ಪುತ್ತೂರಿನ ರಾಮಕುಂಜದಲ್ಲಿ ಮೀನು ಕೃಷಿಕರ ದಿನಾಚರಣೆ 

Spread the love

ಪುತ್ತೂರಿನ ರಾಮಕುಂಜದಲ್ಲಿ ಮೀನು ಕೃಷಿಕರ ದಿನಾಚರಣೆ 

ಮಂಗಳೂರು : ದ.ಕ ಮೀನುಗಾರಿಕೆ ಇಲಾಖೆ, ಹಾಗೂ ಪುತ್ತೂರಿನ ರಾಮಕುಂಜ ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 10 ರಂದು ರಾಮಕುಂಜ ಪಂಚಾಯತ್ ಸಭಾಭವನದಲ್ಲಿ 19ನೇ ಮೀನುಕೃಷಿಕರ ದಿನಾಚರಣೆಯನ್ನು ಆಚರಿಸಲಾಯಿತು.

ಮೀನುಗಾರಿಕೆ ಮಹಾವಿದ್ಯಾಲಯದ ಜಲಕೃಷಿ ವಿಭಾಗದ ಪ್ರಾಧ್ಯಾಪಕ  ಗಣಪತಿ ನಾಯ್ಕ್,  ಇವರು ಮೀನುಕೃಷಿ ಮಾಡುವ ಬಗ್ಗೆ ಉಪನ್ಯಾಸ ನೀಡಿದರು. ಸುಮಾರು 50ಕ್ಕೂ ಹೆಚ್ಚು ಆಸಕ್ತ ಮೀನುಕೃಷಿಕರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು. ರಾಮಕುಂಜದ ಅಮೈಕೆರೆ ಹಾಗೂ ಗೋಳಿತೊಟ್ಟುವಿನ ಆಳಂತಾಯ ಪುಲಾರ ಕೆರೆಗಳಿಗೆ ಮೀನುಮರಿ ಬಿತ್ತನೆ ಮಾಡಲಾಯಿತು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ಸರ್ವೋತ್ತಮ ಗೌಡ, ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್, ಸದಸ್ಯರಾದ ತೇಜಸ್ವಿನಿ ಗೌಡ ಹಾಗೂ ಜಯಂತಿ ಆರ್ ಗೌಡ, ಗ್ರಾಮಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಆರ್ ಕೆ, ಹಾಗೂ ಸದಸ್ಯರು, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಎಸ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ದಿಲೀಪ್ ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love