Home Mangalorean News Kannada News ಪುತ್ತೂರಿನಲ್ಲಿ ಕಚ್ಚಾ ಬಾಂಬ್ ಸ್ಪೋಟ ಪ್ರಕರಣ: ಆರೋಪಿ ಸೆರೆ

ಪುತ್ತೂರಿನಲ್ಲಿ ಕಚ್ಚಾ ಬಾಂಬ್ ಸ್ಪೋಟ ಪ್ರಕರಣ: ಆರೋಪಿ ಸೆರೆ

Spread the love

ಪುತ್ತೂರಿನಲ್ಲಿ ಕಚ್ಚಾ ಬಾಂಬ್ ಸ್ಪೋಟ ಪ್ರಕರಣ: ಆರೋಪಿ ಸೆರೆ

ಪುತ್ತೂರು: ಕಚ್ಚಾ ಬಾಂಬ್ ಸ್ಪೋಟಿಸಿ ಮನೆಯನ್ನು ಧ್ವಂಸ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ.

ಕಬಕ ಗ್ರಾಮದ ಪೋಳ್ಯ ಎಂಬಲ್ಲಿನ ನಾರಾಯಣ ಪ್ರಸಾದ್ ಎಂಬವರ ಮನೆಯಲ್ಲಿ ಅ.15ರಂದು ತಡ ರಾತ್ರಿ ಕಚ್ಚಾ ಬಾಂಬ್ ಸ್ಪೋಟಗೊಳಿಸಿ ಮನೆಯನ್ನು ಧ್ವಂಸ ಮಾಡವ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪಿ ಬಾಬು ಯಾನೆ ಬಾಲನ್ ಎಂಬಾತನನ್ನು ಎಸ್ಪಿ ಡಾ. ರವಿಕಾಂತೆ ಗೌಡ ಅವರ ನಿರ್ದೇಶನದಂತೆ, ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಎಸ್.ಐ ಅಜೇಯ್‍ ಮತ್ತು ಪುತ್ತೂರು ನಗರ ಠಾಣೆಯ ಪೊಲೀಸರ 11 ದಿನಗಳ ಕಾರ್ಯಾಚರಣೆಯ ನಂತರ ಕೇರಳದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಕೇರಳದ ಎರ್ನಾಕುಲಂ ನಿವಾಸಿ ಎಂದು ತಿಳಿದುಬಂದಿದೆ. ನಾರಾಯಣ ಪ್ರಸಾದ್ ಅವರ ಪೋಳ್ಯದಲ್ಲಿರುವ ಮನೆಯ ಮುಂಭಾಗದಲ್ಲಿ ಬಾಂಬ್ ಸ್ಫೋಟಗೊಳಿಸಿದ್ದ. ಘಟನೆಯಿಂದಾಗಿ ನಾರಾಯಣ ಪ್ರಸಾದ್ ರ ಪತ್ನಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮನೆ ದ್ವಂಸ ಕೃತ್ಯಕ್ಕೆ ಬಳಸಿದ ಮೂರು ಬಾಂಬ್‍ನಲ್ಲಿ ಒಂದು ಬಾಂಬ್ ಸ್ಪೋಟಗೊಂಡಿದ್ದು ಇನ್ನೆರಡು ಜೀವಂತ ಬಾಂಬ್ ಪತ್ತೆಯಾಗಿತ್ತು. ಈ ಘಟನೆಯ ಬಳಿಕ ಬಾಬು ಯಾನೆ ಬಾಲು ಪತ್ತೆ ಕಾರ್ಯಕ್ಕೆ ಎಸ್ಪಿಯವರ ನೇತೃತ್ವದಲ್ಲಿ ಮೂರು ತಂಡ ರಚನೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಎಸ್.ಐ ಅಜೇಯ್ ಅವರ ತಂಡ ಅ.16ರಿಂದ ಕೇರಳದಲ್ಲಿ ಮುಕ್ಕಾಂ ಹೂಡಿ ಪತ್ತೆ ಕಾರ್ಯ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿ ಹೆಚ್ಚಿನ ವಿಚಾರಣೆಗೆ ಸಂಬಂಧಿಸಿ 5 ದಿನಗಳ ಕಸ್ಟಡಿಗೆ ಪಡೆದು ಕೊಳ್ಳಲಾಗಿದೆ.


Spread the love

Exit mobile version