ಪುತ್ತೂರು: ವೃದ್ಧ ದಂಪತಿಯನ್ನು ಬಲಾತ್ಕಾರವಾಗಿ ಹೊರ ಹಾಕಿ ಮನೆ ಕೆಡವಿದ ಪುತ್ರರು ಮತ್ತು ಪುತ್ರಿ

Spread the love

ಪುತ್ತೂರು: ವೃದ್ಧ ದಂಪತಿಯನ್ನು ಬಲಾತ್ಕಾರವಾಗಿ ಹೊರ ಹಾಕಿ ಮನೆ ಕೆಡವಿದ ಪುತ್ರರು ಮತ್ತು ಪುತ್ರಿ

ಪುತ್ತೂರು: ಇಬ್ಬರು ಪುತ್ರರು ಮತ್ತು ಒರ್ವ ಪುತ್ರಿಯಿಂದ ವೃದ್ಧ ದಂಪತಿಯನ್ನು ಬಲಾತ್ಕಾರವಾಗಿ ಹೊರ ಹಾಕಿ ಹಿಟಾಚಿಯಿಂದ ಮನೆಯನ್ನು ಕೆಡವಿದ ಘಟನೆ ಪುತ್ತೂರು ತಾಲೂಕಿನ ಕೆದಿಲ ಗ್ರಾಮದ ಬೀಟಿಗೆಯಲ್ಲಿ ಭಾನುವಾರ ಸಂಭವಿಸಿದೆ.

ಕೆದಿಲ ಗ್ರಾಮದ ಬೀಟಿಗೆ ಆರ್.ಕೆ. ಮಂಝಿಲ್ ನಿವಾಸಿ ಮಹಮ್ಮದ್ (75ವ) ಮತ್ತು ಅವರ ಪತ್ನಿ ಖತಿಜಮ್ಮ(72ವ)ರವರು ಮನೆಯಿಂದ ಹೊರ ನೂಕಲ್ಪಟ್ಟವರು. ಅವರಿಬ್ಬರಿಗೂ ಗಾಯವಾಗಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೃದ್ದ ದಂಪತಿಗಳು ಬೀಟಿಗೆ ಊರಿನಲ್ಲಿ ತನ್ನ 22 ಸೆಂಟ್ಸ್ ಜಾಗದಲ್ಲಿ ಮನೆ ಮಾಡಿ ವಾಸ್ತವ್ಯ ಮಾಡಿಕೊಂಡಿದ್ದು ನಾಲ್ವರು ಪುತ್ರುರ ಮತ್ತು ಐವರು ಪುತ್ರಿಯರು ವಿವಾಹವಾಗಿದ್ದ ಬೇರೆ ಬೇರೆ ಕಡೆ ವಾಸ್ತವ್ಯ ಹೊಂದಿದ್ದಾರೆ. ಪ್ರಸ್ತುತ ಬೀಟಿಗೆ ಮನೆಯಲ್ಲಿ ಮಹಮ್ಮದ್ ಮತ್ತು ಖತಿಜಮ್ಮ ಮಾತ್ರ ವಾಸ್ತವ್ಯ ಹೊಂದಿದ್ದು, ಮಹಮ್ಮದ್ ಅವರ 2ನೇ ಪುತ್ರ ಇಸ್ಮಾಯಿಲ್ನ ಮಗಳ ವಿವಾಹ ಸಮಾರಂಭಕ್ಕೆಂದು ಪುತ್ರನೊಂದಿಗೆ ಏ.6ಕ್ಕೆ ಆತ ವಾಸ್ತವ್ಯ ಹೊಂದಿರುವ ಆತನ ಮಾವನ ಮನೆ ನಂದಿಲಕ್ಕೆ ಅವನ ಜೊತೆ ಹೋಗಿದ್ದರು. ಮೇ 10ಕ್ಕೆ ಬೀಟಿಗೆ ಮನೆಗೆ ಹಿಂದಿರುಗಿ ವೃದ್ಧರಾದ ಇಬ್ಬರುನ್ನು ಕೊನೆಯ ತನಕ ನೋಡಲೆಂದು ತನ್ನ ಪುತ್ರ ಇಸ್ಮಾಯಿಲ್ನಲ್ಲಿ ಹೇಳಿಕೊಂಡಂತೆ ಆತ ನನ್ನನ್ನು ಮನೆಯಲ್ಲಿ ಬಿಟ್ಟು ಸಂಜೆ ಬರುವುದಾಗಿ ಹೇಳಿ ಹೋದ ಬಳಿಕ ನನ್ನ 3ನೇ ಪುತ್ರ ಬುಡೋಳಿಯಲ್ಲಿರುವ ತಾಜುದ್ದೀನ್, ಆತನ ಪತ್ನಿ ಯಾಸೀರಾ, 4ನೇ ಪುತ್ರ ಕಬಕ ನಿವಾಸಿ ಸಂಶುದ್ದೀನ್, ಆತನ ಪತ್ನಿ ಫಾತಿಮಾ ಹಾಗೂ ಪುತ್ರಿಯರ ಪೈಕಿ 2ನೇ ಪುತ್ರಿ ಐಸಮ್ಮ ಮತ್ತು ಆಕೆಯ ಗಂಡ ಮಹಮ್ಮದ್, ಅವರ ಪುತ್ರ ಹಾರಿಸ್ ಅವರು 2 ಕಾರು ಮತ್ತು ಬೈಕ್ನಲ್ಲಿ ಏಕಾಏಕಿ ಬಂದು ಯವುದೇ ಸೂಚನೆ ನೀಡದೆ ಹಿಟಾಚಿಯಿಂದ ನಮ್ಮ ಮನೆಯನ್ನು ಕೆಡವಲು ಮುಂದಾದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ವೇಳೆ ಮಹಮ್ಮದ್ ಮತ್ತು ಖತಿಜಮ್ಮ ಮನೆಯಿಂದ ಹೊರಗಡೆ ಬಾರದೆ ಇದ್ದಾಗ ಇಬ್ಬರನ್ನು ಬಲತ್ಕಾರವಾಗಿ ಎಳೆದು ಕೊಂಡು ಹೋಗಿ ತೆಂಗಿನ ಮರದ ಬುಡದಲ್ಲಿ ಕುತುಕೊಳಿಸಿದ್ದಾರೆ. ಬಳಿಕ ಮನೆಯನ್ನು ಹಿಟಾಚಿ ಮೂಲಕ ಕೆಡವಿದ್ದಾರೆ. ಘಟನೆಯ ಕುರಿತು ಮಹಮ್ಮದ್ ತನ್ನ 2ನೇ ಪುತ್ರ ಇಸ್ಮಾಯಿಲ್ಗೆ ಮಾಹಿತಿ ನೀಡಿದಾಗ ಆತ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸ್ ಸ್ಥಳಕ್ಕೆ ಬಂದು ಹಿಟಾಚಿ ಕೆಲಸವನ್ನು ನಿಲ್ಲಿಸಿದ್ದಾರೆ.

ವೃದ್ಧರಾದ ನಮ್ಮನ್ನು ಬಲತ್ಕಾರವಾಗಿ ಎಳೆದು ಹೊರ ಹಾಕಿದ್ದರಿಂದ ನಮಗೆ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇವೆ ಎಂದು ಮಹಮ್ಮದ್ ಅವರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪುತ್ತೂರು ಪೊಲೀಸರು ಗಾಯಾಳುವಿನಿಂದ ಮಾಹಿತಿ ಪಡೆದಿದ್ದಾರೆ. ಜಾಗದ ವಿಚಾರಕ್ಕೆ ಸಂಬಂಧಿಸಿ ನನ್ನ ಸಹೋದರರು ಈ ತರ ಮಾಡಿದ್ದಾರೆಂದು ಇಸ್ಮಾಯಿಲ್ ಅವರು ಆರೋಪಿಸಿದ್ದಾರೆ.


Spread the love