Home Mangalorean News Kannada News ಪೆರ್ಡೂರು ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ನಡೆದಿದೆ; ವಿನಯ್ ಕುಮಾರ್ ಸೊರಕೆ

ಪೆರ್ಡೂರು ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ನಡೆದಿದೆ; ವಿನಯ್ ಕುಮಾರ್ ಸೊರಕೆ

Spread the love

ಪೆರ್ಡೂರು ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ನಡೆದಿದೆ; ವಿನಯ್ ಕುಮಾರ್ ಸೊರಕೆ

ಉಡುಪಿ: ಕಾಪು ಕ್ಷೇತ್ರ ವ್ಯಾಪ್ತಿಯ ಪೆರ್ಡೂರು ಈ ಹಿಂದೆ ಸಾಕಷ್ಟು ಹಿಂದುಳಿದ ಪ್ರದೇಶವಾಗಿತ್ತು. ಆದರೆ ಇದೀಗ ಈ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಮುಂದುವರಿಯಬೇಕಾದರೆ ಇಲ್ಲಿನ ಜನತೆಯ ಸಹಾಕರ ಬೇಕು ಎಂದು ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿದರು.

ಪೆರ್ಡೂರು ಮಾಂಗಲ್ಯ ಸಭಾಭವನದಲ್ಲಿ ನಡೆದ ಕಾಪು ಕ್ಷೇತ್ರ ವ್ಯಾಪ್ತಿಯ ಪೆರ್ಡೂರು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಪೆರ್ಡೂರು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶ್ರೀಪಾದ್ ರೈ ಪಳಜೆ, ಜಿ. ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಮಾಜಿ ಮಂಡಲ ಪ್ರಧಾನರಾದ ಶಾಂತಾರಾಮ ಸೂಡ, ಕಾಪು ಕ್ಷೇತ್ರದ ಉಸ್ತುವಾರಿ ಕಳ್ಳಿಗೆ ತಾರಾನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಸುಧೀರ್ ಹೆಗ್ಡೆ, ಶ್ರೀಧರ ಶೆಟ್ಟಿ ಕುತ್ಯಾರು ಬೀಡು, ಶಿವರಾಮ ಶೆಟ್ಟಿ, ರಮೇಶ್ ಪೂಜಾರಿ, ವಿಶ್ವಾಸ್ ಅಮೀನ್, ಸಂತೋಷ್ ಕುಲಾಲ್ ಮೊದಲಾವರು ಉಪಸ್ಥಿತರಿದ್ದರು.


Spread the love

Exit mobile version