ಪೇಜಾವರ ಸ್ವಾಮೀಗಳ ಬಗ್ಗೆ ತಪ್ಪು ಹೇಳಿಕೆಗಳು ಖಂಡನೀಯ – ಶರಣ್ ಪಂಪ್ವೆಲ್

Spread the love

ಪೇಜಾವರ ಸ್ವಾಮೀಗಳ ಬಗ್ಗೆ ತಪ್ಪು ಹೇಳಿಕೆಗಳು ಖಂಡನೀಯ – ಶರಣ್ ಪಂಪ್ವೆಲ್

ಮಂಗಳೂರು: ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿಯವರ ಸಂವಿಧಾನ ಬದ್ಧತೆ ಪ್ರಶ್ನಾತೀತ ಮತ್ತು ಅವರ ಬಗ್ಗೆ ತಪ್ಪು ಹೇಳಿಕೆಗಳು ಖಂಡನೀಯ ಎಂದು ವಿಶ್ವ ಹಿಂದೂ ಪರಿಷದ್ ಎಂದು ಹೇಳಿದೆ.

ಪೇಜಾವರ ಸ್ವಾಮೀಜಿ ಅವರು ಸಂವಿಧಾನಕ್ಕೆ ಬದ್ಧರಾಗಿದ್ದು ಹಿಂದು ಸಮಾಜದ ಸರ್ವರಿಗೂ ಸಮಾನ ಗೌರವ ಕೊಡುತ್ತ ಬಂದಿದ್ದು ವಿಶೇಷವಾಗಿ ದಲಿತರನ್ನು ಕೂಡ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿ ನೋಡುತ್ತಿದ್ದಾರೆ .ರಾಜ್ಯಪಾಲರನ್ನು ಭೇಟಿಯಾದಾಗ ವಿಶ್ವ ಹಿಂದೂ ಪರಿಷದ್ ಪದಾಧಿಕಾರಿಗಳು ಜೊತೆ ಗೆ ಇದ್ದೆವು .ಆ ಸಂದರ್ಭ ಸಂವಿಧಾನವನ್ನು ಬದಲಾಯಿಸವ ಯಾವ ಹೇಳಿಕೆ ಹೇಳಿರುವುದಿಲ್ಲ. ಆದರೂ ಕೆಲವೊಂದು ಸಂಘಟನೆಗಳು ಸ್ವಾಮಿಜಿಯವರ ಹೇಳಿಕೆ ಯನ್ನು ಅರ್ಥ ಮಾಡಿಕೊಳ್ಳದೆ ಶ್ರೀ ಗಳ ಬಗ್ಗೆ ಸುಳ್ಳು ಸುದ್ದಿ ಹೇಳಿಕೆ ನೀಡುತ್ತಿರುವುದನ್ನು ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ .

ಪೇಜಾವರ ಸ್ವಾಮೀಜಿಯವರ ಬಗ್ಗೆ ತಪ್ಪು ಹೇಳಿಕೆ ನೀಡಿದ್ದನ್ನು ಆಯಾ ಸಂಘಟನೆಯವರು ಹಿಂದೆ ತೆಗೆದುಕೊಳ್ಳಬೇಕು ಮತ್ತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ತು ಸರಕಾರ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments