ಲಿ ಇರುವ ಅಂಗಡಿ ತೆರವುಗೊಳಿಸಲಾಗುವುದು ಮತ್ತು ಇದರ ನಷ್ಟಕ್ಕೆ ವ್ಯಾಪಾರಸ್ಥರೇ ಜವಾಬ್ದಾರರಾಗಿರುತ್ತಾರೆ. ಜೂನ್ 5 ರಂದು ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಫುಟ್ಪಾತ್ ತೆರವುಗೊಳಿಸಲು ಟೈಗರ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಮೇಯರ್ ದಿವಾಕರ್ ಹೇಳಿದ್ದಾರೆ.

ಪಾಲಿಕೆ ವ್ಯಾಪ್ತಿಯ ರಸ್ತೆ ಬದಿ ಮತ್ತು ಫುಟ್ಪಾತ್ನಲ್ಲಿ ಮಾರಾಟ ಮಾಡುವ ಎಲ್ಲಾ ಮಾರಾಟಗಾರರು ಇನ್ನು ಮುಂದಕ್ಕೆ ಮಾರಾಟ ಮಾಡದಂತೆ ನಿರ್ಬಂಧಿಸಲಾಗಿದೆ. ಕಾನೂನು ಮೀರಿದಲ್ಲಿ ಮಾರಾಟಗಾರರ ವಸ್ತುಗಳನ್ನು ಪಾಲಿಕೆಯ ವಶಕ್ಕೆ ಪಡೆದುಕೊಂಡಲ್ಲಿ ಹಿಂದಿರುಗಿಸಲಾಗುವುದಿಲ್ಲ ಎಂದು ಮೇಯರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


Spread the love