ಪೇದೆಗೆ ಸಮವಸ್ತ್ರ ಬಿಚ್ಚಿ ನಿಲ್ಲುವಂತೆ ಅದೇಶಿಸಿದ ಜಡ್ಜ್ ವರ್ಗಾವಣೆ
ಆಗ್ರಾ: ಉತ್ತರಪ್ರದೇಶದ ಆಗ್ರಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಪೇದೆಗೆ ಸಮವಸ್ತ್ರ ಬಿಚ್ಚಿ ನಿಲ್ಲುವಂತೆ ಅದೇಶಿಸಿದ ಹಿನ್ನೆಲೆಯಲ್ಲಿ ವರ್ಗಾವಣೆಗೊಳಿಸಲಾಗಿದೆ.
ಶನಿವಾರ ಈ ಘಟನೆ ನಡೆದಿದ್ದು, ಪೊಲೀಸ್ ಪೇದೆ ಹಾಗೂ ವಾಹನ ಚಾಲಕ ಘುರೇ ಲಾಲ್ಗೆ ಈ ಶಿಕ್ಷೆ ವಿಧಿಸಿದ್ದರು. ಇದರಿಂದ ಬೇಸತ್ತ ಲಾಲ್ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ವೇಳೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಇದನ್ನು ಖಂಡಿಸಿದ್ದರಿಂದ ನ್ಯಾಯಾಧೀಶರನ್ನು ವರ್ಗಾವಣೆಗೊಳಿಸಿ ಉತ್ತರ ಪ್ರದೇಶ ಹೈಕೋರ್ಟ್ ರಿಜಿಸ್ಟ್ರಾರ್ ಆದೇಶಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಮುಖ್ಯ ನ್ಯಾಯಮೂರ್ತಿ ದರ್ಜೆಯ ನ್ಯಾಯಮೂರ್ತಿಗಳು ಈ ರೀತಿ ಶಿಕ್ಷೆ ನೀಡಲು ಕಾರಣ ಹುಡುಕಿದರೆ, ಈ ನ್ಯಾಯಮೂರ್ತಿಗಳು ಕೋರ್ಟ್ಗೆ ಆಗಮಿಸುವ ವೇಳೆ, ಸುಮಾರು ಎರಡು ಕಿಮೀ ದೂರ ದಾರಿ ಬಿಟ್ಟಿರಲಿಲ್ಲ. ಆದ್ದರಿಂದ, ಪೇದೆಯನ್ನು ಕಚೇರಿಗೆ ಕರೆಸಿ ಯೂನಿಫಾರ್ಮ್ ಬಿಚ್ಚುವಂತೆ ಹೇಳಿದ್ದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ಸಿಗುತ್ತಿದ್ದಂತೆ, ಪ್ರತಿಯೊಬ್ಬರಿಗೂ ತಮ್ಮದೇಯಾದ ಮರ್ಯಾದೆ ಇರುತ್ತದೆ. ಅದನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದಿದ್ದಾರೆ.