ಪುತ್ತಿಗೆ ವಿಶ್ವ ಗೀತಾ ಪರ್ಯಾಯ: ಭೋಜನ ಶಾಲೆಯಲ್ಲಿ ಭಕ್ತರಿಗಾಗಿ ಸಿದ್ದಗೊಳ್ಳುತ್ತಿದೆ ಅನ್ನಪ್ರಸಾದ
ಉಡುಪಿ: ಪುತ್ತಿಗೆ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೊನೇ ಕ್ಷಣದ ಸಿದ್ಧತೆಗಳೂ ನಡೆಯುತ್ತಿವೆ. ಕೃಷ್ಣನ ನಾಡು ಉಡುಪಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಅನ್ನಬ್ರಹ್ಮನ ನಾಡಿದ ದಾಸೋಹಕ್ಕೆ ಹಸಿರು ಹೊರೆಕಾಣಿಕೆಯ ಮಹಾಪೂರವೇ ಹರಿದುಬರುತ್ತಿದೆ.
ಈಗಾಗಲೇ ನಗರದ ಬೀದಿಗಳು ಸಿಂಗಾರಗೊಂಡಿವೆ. ಅನ್ನಬ್ರಹ್ಮನ ನಾಡಿನಲ್ಲಿ ಭಕ್ತರಿಗೆ ಅನ್ನಪ್ರಸಾದ ವಿತರಣೆಗಾಗಿ ವಿಶಾಲವಾದ ಪ್ರತ್ಯೇಕ ಭೋಜನಶಾಲೆಗಳು ಸಿದ್ಧಗೊಂಡಿದ್ದು ಬುಧವಾರ ರಾತ್ರಿ ಪರ್ಯಾಯಕ್ಕಾಗಿ ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ತಯಾರಿ ಪಾಕ ತಜ್ಞರ ನೇತೃತ್ವದಲ್ಲಿ ನಡೆಯುತ್ತಿದೆ.