ಪುತ್ತೂರು ಪೋಲಿಸರಿಂದ ಅಂತರ್‌‌‌ರಾಜ್ಯ ಕಳ್ಳನ ಬಂಧನ: ಸುಮಾರು 7 ಲಕ್ಷ ಮೌಲ್ಯದ ಸೊತ್ತು ವಶ

Spread the love

ಪುತ್ತೂರು ಪೋಲಿಸರಿಂದ ಅಂತರ್‌‌‌ರಾಜ್ಯ ಕಳ್ಳನ ಬಂಧನ: ಸುಮಾರು 7 ಲಕ್ಷ ಮೌಲ್ಯದ ಸೊತ್ತು ವಶ

ಮಂಗಳೂರು: ವಿವಿಧ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೋಲಿಸರು ಅಂತರಾಜ್ಯ ಕಳ್ಳನೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ಮೂಲದ ತಂಗರಾಜ್ (64) ಎಂದು ಗುರುತಿಸಲಾಗಿದೆ.

image004thangaraju-burgler-20160605-004 image003thangaraju-burgler-20160605-003 image002thangaraju-burgler-20160605-002 image001thangaraju-burgler-20160605-001 image005thangaraju-burgler-20160605-005 Tangharaju-interstate-thief-SP-Borase-05062016 (49) Tangharaju-interstate-thief-SP-Borase-05062016 (46) Tangharaju-interstate-thief-SP-Borase-05062016 (30)

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದಕ ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್ ರಾವ್ ಭೋರಸೆ ಅವರು 2016 ನೇ ಇಸವಿಯ ಜನವರಿ ತಿಂಗಳಿನಿಂದ ಮೇ ತಿಂಗಳ ವರೆಗೆ ಪುತ್ತೂರು ನಗರ ಪೊಲೀಸ್‌‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಕಾಲದಲ್ಲಿ ಯಾರೂ ಇಲ್ಲದ  ಬೀಗ ಹಾಕಿದ ಮನೆಗಳ ಹಿಂಬದಿ ಬಾಗಿಲನ್ನು ಒಡೆದು  ಬೆಲೆಬಾಳುವ ನಗದು, ಚಿನ್ನಾಭರಣ, ಬೆಳ್ಳಿಯ ಸೊತ್ತುಗಳನ್ನು  ಹಾಗೂ ಇತರ ಸೊತ್ತುಗಳನ್ನು ಕಳವು ನಡೆದ ಬಗ್ಗೆ ಸತತ ಘೋರಾಪರಾಧ ಪ್ರಕರಣಗಳು ದಾಖಲಾಗಿರುತ್ತದೆ. ಈ ಎಲ್ಲಾ ಪ್ರಕರಣಗಳ ತನಿಖೆಯನ್ನು  ಪುತ್ತೂರು ನಗರ ಪೊಲೀಸ್‌‌ ಠಾಣೆಯ ಪೊಲೀಸ್‌‌‌ ನಿರೀಕ್ಷಕರಾದ ಮಹೇಶ್‌‌‌ ಪ್ರಸಾದ್‌‌ರವರು ತನಿಖೆ ನಡೆಸುತ್ತಿದ್ದು, ಅವರು ಇಲಾಖಾ ಮೇಲಾಧಿಕಾರಿಗಳ ನಿರ್ದೇಶನದಂತೆ ಠಾಣಾ ಪೊಲೀಸ್‌‌‌ ಉಪನಿರೀಕ್ಷಕರಾದ ಅಬ್ದುಲ್‌‌‌ ಖಾದರ್‌‌‌‌ ಹಾಗೂ ಠಾಣಾ ಸಿಬ್ಬಂದಿಗಳಿಗೆ  ಸೂಕ್ತ ಮಾರ್ಗದರ್ಶನ ನೀಡಿ ಸತತ ಪತ್ತೆ ಕಾರ್ಯ ನಡೆಸಿರುತ್ತಾರೆ. ಈ ಪತ್ತೆ ಕಾರ್ಯದಲ್ಲಿ ಅವರು ಈ ರೀತಿಯ ಎಂ.ಒ ಕ್ರಿಮಿನಲ್‌‌‌ಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ,  ನಗರದಲ್ಲಿರುವ ಸಿ.ಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ ಹಲವು ಎಂ.ಒ.ಬಿ ಗಳನ್ನು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರ ಮಾಡಿ ತನಿಖೆ ನಡೆಸಿರುತ್ತಾರೆ. ಆದರೆ ಆರೋಪಿಗಳ ಸುಳಿವು ಲಭ್ಯವಾಗಿರಲಿಲ್ಲ.

ಮೇ 20 ರಂದು  ತನಿಖಾಧಿಕಾರಿಗಳು ತನಿಖೆ ಮುಂದುವರಿಸಿ  ಸಿಬ್ಬಂದಿಗಳನ್ನು  ಜೊತೆಯಲ್ಲಿ  ಕರೆದು ಕೊಂಡು  ಆರೋಪಿ ಹಾಗೂ ಸೊತ್ತು ಪತ್ತೆ ಬಗ್ಗೆ ಇಲಾಖಾ ಜೀಪಿನಲ್ಲಿ ಪುತ್ತೂರು ನಗರದಲ್ಲಿ  ಸಂಚರಿಸುತ್ತಾ ಇರುವ ಸಮಯದಲ್ಲಿ ಪುತ್ತೂರು ಬೈಪಾಸ್‌‌ ರಾಜ್ಯ ಹೆದ್ದಾರಿ ಶಿವನಗರ ಕ್ರಾಸ್‌‌‌ ಬಳಿ, ಆರೋಪಿ ಕೈಯಲ್ಲಿ ಪ್ಲಾಸ್ಟಿಕ್‌‌‌‌ ಚೀಲವನ್ನು ಹಿಡಿದುಕೊಂಡು ನಿಂತುಕೊಂಡಿದ್ದವನು ಇಲಾಖಾ ಜೀಪನ್ನು ಕಂಡು ಓಡಲು ಪ್ರಯತ್ನಿಸಿದವನನ್ನು ಸುತ್ತುವರಿದು ಹಿಡಿದು ವಿಚಾರಿಸಲಾಗಿ ಆರೋಪಿ 1) ಪುತ್ತೂರು ಪರ್ಲಡ್ಕ ಮಕ್ಕಳ ಮಂಟಪದ ಬಳಿ ಇರುವ ಮನೆಯಿಂದ , 2) ಪುತ್ತೂರು ಧರ್ಬೆಯಲ್ಲಿರುವ ಮನೆಯಿಂದ, 3) ಪುತ್ತೂರು ಬೊಳ್ವಾರು ಮನೆಯಿಂದ, 4)ಪುತ್ತೂರಿನ ಪರ್ಲಡ್ಕದಲ್ಲಿರುವ ಮನೆಯಿಂದ, 5) ಪುತ್ತೂರು  ಮುಕ್ರಂಪ್ಪಾಡಿ ಮನೆಯಿಂದ, 6) ಪುತ್ತೂರು ಧರ್ಭೆ ಯಲ್ಲಿರುವ  ಮನೆಯಿಂದ7) ಪುತ್ತೂರಿನ ತೆಂಕಿಲದಲ್ಲಿರುವ ವಾಸದ ಮನೆಯಿಂದ  ಶನಿವಾರದ ರಾತ್ರಿ ಕಾಲದಲ್ಲಿ ಮನೆಯಲ್ಲಿ ಯಾರೋ ಇಲ್ಲದಿರುವ ಸಮಯ ಬೀಗ ಹಾಕಿದ ಮನೆಯ ಹಿಂಬದಿ ಬಾಗಿಲನ್ನು,  ಬಾಗಿಲು ಒಡೆಯಲು ತಯಾರು ಮಾಡಿದ ಕಬ್ಬಿಣದ ರಾಡ್‌‌ನಿಂದ ಬಾಗಿಲು ಒಡೆದು ಮನೆಯ ಕಬಾಟಿನಲ್ಲಿದ್ದ  ನಗದು, ಚಿನ್ನಾಭರಣಗಳನ್ನು, ಬೆಳ್ಳಿಯ ಸೊತ್ತುಗಳು ಹಾಗೂ ಇತರ ಸೊತ್ತುಗಳನ್ನು ಕಳವು ಮಾಡಿರುತ್ತಾನೆ . ಆರೋಪಿಯ ವಶದಿಂದ ಕಳವು ಮಾಡುವ ಸಮಯ ಮನೆಯ ಬಾಗಿಲು ಒಡೆಯಲು ಉಪಯೋಗಿಸಿದ ಕಬ್ಬಿಣದ ರಾಡ್‌‌‌, ಟಾರ್ಚ್ ಲೈಟ್ ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಕೋರಿಕೆ ಪತ್ರದೊಂದಿಗೆ ಹಾಜರುಪಡಿಸಲಾಗಿದೆ.

ಈ ಎಲ್ಲಾ ಪ್ರಕರಣದಲ್ಲಿ ಆರೋಪಿಯಿಂದ ಕಳವಾದ ಸೊತ್ತುಗಳನ್ನು ಸ್ವಾಧೀನತೆಯ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ಆರೋಪಿಯನ್ನು ಪೊಲೀಸ್ ಅಬಿರಕ್ಷೆಗೆ ಒಪ್ಪಿಸಲು ಕೋರಿಕೊಂಡಾಗ ವರದಿಯನ್ನು ಪುರಸ್ಕರಿಸಿ ಮಾನ್ಯ ನ್ಯಾಯಾಧೀಶರಾದ  ಶ್ರೀ ನಾಗರಾಜ್ ರವರು ಆರೋಪಿಗೆ 14 ದಿನಗಳ ಕಾಲ ಪೊಲೀಸ್ ಅಬಿರಕ್ಷೆಗೆ ಒಪ್ಪಿಸಿರುತ್ತಾರೆ.

        ಈ ಕಾಲಾವಧಿಯಲ್ಲಿ  ಆರೋಪಿ ಮಾರಾಟ ಮಾಡಿರುವ ತಮಿಳುನಾಡು ರಾಜ್ಯದ ಈರೋಡ್,  ಕೇರಳ ರಾಜ್ಯದ ತಿರೂರ್, ಕ್ಯಾಲಿಕಟ್ , ಆತನ ವಿಳಾಸದ ಮನೆ ಹೊಸದುರ್ಗ,  ಮತ್ತು  ಮಂಗಳೂರು  ನಗರದಲ್ಲಿ  ಹಾಗೂ ಪುತ್ತೂರು ನಗರದಲ್ಲಿ ಬಚ್ಚಿಟ್ಟಿರುವ ಸ್ಥಳದಿಂದ,  ಆರೋಪಿ ಮಾರಾಟ ಮಾಡಿರುವ ಜ್ಯುವೆಲ್ಲರಿಯಿಂದ  ಹಾಗೂ ವ್ಯಕ್ತಿಗಳಿಂದ ಮತ್ತು  ಆತನ ವಶದಿಂದ    ಒಟ್ಟು 6,20,000/- ರೂ  ಮೌಲ್ಯದ 230.24 ಗ್ರಾಂ ಚಿನ್ನಾಭರಣ,  ಒಟ್ಟು 80,000/-ರೂ ಮೌಲ್ಯದ ಒಟ್ಟು: 2.285 ಕಿ.ಗ್ರಾಂ ಬೆಳ್ಳಿಯ ಸೊತ್ತುಗಳನ್ನು ಮತ್ತು 2 ಸೀರೆಗಳನ್ನು, ಒಟ್ಟು ಸುಮಾರು 7,00,000/- ರೂ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಯ ವಶದಿಂದ ಇನ್ನೂ ಬಾಕಿ ಉಳಿದ ಸೊತ್ತುಗಳ ಸ್ವಾಧೀನ ಪಡಿಸಲು ಇದ್ದು  ಈ ಬಗ್ಗೆ ಪ್ರಕರಣಗಳು ತನಿಖೆಯಲ್ಲಿರುತ್ತದೆ.

ಈ ಆರೋಪಿಯ ಮೇಲೆ ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ -28,  ಕುಶಾಲನಗರದಲ್ಲಿ – 01, ಕೇರಳ ರಾಜ್ಯದ ಪಾಲಕ್ಕಾಡ್‌‌ನಲ್ಲಿ – 10 ಪ್ರಕರಣಗಳಲ್ಲಿ , ಹಾಗೂ ಪುತ್ತೂರು ನಗರದಲ್ಲಿ – 7 ಪ್ರಕರಣಗಳಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗಿರತ್ತವೆ. ಆರೋಪಿ ಮೇಲೆ 1988ರಲ್ಲಿ ಚೆನೈ ಕೇಂದ್ರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು.


Spread the love