ಪುತ್ತೂರು ಜಾತ್ರೆ:  ಎ.16, 17 ರಂದು ಸಂಚಾರ ಮಾರ್ಗ ಬದಲಾವಣೆ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ 

Spread the love

ಪುತ್ತೂರು ಜಾತ್ರೆ:  ಎ.16, 17 ರಂದು ಸಂಚಾರ ಮಾರ್ಗ ಬದಲಾವಣೆ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ 

ಮಂಗಳೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಎಪ್ರಿಲ್ 16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರದ ಆಗಮನದ ದಿನ ಮತ್ತು ಎಪ್ರಿಲ್ 17 ರಂದು ಬ್ರಹ್ಮರಥೋತ್ಸವ ನಡೆಯಲಿರುವುದರಿಂದ ಎಪ್ರಿಲ್ 16 ಮತ್ತು 17 ರಂದು ವಾಹನಗಳ ಸುಗಮ ಸಂಚಾರ ದೃಷ್ಟಿಯಿಂದ ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ಆದೇಶಿಸಿದ್ದಾರೆ.

ಎಪ್ರಿಲ್ 16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು ಬಪ್ಪಳಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗುವ ಸಮಯದಲ್ಲಿ ಸುಗಮ ಸಂಚಾರಕ್ಕಾಗಿ, ಈ ಸಮಯದಲ್ಲಿ ಸಂಪ್ಯ ಕಡೆಯಿಂದ ಮಂಗಳೂರು- ಕಬಕ ಕಡೆಗೆ ಹೋಗುವ ವಾಹನಗಳು ಅಶ್ವಿನಿ ಜಂಕ್ಷನ್ ದರ್ಬೆ ಜಂಕ್ಷನ್-ಬೆದ್ರಾಳ- ಸಾಲ್ಮರ- ಪಡೀಲ್ ಮೂಲಕ ಸಂಚರಿಸಬೇಕು.

ಮಂಗಳೂರು -ವಿಟ್ಲ – ಕಬಕ – ಕಡೆಯಿಂದ ಬರುವ ವಾಹನಗಳು ಲಿನೆಟ್ ಜಂಕ್ಷನ್ – ಬೊಳುವಾರು ಜಂಕ್ಷನ್ -ಪಡೀಲ್ – ಕೊಟೇಚಾ ಹಾಲ್ ಕ್ರಾಸ್-ಸಾಲ್ಮರ-ಎಪಿಎಂಸಿ-ದರ್ಬೆ-ಅಶ್ವಿನಿ ಜಂಕ್ಷನ್ ಮೂಲಕ ಸಂಚರಿಸಬೇಕು.

ಸಾರಿಗೆ ಬಸ್ ಸಂಚರಿಸುವ ಮಾರ್ಗ ಬದಲಾವಣೆ:-
ಬಸ್ ನಿಲ್ದಾಣದಿಂದ ಹೊರಡುವ ಎಲ್ಲಾ ಸಾರಿಗೆ ಬಸ್ಗಳು ಎಂ.ಟಿ ರಸ್ತೆಯ ಮೂಲಕ ತೆರಳಿ, ಮುಂದೆ ಎಡಕ್ಕೆ ತಿರುಗಿ, ಪರ್ಲಡ್ಕ ಬೈಪಾಸ್ ಮೂಲಕ ತೆರಳಬೇಕು. ಕಬಕ-ಮಂಗಳೂರು ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್ಗಳು ಲಿನೆಟ್-ಬೊಳುವಾರು-ಪಡೀಲ್- ಕೊಟೆಚಾ ಹಾಲ್ ಕ್ರಾಸ್- ಸಾಲ್ಮರ- ಎಪಿಎಂಪಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು. ಉಪ್ಪಿನಂಗಡಿ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್ಗಳು-ಪಡೀಲ್- ಕೊಟೆಚಾ ಹಾಲ್ ಕ್ರಾಸ್- ಸಾಲ್ಮರ-ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು. ಸುಳ್ಯ – ಸಂಪ್ಯ – ಮಡಿಕೇರಿ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್ಗಳು ಅಶ್ವಿನಿ ಜಂಕ್ಷನ್- ದರ್ಬೆ- ಅರುಣಾ ಥಿಯೇಟರ್ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು.

ಅಟೋರಿಕ್ಷಾ ಸಂಚರಿಸುವ ಮಾರ್ಗದ ವಿವರ:-
ನೆಹರೂನಗರ – ಬೊಳುವಾರು ಕಡೆಯಿಂದ ಬರುವ ಆಟೋರಿಕ್ಷಾಗಳು ಮಯೂರ ಇನ್ ಲ್ಯಾಂಡ್ ಬಳಿ ಪ್ರಯಾಣಿಕರನ್ನು ಇಳಿಸಿ, ಉಲಾರ್ಂಡಿ ಕ್ರಾಸ್ ಮೂಲಕ ವಾಪಸ್ಸು ಸಂಚರಿಸಬೇಕು. ದರ್ಬೆ ಕಡೆಯಿಂದ ಬರುವ ಆಟೋರಿಕ್ಷಾಗಳು ಎಪಿಎಂಸಿ ರಸ್ತೆಯ ಮುಖಾಂತರ ನೆಲ್ಲಿಕಟ್ಟೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಿಂದ ಗಾಂಧಿಕಟ್ಟೆ ಕಡೆಗೆ ಬಂದು ಪ್ರಯಾಣಿಕರನ್ನು ಇಳಿಸಿ, ವಾಪಸ್ಸು ಮುಖ್ಯ ರಸ್ತೆಯಾಗಿ ದರ್ಬೆ ಕಡೆಗೆ ಸಂಚರಿಸಬೇಕು. ಪರ್ಲಡ್ಕ-ಬಪ್ಪಳಿಗೆ ಕಡೆಯಿಂದ ಬರುವ ಆಟೋರಿಕ್ಷಾಗಳು ಕಿಲ್ಲೆ ಮೈದಾನದ ಬಳಿ ಪ್ರಯಾಣಿಕರನ್ನು ಇಳಿಸಿ ವಾಪಾಸು ಸಂಚರಿಸಬೇಕು.

ವಾಹನದ ಪಾರ್ಕಿಂಗ್ ಸ್ಥಳದ ವಿವರ:-
ಉಪ್ಪಿನಂಗಡಿ, ಕೋಡಿಂಬಾಡಿ, ಬನ್ನೂರು ಮಾರ್ಗವಾಗಿ ಬರುವ ವಾಹನಗಳು ಎಪಿಎಂಸಿ ಆವರಣ, ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ ಮೈದಾನ, ಬಂಟರ ಭವನ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಸಂವ್ಯ, ಸುಳ್ಯ, ಬೆಟ್ಟಂಪಾಡಿ, ಪಾಣಾಜೆ, ಪÀರ್ಲಡ್ಡ., ಪುರುಷರಕಟ್ಟೆ ಮಾರ್ಗವಾಗಿ ಬರುವ ವಾಹನಗಳು ತೆಂಕಿಲ ಗೌಡ ಸಮುದಾಯ ಭವನ, ತೆಂಕಿಲ ವಿವೇಕಾನಂದ ಶಾಲಾ ಮೈದಾನ, ಕಿಲ್ಲೆ ಮೈದಾನ, ತೆಂಕಿಲ ಗೌಡ ಸಮುದಾಯ ಭವನದ ಎದುರುಗಡೆ ಇರುವ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು. ವಿಟ್ಲ, ಕಬಕ, ನೆಹರೂ ನಗರ ಮಾರ್ಗವಾಗಿ ಬರುವ ವಾಹನಗಳು ಜೈನ ಭವನದ ಪಾಕಿರ್ಂಗ್ ಜಾಗ, ಅಸ್ಮಿ ಲಾಡ್ಜ್ ಬಳಿ ಇರುವ ಖಾಲಿ ಜಾಗ, ತೆಂಕಿಲ ದರ್ಶನ್ ಹಾಲ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


Spread the love
Subscribe
Notify of

0 Comments
Inline Feedbacks
View all comments