Home Mangalorean News Kannada News ಪುಲ್ವಾಮ ಉಗ್ರರ ದಾಳಿಗೆ ಉಡುಪಿ ಕೆಥೊಲಿಕ್ ಸಭಾ ಖಂಡನೆ

ಪುಲ್ವಾಮ ಉಗ್ರರ ದಾಳಿಗೆ ಉಡುಪಿ ಕೆಥೊಲಿಕ್ ಸಭಾ ಖಂಡನೆ

Spread the love
RedditLinkedinYoutubeEmailFacebook MessengerTelegramWhatsapp

ಪುಲ್ವಾಮ ಉಗ್ರರ ದಾಳಿಗೆ ಉಡುಪಿ ಕೆಥೊಲಿಕ್ ಸಭಾ ಖಂಡನೆ

ಉಡುಪಿ : ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಸಿಆರ್ ಪಿಎಫ್ ಯೋಧರ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ತೀವ್ರವಾಗಿ ಖಂಡಿಸಿದ್ದಾರೆ.

ಜಮ್ಮು ಕಾಶ್ಮೀರ ಕಣಿವೆಯಲ್ಲಿ ಉಗ್ರರು ನಡೆಸಿದ ಮತ್ತೊಂದು ದೊಡ್ಡ  ದಾಳಿ ಇದಾಗಿದ್ದು . ಪಾಪಿ ಪಾಕಿಸ್ತಾನದ ರಕ್ತದಾಹಕ್ಕೆ ನಮ್ಮ  ಸಿಆರ್ಪಿಎಫ್ ಯೋಧರು ಬಲಿಯಾಗಿದ್ದು ನಮ್ಮ ದೇಶಕ್ಕೆ ತುಂಬಲಾರದ ನಷ್ಟ.

ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಾಳಿಕೋರ ಆದಿಲ್ ಆಹ್ಮದನ  ಈ ಪೈಶಾಚಿಕ ಕೃತ್ಯದಲ್ಲಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿ ಇನ್ನು ಬಹಳಷ್ಟು ಯೋಧರು ನರಳಾಟದಲ್ಲಿ ಇರುವುದು ನಮಗೆ ಸಹಿಸಲಾಗದ ದುಃಖವಾಗಿದೆ ಈ ಘೋರ ಕೃತ್ಯಕ್ಕೆ ಪ್ರತೀಕಾರ ಆಗಲೇಬೇಕು . ನಮ್ಮ ಯೋಧರ ತ್ಯಾಗ ವ್ಯರ್ಥ ಆಗಬಾರದು. ಇಂತಹ ಕೃತ್ಯ ಎಸಗಿದ ಪಾಪಿಗಳನ್ನು ನಾಶ ಮಾಡಿ ನಮ್ಮ ಸೈನಿಕರ ಬಲಿದಾನಕ್ಕೆ ಪ್ರತೀಕಾರ ನೀಡುವ ಕೆಲಸವನ್ನು ಕೇಂದ್ರ ಸರಕಾರ ಮಾಡಬೇಕಾಗಿದೆ.  ಘಟನೆಯಲ್ಲಿ ಹುತಾತ್ಮರಾದ ಯೋಧಕ ಕುಟುಂಬದ ದುಃಖದಲ್ಲಿ ನಾವೆಲ್ಲರೂ ಭಾಗಿಗಳು. ಗಾಯಗೊಂಡವರು ಚೇತರಿಸಿಕೊಳ್ಳಲಿ ಎಂದು  ಕೆಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಪ್ರಕಣೆಯಲ್ಲಿ ತಿಳಿಸಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version