ಪೇಜಾವರ ಸ್ವಾಮೀಜಿ ಮಠಕ್ಕೆ ಸ್ಥಳಾಂತರ – ಸಿದ್ದತೆ ಪೂರ್ಣ
ಉಡುಪಿ: ಅನಾರೋಗ್ಯಕ್ಕಿಡಾಗಿ ಮೆದುಳು ನಿಷ್ಕ್ರೀಯವಾಗಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರನ್ನು ಅವರ ಕೊನೆಯ ಆಸೆಯಂತೆ ಕೆ ಎಮ್ ಸಿ ಆಸ್ಪತ್ರೆಯಿಂದ ಪೇಜಾವರ ಮಠಕ್ಕೆ ಕೊಂಡೊಯ್ಯಲು ಎಲ್ಲಾ ರೀತಿಯ ವ್ಯವಸ್ಥೆಗಳು ಪೂರ್ಣಗೊಂಡಿವೆ.
ಈಗಾಗಲೇ ಪೇಜಾವರ ಸ್ವಾಮೀಜಿಗಳನ್ನು ವಿಶೇಷ ಅಂಬುಲೆನ್ಸ್ ಮೂಲಕ ಕೊಂಡೊಯ್ಯಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ನೇತೃತ್ವದಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಸುಮಾರು 700 ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಪೇಜಾವರ ಸ್ವಾಮೀಜಿಗಳ ಆರೋಗ್ಯ ಕ್ಷೀಣವಾಗುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಆದುದರಿಂದ ಅವರನ್ನು ಭಾನುವಾರ ಉಡುಪಿಯ ಪೇಜಾವರ ಮಠಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶನಿವಾರ ತಿಳಿಸಿದ್ದರು.
ಪೇಜಾವರ ಸ್ವಾಮೀಜಿಯ ಅಂತಿಮ ಆಸೆ ಕೂಡ ಅದೇ ಆಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರನ್ನೊಳಗೊಂಡ ವೆಂಟಿಲೇಟರ್ ವ್ಯವಸ್ಥೆಯನ್ನು ಮಠದಲ್ಲೇ ಮಾಡಲಾಗುತ್ತದೆ.
ಮಣಿಪಾಲ ಕೆ ಎಮ್ ಸಿ ಆಸ್ಪತ್ರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ಉ, ಡುಪಿ ಶಾಸಕ ರಘುಪತಿ ಭಟ್, ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಆಗಮಿಸಿದ್ದಾರೆ.